Crude Oil Prices: ತೈಲ ಇಂಧನಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಸರ್ಕಾರ ಶೂನ್ಯಕ್ಕೆ ಇಳಿಸಿದೆ. ಅಲ್ಲದೆ, ಡೀಸೆಲ್ ರಫ್ತಿನ ಮೇಲಿನ ಸುಂಕವನ್ನು ಲೀಟರ್‌ಗೆ ಅರ್ಧದಷ್ಟು ಇಳಿಕೆ ಮಾಡಿ  50 ಪೈಸೆ ಇಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಮೃದುತ್ವ ಕಂಡ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಏಪ್ರಿಲ್ 3 ರಂದು ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಯಂತಹ ಕಂಪನಿಗಳ ಮೂಲಕ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ಸುಂಕವನ್ನು ಪ್ರತಿ ಟನ್‌ಗೆ 3,500 ರೂ.ನಿಂದ ಶೂನ್ಯಕ್ಕೆ ಇಳಿಸಲಾಗಿದೆ.


COMMERCIAL BREAK
SCROLL TO CONTINUE READING

ಅಲ್ಲದೆ, ಸರ್ಕಾರವು ಡೀಸೆಲ್ ರಫ್ತು ಮೇಲಿನ ತೆರಿಗೆಯನ್ನು ಲೀಟರ್‌ಗೆ 1 ರೂಪಾಯಿಯಿಂದ 50 ಪೈಸೆಗೆ ಇಳಿಸಿದೆ. ಅದೇ ರೀತಿ ವಿಮಾನ ಇಂಧನ (ಎಟಿಎಫ್) ರಫ್ತಿನ ಮೇಲಿನ ತೆರಿಗೆ ಶೂನ್ಯವಾಗಿರಲಿದೆ. ಹೊಸ ತೆರಿಗೆ ದರಗಳು ಏಪ್ರಿಲ್ 4 ರಿಂದ ಜಾರಿಗೆ ಬಂದಿವೆ. ಮಾರ್ಚ್ ತಿಂಗಳ ದ್ವಿತೀಯಾರ್ಧದಲ್ಲಿ  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಮೃದುಗೊಂಡ ಕಾರಣ ಸುಂಕವನ್ನು ಕಡಿತಗೊಳಿಸಲಾಗಿದೆ. ಆದಾಗ್ಯೂ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಮತ್ತು ಅದರ ಮಿತ್ರರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯಲ್ಲಿ ಕಡಿತವನ್ನು ಇದ್ದಕ್ಕಿದ್ದಂತೆ ಘೋಷಿಸಿದ ನಂತರ ಈ ತಿಂಗಳು ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.


ಈ ರೇಟಿಂಗ್ ಏಜೆನ್ಸಿಗೆ ಸಂಬಂಧಿಸಿದಂತೆ Icra Ltd. ಮಾರ್ಚ್ 21, 2023 ರಂದು ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಪರಿಶೀಲಿಸಿದ ನಂತರ, ಕಚ್ಚಾ ತೈಲ ಬೆಲೆಗಳು ಮೃದುವಾಗಿವೆ ಎಂದು ಹಿರಿಯ ಉಪಾಧ್ಯಕ್ಷ ಮತ್ತು ಗ್ರೂಪ್ ಹೆಡ್ (ಕಾರ್ಪೊರೇಟ್ ರೇಟಿಂಗ್ಸ್) ಸಬ್ಯಸಾಚಿ ಮಜುಂದಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಲ್ಕ ಕಡಿತಗೊಳಿಸಲಾಗಿದೆ. ಅವರು ಹೇಳಿದ್ದಾರೆ, “ಆದಾಗ್ಯೂ, ಒಪೆಕ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ದಿನಕ್ಕೆ 1.16 ಮಿಲಿಯನ್ ಬ್ಯಾರೆಲ್‌ಗಳ ಹೆಚ್ಚುವರಿ ಉತ್ಪಾದನೆ ಕಡಿತದ ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ವೇಗವನ್ನು ಪಡೆದುಕೊಂಡಿದ್ದವು. ಇಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಬೆಲೆಗಳು ಮತ್ತಷ್ಟು ಏರಿಕೆಯಾದರೆ, ನಂತರ ಸುಂಕದ ದರಗಳು ಮತ್ತೆ ಹೆಚ್ಚಾಗಬಹುದು.


