PPF-ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಕೇಂದ್ರ ವಿತ್ತ ಸಚಿವೆ

PPF-SSY Rule Change: ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ. ಈ ಎಲ್ಲಾ ಯೋಜನೆಗಳಲ್ಲಿ ಹೂಡಿಕೆದಾರರಿಗೆ ಪ್ಯಾನ್ ಮತ್ತು ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.  

Written by - Nitin Tabib | Last Updated : Apr 2, 2023, 03:22 PM IST
  • ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ,
  • ಈ ಬದಲಾವಣೆಗಳನ್ನು ಸರ್ಕಾರವು ನಡೆಸುವ ಸಣ್ಣ ಉಳಿತಾಯ ಯೋಜನೆಗೆ KYC ರೂಪದಲ್ಲಿ ಬಳಸಲಾಗುವುದು ಎಂದು ಹೇಳಲಾಗಿದೆ.
  • ಈ ಮೊದಲು, ನೀವು ಆಧಾರ್ ಸಂಖ್ಯೆ ಇಲ್ಲದೆಯೂ ಈ ಎಲ್ಲಾ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಬಹುದಾಗಿತ್ತು.
PPF-ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಕೇಂದ್ರ ವಿತ್ತ ಸಚಿವೆ title=
ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

PAN-Aadhaar Card: ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಮಹಿಳಾ ಸಮ್ಮಾನ್ ಯೋಜನೆಗಳಂತಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮ್ಮ ನಿಮಗಾಗಿ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ. ಸರ್ಕಾರವು ನಡೆಸುವ ಈ ಎಲ್ಲಾ ಯೋಜನೆಗಳಲ್ಲಿ, ಹೂಡಿಕೆದಾರರಿಗೆ PAN (PAN) ಮತ್ತು ಆಧಾರ್ (AADHAAR) ಕಡ್ಡಾಯಗೊಳಿಸಿದೆ.

ಆಧಾರ್ ನೋಂದಣಿ ಸಂಖ್ಯೆಯನ್ನು ಸಲ್ಲಿಸಬೇಕು
ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ, ಈ ಬದಲಾವಣೆಗಳನ್ನು ಸರ್ಕಾರವು ನಡೆಸುವ ಸಣ್ಣ ಉಳಿತಾಯ ಯೋಜನೆಗೆ KYC ರೂಪದಲ್ಲಿ  ಬಳಸಲಾಗುವುದು ಎಂದು ಹೇಳಲಾಗಿದೆ. ಈ ಮೊದಲು, ನೀವು ಆಧಾರ್ ಸಂಖ್ಯೆ ಇಲ್ಲದೆಯೂ ಈ ಎಲ್ಲಾ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಬಹುದಾಗಿತ್ತು. ಹಣಕಾಸು ಸಚಿವಾಲಯದ ಪರವಾಗಿ, ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು, ಹೂಡಿಕೆದಾರರು ಆಧಾರ್ ನೋಂದಣಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಇದೀಗ ಹೇಳಲಾಗಿದೆ. ಅಲ್ಲದೆ, ಮಿತಿಗಿಂತ ಹೆಚ್ಚಿನ ಹೂಡಿಕೆಗೆ ಪ್ಯಾನ್ ಕಾರ್ಡ್ ಸಲ್ಲಿಸುವುದು ಇದೀಗ ಕಡ್ಡಾಯವಾಗಿರಲಿದೆ.

ಇದನ್ನೂ ಓದಿ-Bank Holidays April 2023: ಈ ತಿಂಗಳಲ್ಲಿ ಬಂಪರ್ 15 

ಆರು ತಿಂಗಳೊಳಗೆ ಆಧಾರ್ ಸಂಖ್ಯೆ ನೀಡಬೇಕು
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಾಗಿ ಖಾತೆಯನ್ನು ತೆರೆಯುವಾಗ ನೀವು ಆಧಾರ್ ಹೊಂದಿಲ್ಲದಿದ್ದರೆ, ನೀವು ಆಧಾರ್‌ಗಾಗಿ ನೋಂದಣಿ ಸ್ಲಿಪ್‌ನ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. ಅಲ್ಲದೆ, ಹೂಡಿಕೆದಾರರನ್ನು 'ಸಣ್ಣ ಉಳಿತಾಯ ಯೋಜನೆ'ಯ ಹೂಡಿಕೆಯೊಂದಿಗೆ ಲಿಂಕ್ ಮಾಡಲು, ಖಾತೆಯನ್ನು ತೆರೆದ ದಿನಾಂಕದಿಂದ ಆರು ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಸ್ಲ್ಲಿಸಬೇಕಾಗಲಿದೆ. ಸಣ್ಣ ಉಳಿತಾಯ ಯೋಜನೆ ಖಾತೆಯನ್ನು ತೆರೆಯುವಾಗ ಇದೀಗ ನಿಮಗೆ ಈ ಕೆಳಗೆ ಉಲ್ಲೇಖಿಸಲಾದ ದಾಖಲೆಗಳು ಬೇಕಾಗಲಿವೆ.

ಇದನ್ನೂ ಓದಿ-Milk Price Hike: ಮತ್ತೆ ಹಾಲಿನ ದರದಲ್ಲಿ ಹೆಚ್ಚಳ, ಪ್ರತಿ ಲೀಟರ್ ಗೆ ಎಷ್ಟು ಹೆಚ್ಚಳ ಇಲ್ಲಿ ತಿಳಿದುಕೊಳ್ಳಿ!

->> ಪಾಸ್ಪೋರ್ಟ್ ಗಾತ್ರದ ಫೋಟೋ
>> ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಸ್ಲಿಪ್
>> ಪ್ಯಾನ್ ಸಂಖ್ಯೆ, ಅಸ್ತಿತ್ವದಲ್ಲಿರುವ ಹೂಡಿಕೆದಾರರು 30 ಸೆಪ್ಟೆಂಬರ್ 2023 ರೊಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಸಲ್ಲಿಸದಿದ್ದರೆ, ನಂತರ ಅವರ ಖಾತೆಯನ್ನು 1 ಅಕ್ಟೋಬರ್ 2023 ರಿಂದ ನಿಷೇಧಿಸಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News