ಹೆಚ್ಚುವರಿ ಪಿಂಚಣಿ ಬಗ್ಗೆ ಸರ್ಕಾರದ ಬಿಗ್ ಅಪ್‌ಡೇಟ್ ! ಉದ್ಯೋಗದಲ್ಲಿರುವವರಿಗೆ ತಿಳಿದಿರಬೇಕಾದ ವಿಚಾರ !
EPFO Pension Update: ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿದ್ದರೆ ಅಥವಾ ಈ ಆಯ್ಕೆಯನ್ನು ಆರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಹೆಚ್ಚುವರಿ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿರುವ ಇಪಿಎಫ್‌ಒ ಪಿಂಚಣಿ ಯೋಜನೆಯ ಚಂದಾದಾರರು ಮತ್ತು ಪಿಂಚಣಿದಾರರು ಹೆಚ್ಚುವರಿ ಕೊಡುಗೆ ಪಾವತಿಸುವ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಲು 3 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
EPFO Pension Update : ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವವರಿಗೆ ಸರ್ಕಾರದಿಂದ ಹೊಸ ಅಪ್‌ಡೇಟ್ ಬಂದಿದೆ. ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿದ್ದರೆ ಅಥವಾ ಈ ಆಯ್ಕೆಯನ್ನು ಆರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಹೆಚ್ಚುವರಿ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿರುವ ಇಪಿಎಫ್‌ಒ ಪಿಂಚಣಿ ಯೋಜನೆಯ ಚಂದಾದಾರರು ಮತ್ತು ಪಿಂಚಣಿದಾರರು ಹೆಚ್ಚುವರಿ ಕೊಡುಗೆ ಪಾವತಿಸುವ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಲು 3 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ. ಇದಕ್ಕೂ ಮೊದಲು, ನವೆಂಬರ್ 2022 ರಲ್ಲಿ, ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆಯ್ಕೆ ಮಾಡಲು ಷೇರುದಾರರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.
ಆನ್‌ಲೈನ್ ಮೂಲಕ ಫಾರ್ಮ್ ಭಾರ್ತಿ ಮಾಡಬಹುದು :
ಇಪಿಎಫ್‌ಒ ಚಂದಾದಾರರು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡಲು ಉದ್ಯೋಗದಾತರೊಂದಿಗೆ ಜಂಟಿ ಆಯ್ಕೆ ಫಾರ್ಮ್ ಅನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಬೇಕು. ಇದಕ್ಕಾಗಿ ಸರ್ಕಾರ ಮೊದಲು ಮೇ 3, 2023ರ್ ಗಡುವನ್ನು ನಿಗದಿ ಮಾಡಿತ್ತು. ನಂತರ ಈ ಗಡುವನ್ನು ಜೂನ್ 26, 2023ದವರೆಗೆ ವಿಸ್ತರಿಸಲಾಗಿದೆ. ಇಪಿಎಫ್‌ಒ ಚಂದಾದಾರರು ಹೆಚ್ಚಿನ ಪಿಂಚಣಿ ಆಯ್ಕೆಯನ್ನು ಆರಿಸಿದರೆ ಹೆಚ್ಚುವರಿ ಕೊಡುಗೆಯ ಆಯ್ಕೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಪಾವತಿಯ ವಿಧಾನ ಹೇಗೆ ಎನ್ನುವುದರ ಬಗ್ಗೆ ಇನ್ನು ಕೂಡಾ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಇದನ್ನೂ ಓದಿ : Car Sales: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಾಟಾದ 3 ಕಾರುಗಳು..!
