LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ₹75 ಸಾವಿರ ಪಿಂಚಣಿ ಪಡೆಯಿರಿ

ಎಲ್‌ಐಸಿ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಭಾರಿ ಮೊತ್ತದ ಲಾಭ ಪಡೆಯಬಹುದು. ಯಾವುದು ಈ ಯೋಜನೆ? ಇದರಲ್ಲಿ ಅಹ್ಷ್ಟು ಲಾಭ ಸಿಗುತ್ತೆ? ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

Written by - Channabasava A Kashinakunti | Last Updated : Apr 20, 2022, 04:50 PM IST
  • ನಿವೃತ್ತಿಯ ನಂತರ ಆರ್ಥಿಕವಾಗಿ ಸಬಲರಾಗುವುದು ಹೇಗೆ?
  • ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಿರಿ
  • ನೀವು ವಾರ್ಷಿಕವಾಗಿ 74,300 ರೂ. ಪಿಂಚಣಿ ಪಡೆಯಬಹುದು.
LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ₹75 ಸಾವಿರ ಪಿಂಚಣಿ ಪಡೆಯಿರಿ title=

ನವದೆಹಲಿ : ಪ್ರತಿ ತಿಂಗಳು ಸಂಬಳ ಪಡೆಯುವವರ ಆತಂಕವೆಂದರೆ ನಿವೃತ್ತಿಯ ನಂತರ, ಆರ್ಥಿಕವಾಗಿ ಸಬಲರಾಗುವುದು ಹೇಗೆ? ಇದಕ್ಕಾಗಿ, ಇವರು ಸಂಬಳ ಪಡೆಯುವ ಸಮಯದಲ್ಲಿ ಕೆಲವು ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಅನೇಕ ಬಾರಿ, ಉತ್ತಮ ಯೋಜನೆ ಮಾಹಿತಿಯ ಇಲ್ಲದ ಕರಣ, ಉತ್ತಮ ಆದಾಯ ಅಥವಾ ಉತ್ತಮ ಲಾಭ ಪಡೆಯಲಾಗುವುದಿಲ್ಲ. ಆದರೆ ಇಂದು ನಾವು ನಿಮಗೆ ಉತ್ತಮ ಆದಾಯ ಅಥವಾ ಉತ್ತಮ ಲಾಭ ಸಿಗುವ ಯೋಜನೆಯ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ, ಇದು ಎಲ್‌ಐಸಿ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಭಾರಿ ಮೊತ್ತದ ಲಾಭ ಪಡೆಯಬಹುದು. ಯಾವುದು ಈ ಯೋಜನೆ? ಇದರಲ್ಲಿ ಅಹ್ಷ್ಟು ಲಾಭ ಸಿಗುತ್ತೆ? ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಈ ಯೋಜನೆ ಏನು ಬಗ್ಗೆ ಸಂಪೂರ್ಣ ಮಾಹಿತಿ 

ಭಾರತೀಯ ಜೀವ ವಿಮಾ ನಿಗಮದ ಒಂದು ಉತ್ತಮ ಯೋಜನೆ ಇದಾಗಿದೆ. ಎಲ್‌ಐಸಿಯ ಜೀವನ ಶಾಂತಿ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ, ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಹುದು ಮತ್ತು ನಂತರ ನೀವು ಜೀವನಪೂರ್ತಿ ಪಿಂಚಣಿ ಪಡೆಯಬಹುದು. ಮಾಹಿತಿಯ ಪ್ರಕಾರ, ನೀವು ತಕ್ಷಣ ಪಿಂಚಣಿ ಪಡೆಯಲು ಆರಂಭಿಸಬಹುದು ಅಥವಾ ನಿಮ್ಮ ವಯಸ್ಸು ಮತ್ತು ಅಗತ್ಯಕ್ಕೆ ಅನುಗುಣವಾಗಿ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಪಡೆಯಲು ಆರಂಭಿಸಬಹುದು.

ಇದನ್ನೂ ಓದಿ : PM Kisan ರೈತರು ಪ್ರತಿ ವರ್ಷ ₹6000 ಜೊತೆಗೆ ₹36000 ಕೂಡ ಸಿಗಲಿದೆ : ಹೇಗೆ ಇಲ್ಲಿದೆ

ಹೂಡಿಕೆಯಲ್ಲಿ ಎಷ್ಟು ಲಾಭ?

