7th Pay Commission: ದೀರ್ಘ ಕಾಲದಿಂದ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದ ಸಂತಸದ ಸುದ್ದಿ ಇದೀಗ ಪ್ರಕಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಜುಲೈ 1 ರಿಂದ ಸರ್ಕಾರ ತುಟ್ಟಿಭತ್ಯೆಯನ್ನು ಶೇ.5 ರಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ. ಇದರಿಂದ ನೌಕರರ ಸಂಬಳದಲ್ಲಿ ಎಷ್ಟು ಏರಿಕೆಯಾಗಲಿದೆ ತಿಳಿದುಕೊಳ್ಳೋಣ ಬನ್ನಿ.
ಮತ್ತೆ ಹೆಚ್ಚಾಗಲಿದೆ ತುಟ್ಟಿಭತ್ಯೆ
ಸಾಮಾನ್ಯವಾಗಿ ತುಟ್ಟಿಭತ್ಯೆಯಲ್ಲಿನ ಏರಿಕೆ ಎಐಸಿಪಿಐ ಸೂಚ್ಯಂಕವನ್ನು ಆಧರಿಸಿರುತ್ತದೆ. ಮಾರ್ಚ್ 2022ರಲ್ಲಿ ಎಐಸಿಪಿಐ ಸೂಚ್ಯಂಕದಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗಿದೆ. ಈ ಸೂಚ್ಯಂಕದ ಪ್ರಕಾರ ಸರ್ಕಾರ ತುಟ್ಟಿಭತ್ಯೆಯನ್ನು ಶೇ. 3ರ ಬದಲಿಗೆ ಶೇ.5ಕ್ಕೆ ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮತ್ತು ಸರ್ಕಾರ ಈ ನಿರ್ಧಾರದ ಮೇಲೆ ತನ್ನ ಮುದ್ರೆಯನ್ನು ಒತ್ತಿದರೆ ಸರ್ಕಾರಿ ನೌಕರರ ಡಿಎ ಶೇ.34 ರಿಂದ ನೇರವಾಗಿ ಶೇ.39ಕ್ಕೆ ಏರಿಕೆಯಾಗಲಿದೆ. ಹೇಗಿರುವಾಗ ಕೇಂದ್ರ ಸರ್ಕಾರಿ ನೌಕರರ ವೇತನ 27 ಸಾವಿರಕ್ಕಿಂತ ಹೆಚ್ಚು ಏರಿಕೆ ಕಾಣಲಿದೆ.
AICPI ಅಂಕಿಅಂಶಗಳು ಏನು ಹೇಳುತ್ತವೆ
ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, AICPI ಸೂಚ್ಯಂಕ ಭಾರಿ ಕುಸಿತವನ್ನು ಕಂಡಿದೆ, ಆದರೆ ಅದರ ನಂತರ AICPI ಅಂಕಿ-ಅಂಶಗಳು ಹೆಚ್ಚಾಗುತ್ತಿವೆ. ಜನವರಿಯಲ್ಲಿ ಈ ಸೂಚ್ಯಂಕ 125.1 ರಷ್ಟಿದ್ದರೆ, ಫೆಬ್ರವರಿಯಲ್ಲಿ ಅದು 125 ರಷ್ಟು ಮತ್ತು ಮಾರ್ಚ್ನಲ್ಲಿ 126 ರಷ್ಟು ಅಂದರೆ ಒಂದು ಅಂಕ ಹೆಚ್ಚಾಗಿದೆ. ಇದೀಗ ಏಪ್ರಿಲ್ ತಿಂಗಳ ಅಂಕಿ-ಅಂಶಗಳೂ ಕೂಡ ಪ್ರಕಟಗೊಂಡಿದ್ದು. ಏಪ್ರಿಲ್ನ ಅಂಕಿ-ಅಂಶಗಳ ಪ್ರಕಾರ, ಎಐಸಿಪಿಐ ಸೂಚ್ಯಂಕವು 127.7 ಕ್ಕೆ ತಲುಪಿದೆ. ಅಂದರೆ ಸೂಚ್ಯಂಕದಲ್ಲಿ ಶೇ.1.35 ರಷ್ಟು ಏರಿಕೆಯಾಗಿದೆ, ಅಂದರೆ, ಈಗ ಮೇ ಮತ್ತು ಜೂನ್ ಡೇಟಾ 127 ದಾಟಿದರೆ, ಅದು ಶೇ.5 ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವೇತನ ಎಷ್ಟು ಹೆಚ್ಚಾಗಲಿದೆ?
ಸರ್ಕಾರ ಒಂದು ವೇಳೆ ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಿಸಿದರೆ, ನೌಕರರ ಒಟ್ಟು ತುಟ್ಟಿಭತ್ಯೆ ಶೇ. 34 ರಿಂದ ಶೇ.39ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ-PM Kisan : ಕೇಂದ್ರ ಸರ್ಕಾರದ ಈ ಘೋಷಣೆಯಿಂದ ಎಲ್ಲಾ ರೈತರಿಗೂ ಆಗಲಿದೆ ಲಾಭ
ಗರಿಷ್ಟ ಮೂಲ ವೇತನದ ಲೆಕ್ಕಾಚಾರ ಈ ರೀತಿ ಇರಲಿದೆ
1. ಉದ್ಯೋಗಿಯ ಮೂಲ ವೇತನ - 56,900 ರೂ
2. ಹೊಸ ತುಟ್ಟಿಭತ್ಯೆ (39%) - ರೂ.22,191/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) - ರೂ.19,346/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ ಎಷ್ಟು 21,622-19,346 = ರೂ 2,845/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ - 2,845X12 = 34,140 ರೂ.
ಕನಿಷ್ಠ ಮೂಲ ವೇತನದ ಲೆಕ್ಕಾಚಾರ ಈ ರೀತಿ ಇರಲಿದೆ
1. ಉದ್ಯೋಗಿಯ ಮೂಲ ವೇತನ - ರೂ 18,000
2. ಹೊಸ ತುಟ್ಟಿಭತ್ಯೆ (39%) - ರೂ.7,020/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) - ರೂ.6120/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ ಎಷ್ಟು 7020-6120 = ರೂ.900/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ - 900 X12 = 10,800 ರೂ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.