7th Pay Commission Latest News : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ ಹೊರ ಬಿತ್ತುಅಂಕಿ ಅಂಶ

7th Pay Commission Latest News : ಕಾರ್ಮಿಕ ಸಚಿವಾಲಯವು ಮಾರ್ಚ್‌ನ ಎಐಸಿಪಿ ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಿದೆ. ಫೆಬ್ರವರಿಗೆ ಹೋಲಿಸಿದರೆ 1 ಪಾಯಿಂಟ್ ಏರಿಕೆ ಕಂಡು ಬಂದಿದೆ. ಈ ಕಾರಣದಿಂದಾಗಿ ಜುಲೈ 2022 ರಲ್ಲಿ ಕೇಂದ್ರ ನೌಕರರ ಡಿಎ ಮತ್ತೊಮ್ಮೆ ಹೆಚ್ಚಾಗುವ ನಿರೀಕ್ಷೆಯಿದೆ.

Written by - Ranjitha R K | Last Updated : May 4, 2022, 12:25 PM IST
  • ಕೇಂದ್ರ ನೌಕರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಗಲಿದೆ.
  • ಜುಲೈಯಲ್ಲಿಯೂ ಡಿಎ ಹೆಚ್ಚಾಗುವ ನಿರೀಕ್ಷೆಯಿದೆ.
  • 4 ಶೇ.ದಷ್ಟು ಹೆಚ್ಚಳವಾಗುವ ಸಂಭವ
7th Pay Commission Latest News : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಜುಲೈನಲ್ಲಿ ಮತ್ತೆ ಡಿಎ ಹೆಚ್ಚಳ ಹೊರ ಬಿತ್ತುಅಂಕಿ ಅಂಶ  title=
7th Pay Commission Latest News (file photo)

ಬೆಂಗಳೂರು : 7th Pay Commission Latest News : ಕೇಂದ್ರ ನೌಕರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಗಲಿದೆ. ಮಾರ್ಚ್ 2022 ರಲ್ಲಿ ತುಟ್ಟಿಭತ್ಯೆ ಹೆಚ್ಚಳವಾದ ನಂತರ, ಇದೀಗ ಮತ್ತೆ ಜುಲೈಯಲ್ಲಿಯೂ ಡಿಎ ಹೆಚ್ಚಾಗುವ ನಿರೀಕ್ಷೆಯಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಎಐಸಿಪಿ ಸೂಚ್ಯಂಕದಲ್ಲಿ ಕಡಿತದ ನಂತರ, ಈಗ ಮಾರ್ಚ್ ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಈ ಅಂಕಿ ಅಂಶವನ್ನು ಬಿಡುಗಡೆ ಮಾಡಿದ ನಂತರ, ತುಟ್ಟಿಭತ್ಯೆ ಹೆಚ್ಚಳವಾಗುವುದು ಸ್ಪಷ್ಟವಾಗಿದೆ.

ಮಾರ್ಚ್‌ನಲ್ಲಿ 1 ಪಾಯಿಂಟ್ ಜಿಗಿತ :
ಜನವರಿ 2022 ರಲ್ಲಿ, AICPI ಸೂಚ್ಯಂಕವು 125.1 ರಷ್ಟಿತ್ತು. ಫೆಬ್ರವರಿಯಲ್ಲಿ ಅದು ಮತ್ತಷ್ಟು ಕುಸಿದು 125ಕ್ಕೆ ಇಳಿಯಿತು. ಇದರ ಆಧಾರದಲ್ಲಿ ಮಾರ್ಚ್ ನಲ್ಲೂ ಇಳಿಕೆಯಾಗುವ ನಿರೀಕ್ಷೆಯಿತ್ತು. ಆದರೆ ಇದು 1 ಅಂಕ ಜಿಗಿತ ಕಂಡು 126ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಬಿಸಿಲ ಧಗೆ ಕಡಿಮೆ ಮಾಡಲು ಇಂದೇ ಖರೀದಿಸಿ ಈ ಪುಟ್ಟ ಕೂಲರ್, ಒಂದು ಲೀಟರ್ ನೀರು ಬಳಸಿದರೆ ಸಾಕು ಸಿಗುತ್ತದೆ ತಂಪು ಗಾಳಿ