ಇದನ್ನೂ ಓದಿ-TA-DA Arrears: ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, ವೇತನದಲ್ಲಿ ಭಾರಿ ವೃದ್ಧಿ, ಜನವರಿ-ಮಾರ್ಚ್ ಬಾಕಿಯಿಂದ ಬಂಪರ್ ಲಾಭ!


ಪೆಟ್ರೋಲಿಯಂ ಉತ್ಪನ್ನಗಳು
ಹಿಂದಿನ ಎರಡು ವಾರಗಳಲ್ಲಿ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ಹದಿನೈದು ದಿನಗಳಿಗೊಮ್ಮೆ ತೆರಿಗೆ ದರಗಳನ್ನು ಪರಿಶೀಲಿಸಲಾಗುತ್ತದೆ. ಜುಲೈ 1, 2022 ರಿಂದ ಮಾರ್ಚ್ 2023 ರವರೆಗೆ ಕಚ್ಚಾ ತೈಲ ಉತ್ಪಾದನೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲೆ ವಿಧಿಸಲಾದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದಿಂದ ಸರ್ಕಾರವು 40,000 ಕೋಟಿ ರೂ. ಗಳಿಕೆ ಮಾಡಿತ್ತು.  ಕಳೆದ ವರ್ಷ ಜುಲೈ 1 ರಂದು ಭಾರತವು ಮೊದಲ ಬಾರಿಗೆ ವಿಂಡ್‌ಫಾಲ್ ಲಾಭ ತೆರಿಗೆಯನ್ನು ವೀತಿಸಿತ್ತು. ಇದರೊಂದಿಗೆ ಇಂಧನ ಕಂಪನಿಗಳು ಮಾಡಿಕೊಂಡ  ಭಾರೀ ಲಾಭದ ಮೇಲೆ ತೆರಿಗೆ ವಿಧಿಸಿದ ದೇಶಗಳ ಪಟ್ಟಿಗೆ ಭಾರತ ಸೇರಿಕೊಂಡಿದೆ.


ಇದನ್ನೂ ಓದಿ-Big Update: UPI ಹಣ ಪಾವತಿ ಮೇಲೆ ಶೇ.0.3 ಶುಲ್ಕ ವಿಧಿಸಲಿದೆ ಸರ್ಕಾರ! ಇಲ್ಲಿದೆ ಫುಲ್ ಡಿಟೇಲ್..


ವಿಮಾನ ಇಂಧನ
ಆಗ ಪೆಟ್ರೋಲ್ ಮತ್ತು ವಿಮಾನ ಇಂಧನದ ಮೇಲೆ ಪ್ರತಿ ಲೀಟರ್ ಗೆ 6 ರೂಪಾಯಿ ರಫ್ತು ಸುಂಕ ವಿಧಿಸಲಾಗಿತ್ತು. ಇದೇ ವೇಳೆ ಡೀಸೆಲ್ ಮೇಲೆ ಲೀಟರ್ ಗೆ 13 ರೂ. ವಿಧಿಸಲಾಗಿತ್ತು. ಇದರೊಂದಿಗೆ ದೇಶೀಯ ಕಚ್ಚಾ ತೈಲ ಉತ್ಪಾದನೆಯ ಮೇಲೆ ಪ್ರತಿ ಟನ್‌ಗೆ ರೂ 23,250 ರ ವಿಂಡ್‌ಫಾಲ್ ಲಾಭ ತೆರಿಗೆಯನ್ನು ವಿಧಿಸಲಾಯಿತು. ಆದಾಗ್ಯೂ, ಮೊದಲ ವಿಮರ್ಶೆಯಲ್ಲಿ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕಲಾಯಿತು. ಮಾರ್ಚ್ 4 ರ ವಿಮರ್ಶೆಯಲ್ಲಿ ಎಟಿಎಫ್ ಮೇಲಿನ ಸುಂಕವನ್ನು ರದ್ದುಗೊಳಿಸಲಾಯಿತು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.