ಮಾಧ್ಯಮ ವರದಿಗಳ ಪ್ರಕಾರ, ನೀವು 45 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನೀವು ವಾರ್ಷಿಕವಾಗಿ 74,300 ರೂಪಾಯಿಗಳ ಪಿಂಚಣಿಯನ್ನು ಪಡೆಯಲು ಪ್ರಾರಂಭಿಸುತ್ತೀರಿ. ನೀವು 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಆರಂಭಿಸಿದರೆ, ಅದರ ಮೊತ್ತವು ಹೆಚ್ಚಾಗುತ್ತದೆ, ಆದರೂ ಕೆಲವು ಷರತ್ತುಗಳಿವೆ. ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಆದಾಯವನ್ನು ಪಡೆಯಬಹುದು.

ಎಲ್ಐಸಿಯ ಜೀವನ್ ಶಾಂತಿ ಸಮಗ್ರ ವರ್ಷಾಶನ ಯೋಜನೆಯಾಗಿದ್ದು, ಇದರಲ್ಲಿ ವ್ಯಕ್ತಿ ಮತ್ತು ಆತನ ಕುಟುಂಬವೂ ಪ್ರಯೋಜನಗಳನ್ನು ಪಡೆಯುತ್ತದೆ. ನೀವು ಯಾವುದೇ ಎಲ್‌ಐಸಿ ಏಜೆಂಟ್‌ನಿಂದ ಎಲ್‌ಐಸಿಯ ಜೀವನ ಶಾಂತಿ ಯೋಜನೆಯನ್ನು ಖರೀದಿಸಬಹುದು. ಅಥವಾ ನಿಮ್ಮ ಹತ್ತಿರದ ಎಲ್‌ಐಸಿ ಕಚೇರಿಗೆ ಹೋಗುವ ಮೂಲಕ ನೀವು ಅದನ್ನು ಸಕ್ರಿಯಗೊಳಿಸಬಹುದು. ನೀವು ಬಯಸಿದರೆ, ನೀವು ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಕೂಡ ಖರೀದಿಸಬಹುದು.

ವಯಸ್ಸು 30 ರಿಂದ 85 ವರ್ಷಗಳು

ಯಾವುದೇ ಭಾರತೀಯ ವ್ಯಕ್ತಿಯು ಎಲ್‌ಐಸಿಯ ಈ ಪಾಲಿಸಿಯನ್ನು ಖರೀದಿಸಬಹುದು. ನಿಮ್ಮ ವಯಸ್ಸು 30 ವರ್ಷಗಳಿಗಿಂತ ಹೆಚ್ಚು ಮತ್ತು 85 ವರ್ಷಕ್ಕಿಂತ ಕಡಿಮೆ ಇರಬೇಕು. ಈ ಪಾಲಿಸಿಗೆ ವಿರುದ್ಧವಾಗಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಪಾಲಿಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ಅದನ್ನು ಮುಂದುವರಿಸಲು ನೀವು ಬಯಸದಿದ್ದರೆ, ನೀವು 3 ತಿಂಗಳ ನಂತರ ಯಾವಾಗ ಬೇಕಾದರೂ ಪಡೆಯಬಹುದು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಗುಡ್ ನ್ಯೂಸ್! ಈಗ DA ಶೇ.13ರಷ್ಟು ಹೆಚ್ಚಳ, ಕೈಗೆ ಸಿಗಲಿದೆ 3 ತಿಂಗಳ ಬಾಕಿ ಮೊತ್ತ

ಪಾಲಿಸಿಯಿಂದ ನಿವೃತ್ತಿ ಪಡೆಯಲು ಯಾವುದೇ ವೈದ್ಯಕೀಯ ದಾಖಲೆ ಅಗತ್ಯವಿಲ್ಲ. ಈ ಯೋಜನೆಯು ತುಂಬಾ ಉತ್ತಮವಾಗಿದೆ. ಪಾಲಿಸಿಯನ್ನು ಒಪ್ಪಿಸುವ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News