4 ಶೇ.ದಷ್ಟು ಹೆಚ್ಚಳವಾಗುವ ಸಂಭವ :
ಮಾರ್ಚ್ ತಿಂಗಳ ಅಂಕಿ ಅಂಶ ಹೊರ ಬಿದ್ದ ಹಿನ್ನೆಲೆಯಲ್ಲಿ ಜುಲೈ 2022 ರಲ್ಲಿ ಮೂರು ಪ್ರತಿಶತದಷ್ಟು ಡಿಎ ಹೆಚ್ಚಿಸುವ ಸಾಧ್ಯತೆ  ಎನ್ನಲಾಗಿದೆ.  ಆದರೆ, ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಅಂಕಿಅಂಶಗಳು ಹೊರಬಂದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂಬರುವ ತಿಂಗಳುಗಳಲ್ಲಿ ಇದೇ ಪ್ರವೃತ್ತಿ ಮುಂದುವರಿದರೆ, ತುಟ್ಟಿಭತ್ಯೆ ಹೆಚ್ಚಳದ ಅಂಕಿ ಅಂಶವು ಶೇಕಡಾ 4 ಕ್ಕೆ ಏರಬಹುದು.

ಮಾರ್ಚ್‌ನಲ್ಲಿ ಎಐಸಿಪಿಐ ಸಂಖ್ಯೆಯಲ್ಲಿ ಏರಿಕೆ :
ಕೇಂದ್ರ ನೌಕರರ 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲ ಬಾರಿಗೆ ಡಿಎ ಜನವರಿಯಲ್ಲಿ ಮತ್ತು ಎರಡನೇ ಜುಲೈನಲ್ಲಿ ಹೆಚ್ಚಳವಾಗುತ್ತದೆ. ಮಾರ್ಚ್‌ನಲ್ಲಿ ತುಟ್ಟಿಭತ್ಯೆಯನ್ನು ಮೂರು ಪ್ರತಿಶತದಷ್ಟು ಹೆಚ್ಚಿಸುವ ಘೋಷಣೆ ಮಾಡಲಾಗಿತ್ತು. ಮೂರು ತಿಂಗಳ ಬಾಕಿ ಸಹಿತ ಡಿಎ ಮೊತ್ತವನ್ನು ನೀಡುವುದಾಗಿ ಹೇಳಲಾಗಿತ್ತು. 

ಇದನ್ನೂ ಓದಿ : Vegetable price: ಅಕಾಲಿಕ ಮಳೆ ಎಫೆಕ್ಟ್‌: ಗ್ರಾಹಕರ ಕೈ ಸುಡುತ್ತಿದೆ ತರಕಾರಿ ಬೆಲೆ

ಮುಂದಿನ ಡಿಎ ಜುಲೈನಲ್ಲಿ ಪರಿಷ್ಕರಣೆ :
ಮುಂದಿನ ತುಟ್ಟಿಭತ್ಯೆ  ಜುಲೈನಲ್ಲಿ ಪರಿಷ್ಕರಿಸಲಾಗುವುದು. ಇದರ ಆಧಾರವು ಜನವರಿಯಿಂದ ಜೂನ್ ವರೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವಾಗಿರುತ್ತದೆ. ಈ ಸೂಚ್ಯಂಕದಲ್ಲಿ ಜನವರಿ, ಫೆಬ್ರುವರಿಯಲ್ಲಿ ಕುಸಿತ ಕಂಡುಬಂದಿದ್ದರೂ, ಮಾರ್ಚ್ ನಲ್ಲಿ ಏರಿಕೆಯಾಗಿತ್ತು. ಜನವರಿಯಲ್ಲಿ ಎಐಸಿಪಿಐ 125.1 ಫೆಬ್ರವರಿಯಲ್ಲಿ 125 ಪಾಯಿಂಟ್‌ಗಳಷ್ಟಿತ್ತು. ಈಗ ಮಾರ್ಚ್‌ನಲ್ಲಿ 126 ಅಂಶಗಳಿಗೆ ತಲುಪಿದೆ. ಇನ್ನು ಜುಲೈನಲ್ಲಿ ಡಿಎ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News