ನವದೆಹಲಿ :  LIC IPO Open : ಭಾರತೀಯ ಜೀವ ವಿಮಾ ನಿಗಮದ ಇನಿಶಿಯಲ್ ಪಬ್ಲಿಕ್ ಆಫರಿಂಗ್  ಅಂದರೆ ಐಪಿಒ ಅನ್ನು ಹೂಡಿಕೆದಾರರಿಗೆ ಬುಧವಾರ ತೆರೆಯಲಾಗಿದೆ. ಎಲ್ಐಸಿ  3.5 ರ ಪ್ರತಿಶತದಷ್ಟು ಶೇರುಗಳನ್ನು ಮಾರಾಟ ಮಾಡಿ ಸುಮಾರು 21,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಎಲ್‌ಐಸಿಯ ಐಪಿಒ ಮೇ 9 ರಂದು ಮುಕ್ತಾಯವಾಗಲಿದೆ.


COMMERCIAL BREAK
SCROLL TO CONTINUE READING

902-949 ರೂ ಪ್ರೈಸ್ ಬ್ಯಾಂಡ್ : 
LIC IPOಗಾಗಿ  ಪ್ರೈಸ್ ಬ್ಯಾಂಡ್  ಅನ್ನು  902-949  ರೂ. ಎಂದು ನಿಗದಿ ಪಡಿಸಿದೆ. ಇದರಲ್ಲಿ, ಕೆಲವು ಷೇರುಗಳನ್ನು ಅಸ್ತಿತ್ವದಲ್ಲಿರುವ ಪಾಲಿಸಿದಾರರಿಗೆ ಮತ್ತು ಎಲ್ಐಸಿಯ ಉದ್ಯೋಗಿಗಳಿಗೆ ಕಾಯ್ದಿರಿಸಲಾಗಿದೆ. ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳಿಗೆ ಪ್ರತಿ ಷೇರಿಗೆ  45 ರೂ.  ಮತ್ತು ಪಾಲಿಸಿದಾರರಿಗೆ  60 ರೂ. ರಿಯಾಯಿತಿ ನೀಡಲಾಗುತ್ತದೆ.


ಇದನ್ನೂ ಓದಿ :  ಐಆರ್‌ಸಿಟಿಸಿಯಿಂದ ಚಾರ್‌ಧಾಮ್ ಯಾತ್ರಾ ಪ್ಯಾಕೇಜ್ ಬಿಡುಗಡೆ: ಇಲ್ಲಿದೆ ಡೀಟೇಲ್ಸ್


ಆಂಕರ್ ಹೂಡಿಕೆದಾರರಿಂದ 5,627 ಕೋಟಿ ಸಂಗ್ರಹ :
22.13 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟಕ್ಕೆ ನೀಡಲಾಗುವುದು. ಎಲ್‌ಐಸಿ ಷೇರುಗಳು ಮೇ 17 ರಂದು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವ ಸಾಧ್ಯತೆ ಇದೆ. ಎಲ್ಐಸಿ ನೀಡಿರುವ ಮಾಹಿತಿಯಲ್ಲಿ ಆಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹವಾಗಿದೆ. ಪ್ರತಿ ಇಕ್ವಿಟಿ ಷೇರಿಗೆ  949  ರೂ. ದರದಲ್ಲಿ ಆಂಕರ್ ಹೂಡಿಕೆದಾರರಿಗೆ 5.92 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ.


6 ಲಕ್ಷ ಕೋಟಿ ರೂ :
ಎಲ್ಐಸಿ ಐಪಿಒ ಮೌಲ್ಯ 6 ಲಕ್ಷ ಕೋಟಿ ರೂ. ಆಗಿದೆ. ಈ ಹಿಂದೆ ಶೇ 5ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 30 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯನ್ನು ಸರ್ಕಾರ ಹೊಂದಿತ್ತು. ಆದರೆ ಈಗ ಶೇ.3.5ರಷ್ಟು ಷೇರುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. 


ಇದನ್ನೂ ಓದಿ :  7th Pay Commission Latest News : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ ಹೊರ ಬಿತ್ತುಅಂಕಿ ಅಂಶ


ನೌಕರರು ಮತ್ತು ಪಾಲಿಸಿದಾರರ ಮೀಸಲಾತಿ ನಂತರ ಉಳಿದ ಷೇರುಗಳಲ್ಲಿ 50% QIB ಗಳಿಗೆ, 35% ಚಿಲ್ಲರೆ ಹೂಡಿಕೆದಾರರಿಗೆ ಮತ್ತು 15% NII ಗಳಿಗೆ.  mಮಾರಾಟ ಮಾಡಲಾಗುವುದು. ಎಲ್‌ಎಐಸಿಯ ಐಪಿಒದ ಒಟ್ಟು ವಿತರಣೆಯ ಗಾತ್ರವು 22.13 ಕೋಟಿ ಷೇರುಗಳಾಗಿರುತ್ತದೆ. ಇದರಲ್ಲಿ 10 ಪ್ರತಿಶತ ಅಂದರೆ 2.21 ಕೋಟಿ ಷೇರುಗಳು ಪಾಲಿಸಿದಾರರಿಗೆ ಮೀಸಲಿಡಲಾಗುವುದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.