ಪಾದರಕ್ಷೆಗಳ ಮೇಲೆ ಬಿಐಎಸ್: ದಿನದಿಂದ ಧಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ಸರ್ಕಾರವು ಪಾದರಕ್ಷೆ ಮಾರಾಟಗಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಪಾದರಕ್ಷೆ ಉದ್ಯಮದ ಕೋರಿಕೆಯ ಮೇರೆಗೆ, ಸರ್ಕಾರವು ದೇಶದಲ್ಲಿ ತಯಾರಿಸಿದ ಮತ್ತು ಮಾರಾಟ ಮಾಡುವ ಪಾದರಕ್ಷೆಗಳಿಗೆ ಗುಣಮಟ್ಟ ನಿಯಂತ್ರಿಸುವ  BIS (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಅನುಸರಣೆ ಕಡ್ಡಾಯಗೊಳಿಸುವ ಆದೇಶವನ್ನು ಮತ್ತೊಂದು ವರ್ಷ ಮುಂದೂಡಿದೆ. ಗುಣಮಟ್ಟ ನಿಯಂತ್ರಣ ಆದೇಶವು ಇದೀಗ ಜುಲೈ 1, 2023 ರಿಂದ ಜಾರಿಗೆ ಬರಲಿದೆ.


COMMERCIAL BREAK
SCROLL TO CONTINUE READING

ಕ್ಯಾಟ್ ವಾದ ಏನು ?
ದೆಹಲಿ ಮೂಲದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಟಿ) ಈ ವಿಷಯವನ್ನು ಈ ಹಿಂದೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಮುಂದೆ ಇಟ್ಟಿತ್ತು. ದೇಶಾದ್ಯಂತ ಪಾದರಕ್ಷೆಗಳನ್ನು ತಯಾರಿಸುವ ಸಣ್ಣ ತಯಾರಕರು ಮತ್ತು ವ್ಯಾಪಾರಿಗಳಿದ್ದು, ಅವರಿಗೆ ನಗದು ಇಲ್ಲದಿದ್ದ ಸಂದರ್ಭಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಕಷ್ಟವಾಗುತ್ತದೆ ಎಂದು CAIT ವಾದಿಸಿತ್ತು. ದೇಶದ ಜನಸಂಖ್ಯೆಯ ಶೇ. 85 ರಷ್ಟು ಜನರು ಅಗ್ಗದ ಪಾದರಕ್ಷೆಗಳನ್ನು ಧರಿಸುತ್ತಾರೆ ಮತ್ತು ಅದರಲ್ಲಿ ಶೇ.90 ಬಡ ಜನರು ಮತ್ತು ಚಮ್ಮಾರರು ತಮ್ಮ ಮನೆಗಳಲ್ಲಿ ಅಥವಾ ಗುಡಿ ಕೈಗಾರಿಕೆಗಳಲ್ಲಿ ಪಾದರಕ್ಷೆಗಳನ್ನು ಉತ್ಪಾದಿಸುತ್ತಾರೆ. ಈ ಬೂಟುಗಳು ಮತ್ತು ಚಪ್ಪಲಿಗಳನ್ನು ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಆದಾಯದ ಗುಂಪಿನ ಜನರು ಮಾಡುತ್ತಾರೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ತುಟ್ಟಿಭತ್ಯೆಯಲ್ಲಿ ಶೇ.5ರಷ್ಟು ಏರಿಕೆ ಗ್ಯಾರಂಟಿ!


ಆದೇಶ ನೀಡಿದ ಡಿಪಿಐಐಟಿ 
ಈ ಕುರಿತು ಮಾತನಾಡಿರುವ ಸಿಎಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾನ್, 'ಭಾರತದಲ್ಲಿ ಹೆಚ್ಚಿನ ಪಾದರಕ್ಷೆಗಳ ತಯಾರಿಕೆಯಲ್ಲಿ ಬಿಐಎಸ್ ಮಾನದಂಡಗಳನ್ನು ಅಳವಡಿಸುವುದು ಅಸಾಧ್ಯ. ಭಾರತದಲ್ಲಿ, ಪಾದರಕ್ಷೆಗಳ ಉದ್ಯಮದಲ್ಲಿ ಶೇ. 85ರಷ್ಟು ತಯಾರಕರು ಬಹಳ ಸಣ್ಣ ಪ್ರಮಾಣ ಉದ್ಯಮ ಹೊಂದಿದ್ದಾರೆ ಮತ್ತು ಸರ್ಕಾರವು ನಿಗದಿಪಡಿಸಿದ BIS ಮಾನದಂಡಗಳನ್ನು ಅನುಸರಿಸಲು ಅವರಿಗೆ ಅಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ-Railway Ticket: ಇನ್ಮುಂದೆ ನಿಮ್ಮ ಊರಲ್ಲೇ ನಿಮಗೆ ಕನ್ಫರ್ಮ್ ರೇಲ್ವೆ ಟಿಕೆಟ್ ಸಿಗಲಿದೆ, ಸ್ಟೇಷನ್ಗೆ ಹೋಗುವ ಅವಶ್ಯಕತೆ ಇಲ್ಲ


ಕೈಗಾರಿಕಾ ಮತ್ತು ರಕ್ಷಣಾತ್ಮಕ ರಬ್ಬರ್ ಬೂಟುಗಳು, ಪಿವಿಸಿ ಸ್ಯಾಂಡಲ್‌ಗಳು, ರಬ್ಬರ್ ಥಾಂಗ್‌ಗಳು ಮತ್ತು ಮೋಲ್ಡ್ ರಬ್ಬರ್ ಬೂಟ್‌ಗಳಂತಹ ಪಾದರಕ್ಷೆಗಳಿಗೆ ಹೊಸ ಗುಣಮಟ್ಟದ ಮಾನದಂಡಗಳು ಅನ್ವಯವಾಗುತ್ತವೆ ಎಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಆದೇಶ ಹೊರಡಿಸಿದೆ. ಈ ಆದೇಶವು ರಫ್ತಿಗಾಗಿ ಮಾಡಿದ ಸರಕುಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.