ಕೇವಲ 1515 ರೂಪಾಯಿಗೆ ವಿಮಾನಯಾನ ! ಮಾರ್ಚ್ 30, 2024 ರವರೆಗೆ ಅನ್ವಯವಾಗಿರಲಿದೆ ಈ ದರ
ಸ್ಪೈಸ್‌ಜೆಟ್ ವಿಶೇಷ ಆಫರ್ ಅಡಿಯಲ್ಲಿ ಆಗಸ್ಟ್ 14 ರಿಂದ ಆಗಸ್ಟ್ 20 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಬೆಂಗಳೂರು : ಮುಂದಿನ ದಿನಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಯೋಜನೆಯನ್ನು ಹೊಂದಿದ್ದರೆ, ಸ್ಪೈಸ್‌ಜೆಟ್ ನಿಮಗಾಗಿ ಅಗ್ಗದ ವಿಮಾನ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ತಂದಿದೆ. 2023 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಈ ಕೊಡುಗೆಯನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ನೀಡುತ್ತಿದೆ. ಈ ಕೊಡುಗೆಯ ಅಡಿಯಲ್ಲಿ, ಆಗಸ್ಟ್ 14 ರಿಂದ ಆಗಸ್ಟ್ 20 ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಟ್ವೀಟ್ ಮಾಡಿರುವ ಸ್ಪೈಸ್ ಜೆಟ್ :
ಸ್ಪೈಸ್ ಜೆಟ್ ಪ್ರಯಾಣಿಕರಿಗಾಗಿ ಇಂಡಿಪೆಂಡೆನ್ಸ್ ಡೇ ಸೇಲ್ ಅನ್ನು ಜಾರಿಗೆ ತರಲಾಗಿದೆ. ಈ ಸೇಲ್ ಅಡಿಯಲ್ಲಿ ಕೇವಲ 1515 ರೂಪಾಯಿ ನೀಡಿ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಬಹುದು. ಈ ಟಿಕೆಟ್ ಮೊತ್ತದಲ್ಲಿ ಎಲ್ಲಾ ತೆರಿಗೆಗಳನ್ನು ಸೇರಿಸಲಾಗಿದೆ. ಇದರೊಂದಿಗೆ ಕೇವಲ 15 ರೂಪಾಯಿ ಪಾವತಿಸಿ ನಿಮ್ಮ ನೆಚ್ಚಿನ ಸೀಟ್ ಅನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ 2000 ರೂ. ಟಿಕೆಟ್ ವೋಚರ್ ಕೂಡಾ ಸಿಗಲಿದೆ.
ಇದನ್ನೂ ಓದಿ : ಪಿಂಚಣಿ ನಿಯಮಗಳಲ್ಲಿ ಪ್ರಮುಖ ಬದಲಾವಣೆ! ಪಿಂಚಣಿದಾರರಿಗೆ ಸಿಹಿಯೋ ಕಹಿಯೋ ?
ಈ ಆಫರ್ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್ ನಲ್ಲಿ ಆಗಸ್ಟ್ 15 ರಿಂದ ಮಾರ್ಚ್ 30 ರವರೆಗೆ 2024 ರವರೆಗೆ ಪ್ರಯಾಣಿಸಬಹುದು ಎಂದು ಸ್ಪೈಸ್ ಜೆಟ್ ತಿಳಿಸಿದೆ. ಅಂದರೆ ಮಾರ್ಚ್ ವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದು. ಫಸ್ಟ್ ಕಂ ಫಸ್ಟ್ ಸರ್ವ್ ಆಧಾರದ ಮೇಲೆ ಟಿಕೆಟ್‌ಗಳನ್ನು ನೀಡಲಾಗುವುದು.
ಈ ಸೆಲ್ ಅಡಿಯಲ್ಲಿ ಯಾವ ರಾಜ್ಯಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಈ ಆಫರ್ ಅಡಿಯಲ್ಲಿ ನೀವು ಚೆನ್ನೈ-ಹೈದರಾಬಾದ್, ಗುವಾಹಟಿ-ಬಗ್ದೋಗ್ರಾ, ಮುಂಬೈ-ಗೋವಾ, ಗೋವಾ-ಮುಂಬೈ ಮತ್ತು ಜಮ್ಮು-ಶ್ರೀನಗರ ಸೇರಿದಂತೆ ಹಲವು ರಾಜ್ಯಗಳಿಗೆ ಕೇವಲ 1515 ರೂ.ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಅಡಿಕೆ ಧಾರಣೆ ಹೇಗಿದೆ..?
ಕಂಪನಿಯ ಸಿಇಒ ನೀಡಿರುವ ಮಾಹಿತಿ :
ಈ ಬಗ್ಗೆ ಮಾಹಿತಿ ನೀಡಿರುವ ಸ್ಪೈಸ್ ಜೆಟ್ ಸಿಇಒ, ಈ ಸೇಲ್ ಅಡಿಯಲ್ಲಿ, ಅಗ್ಗವಾಗಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಹೇಳಿದ್ದಾರೆ. ಅಲ್ಲದೆ, ದೇಶೀಯ ವಿಮಾನಗಳಲ್ಲಿ ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.