ಹೆಚ್ಚುವರಿ ಮೊತ್ತವನ್ನು ನಿರ್ಧರಿಸಲಿರುವ ಪ್ರಾದೇಶಿಕ ಅಧಿಕಾರಿಗಳು :
ಹೆಚ್ಚಿನ ಮೊತ್ತವನ್ನು ಕೊಡಬೇಕಾದ ಸಂದರ್ಭದಲ್ಲಿ ಇಪಿಎಫ್‌ಒ ಚಂದಾದಾರರು ಹೆಚ್ಚಿನ ಪಿಂಚಣಿ ಯೋಜನೆಯಿಂದ ಹೊರಗುಳಿಯುವ ಆಯ್ಕೆಯನ್ನು ಪಡೆಯುತ್ತಾರೆಯೇ ಎನ್ನುವ ಬಗ್ಗೆ ಕೂಡಾ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಹೆಚ್ಚುವರಿ ಮೊತ್ತವನ್ನು ಪ್ರಾದೇಶಿಕ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಯಾವ ಮೊತ್ತವನ್ನು ನಿರ್ಧರಿಸಲಾಗುತ್ತದೆ ಎನ್ನುವುದನ್ನು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡುವವರಿಗೆ ಅದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಸಮ್ಮತಿ ನೀಡಲು ಮೂರು ತಿಂಗಳ ಕಾಲಾವಕಾಶ :
ಪಿಂಚಣಿದಾರರು/ಸದಸ್ಯರಿಗೆ ಹಣ ಜಮಾ ಮಾಡಲು ಮತ್ತು ಹಣ ವರ್ಗಾವಣೆಗೆ ಒಪ್ಪಿಗೆ ನೀಡಲು ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಇಪಿಎಫ್‌ಒದ ಪ್ರಾದೇಶಿಕ ಅಧಿಕಾರಿಯು ಪಿಂಚಣಿದಾರರು ಅಥವಾ ಸದಸ್ಯರಿಗೆ ಹೆಚ್ಚಿನ ಪಿಂಚಣಿಗಾಗಿ ಹೆಚ್ಚುವರಿ ಹಣವನ್ನು ಯಾಕೆ ಪಾವತಿಸಬೇಕು ಇದರ ಅಗತ್ಯ ಏನು ಎನ್ನುವುದನ್ನು ತಿಳಿಸಿ ಹೇಳುತ್ತಾರೆ.
ಇದನ್ನೂ ಓದಿ : Gold Price: ಮದುವೆಯ ಸೀಸನ್‌ನಲ್ಲಿ ಚಿನ್ನ-ಬೆಳ್ಳಿ ಮತ್ತಷ್ಟು ಅಗ್ಗ, ಬೆಲೆಯಲ್ಲಿ ತೀವ್ರ ಕುಸಿತ!
ಇಪಿಎಫ್‌ಒ ನಡೆಸುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗೆ ಉದ್ಯೋಗದಾತರ ಕೊಡುಗೆಯಿಂದ ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವವರ ಮೂಲ ವೇತನದ ಶೇ 1.16 ರಷ್ಟು ಹೆಚ್ಚುವರಿ ಕೊಡುಗೆಯನ್ನು ತೆಗೆದುಕೊಳ್ಳಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಕಾರ್ಮಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ, ಸರ್ಕಾರವು 15,000 ರೂ ಮೂಲ ವೇತನದ ಮೇಲೆ ಇಪಿಎಸ್‌ಗೆ ಸಬ್ಸಿಡಿ ರೂಪದಲ್ಲಿ ಶೇಕಡಾ 1.16 ರಷ್ಟು ಕೊಡುಗೆ ನೀಡುತ್ತದೆ.
ಇಪಿಎಫ್‌ಒದ ಸಾಮಾಜಿಕ ಭದ್ರತಾ ಯೋಜನೆಗೆ ನೌಕರರು ಶೇಕಡಾ 12 ರಷ್ಟು ಕೊಡುಗೆ ನೀಡುತ್ತಾರೆ. ಉದ್ಯೋಗದಾತರ ಶೇಕಡಾ 12 ರಷ್ಟು ಕೊಡುಗೆಯಲ್ಲಿ, 8.33 ಶೇಕಡಾ ಇಪಿಎಸ್‌ಗೆ ಹೋಗುತ್ತದೆ. ಉಳಿದ 3.67 ಶೇಕಡಾ ನೌಕರರ ಭವಿಷ್ಯ ನಿಧಿಗೆ ಹೋಗುತ್ತದೆ.
ಇದನ್ನೂ ಓದಿ : 130 KM ವೇಗ, 6 ಗಂಟೆಗೆ 520 KM; ದೇಶದ 17ನೇ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಓಡಲಿದೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.