ಬೆಂಗಳೂರು : ದೇಶದಲ್ಲಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ ಎದುರಾಗಿ ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಸೀಟ್ ಸಿಗುವುದು ತೀರಾ ವಿರಳ. ಇದಕ್ಕಾಗಿ ಭಾರತೀಯ ರೈಲ್ವೇ ತತ್ಕಾಲ್ ಸೌಲಭ್ಯವನ್ನು ಒದಗಿಸಿದೆ. ಇದರಲ್ಲಿ ಪ್ರಯಾಣದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ರೈಲು ಟಿಕೆಟ್ ಬುಕ್ ಮಾಡಬಹುದು. ಇಲ್ಲಿ ಫಸ್ಟ್ ಕಂ ಫಸ್ಟ್ ಸರ್ವ್  ಆಧಾರದ ಮೇಲೆ  ಟಿಕೆಟ್ ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಎಸಿ 3-ಟೈರ್, ಎಸಿ 2-ಟೈರ್ ಮತ್ತು ಫಸ್ಟ್ ಕ್ಲಾಸ್‌ ಹೀಗೆ ಎಸಿ ಕ್ಲಾಸ್ ಗಳಿಗೆ  ತತ್ಕಾಲ್ ಸ್ಲಾಟ್ ಬೆಳಿಗ್ಗೆ 10 ಗಂಟೆಗೆ ಓಪನ್ ಆದರೆ, ಸ್ಲೀಪರ್ ಕ್ಲಾಸ್‌ಗೆ ಬೆಳಗ್ಗೆ 11 ಗಂಟೆಯಿಂದ ಟಿಕೆಟ್ ವಿಂಡೋ ತೆರೆಯುತ್ತದೆ. ಎಸಿ ಆಗಿರಲಿ ಅಥವಾ ಸ್ಲೀಪರ್ ಕ್ಲಾಸ್ ಆಗಿರಲಿ ತತ್ಕಾಲ್‌ಗಾಗಿ ಕೆಲವೇ ಸೀಟುಗಳು ಅಥವಾ ಬರ್ತ್‌ಗಳನ್ನು ಮಾತ್ರ ಕಾಯ್ದಿರಿಸಲಾಗಿರುತ್ತದೆ. 
 
ಇದನ್ನೂ ಓದಿ :  ಯುವಕರಿಗೆ ಮೋದಿ ಸರ್ಕಾರ ಪ್ರತಿ ತಿಂಗಳು ನೀಡುವುದು 50 ಸಾವಿರ ರೂಪಾಯಿ.! ಇಂದೇ ಅರ್ಜಿ ಸಲ್ಲಿಸಿ


ತತ್ಕಾಲ್ ಶುಲ್ಕವನ್ನು ಕನಿಷ್ಠ ಮತ್ತು ಗರಿಷ್ಠ ಶುಲ್ಕಕ್ಕೆ ಒಳಪಟ್ಟು ನಿಗದಿಪಡಿಸಲಾಗಿರುತ್ತದೆ. ದ್ವಿತೀಯ ದರ್ಜೆಯ ಮೂಲ ದರದ ಶೇಕಡಾ 10 ಮತ್ತು ಇತರ ಎಲ್ಲಾ ವರ್ಗಗಳಿಗೆ ಮೂಲ ದರದ ಶೇಕಡಾ 30 ರ ದರದಲ್ಲಿ ತತ್ಕಾಲ್ ಟಿಕೆಟ್ ಶುಲ್ಕ ನಿಗದಿಯಾಗಿರುತ್ತದೆ. ಕೊನೆ ಕ್ಷಣದಲ್ಲಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾದಾಗ ತತ್ಕಾಲ್ ಟಿಕೆಟ್‌ ಭಾರೀ ಅನುಕೂಲವಾಗಿರುತ್ತದೆ. ಆದರೆ, ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ ಎಂದರೆ, ತತ್ಕಾಲ್ ಟಿಕೆಟ್ ರದ್ದುಗೊಳಿಸಿದರೆ,  ರಿಫಂಡ್ ಆಗುವುದಿಲ್ಲ. 


ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಕೇವಲ ಒಂದು ಗಂಟೆಯ ಸಮಯಾವಕಾಶವಿರುತ್ತದೆ. ಈ ಅವದಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ನಾಲ್ಕು ಆಸನಗಳನ್ನು ಮಾತ್ರ ಬುಕ್ ಮಾಡಬಹುದು. ಅತ್ಯಂತ ವೇಗವಾಗಿ ಟಿಕೆಟ್ ಬುಕ್ ಮಾಡಬೇಕಾದರೆ ವೆಬ್ ಬ್ರೌಸರ್‌ ಮೂಲಕ ಟಿಕೆಟ್ ಬುಕ್ ಮಾಡಿದರೆ ಉತ್ತಮ.  


ಇದನ್ನೂ ಓದಿ :  ಜನವರಿ ಒಂದರಿಂದ ಬ್ಯಾಂಕ್ ಲಾಕರ್, ಕ್ರೆಡಿಟ್ ಕಾರ್ಡ್‌ ನಿಯಮಗಳಲ್ಲಿ ಬದಲಾವಣೆ


ವೆಬ್ ಬ್ರೌಸರ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ ? :
1.IRCTC ವೆಬ್‌ಸೈಟ್‌ಗೆ ಹೋಗಿ. 
2. ಪೇಜಿನ ಮೇಲಿನ ಬಲ ಮೂಲೆಯಲ್ಲಿರುವ‘Options Menu’ಮೇಲೆ ಕ್ಲಿಕ್ ಮಾಡಿ. ಈಗ  ಸೈಡ್ ಪ್ಯಾನೆಲ್‌ನಲ್ಲಿ ‘Login’ ಆಯ್ಕೆ ಕಾಣಿಸುತ್ತದೆ. 
3. ಒಮ್ಮೆ ಲಾಗಿನ್ ಆದ ನಂತರ, 'Book Ticket’ಆಯ್ಕೆಯನ್ನು ಕಾಣಬಹುದು.
4.  ಇಲ್ಲಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಎನ್ನುವುದನ್ನು ನಮೂದಿಸಬೇಕು.   
5. ಅದರ ಕೆಳಗಿರುವ ಡ್ರಾಪ್‌ಡೌನ್ ಮೆನುವಿನಿಂದ, Tatkal’ ಆಯ್ಕೆಯನ್ನು ಆರಿಸಿ. 
6.  ಪ್ರಯಾಣ ಬೆಳೆಸಬೇಕಾದ ದಿನಾಂಕವನ್ನು ನಮೂದಿಸಿ. ಹಾಗೆಯೇ ಯಾವ ಕ್ಲಾಸ್ ನಲ್ಲಿ ಪ್ರಯಾಣ ಮಾಡಬೇಕು ಎನ್ನುವುದನ್ನು ಕೂಡಾ ಆಯ್ಕೆಮಾಡಿ. ಇಷ್ಟಾದ ನಂತರ  ‘Search’ ಮೇಲೆ ಕ್ಲಿಕ್ ಮಾಡಿ.
7. ನೀವು ಆರಿಸಿದ ದಿನಾಂಕದಂದು ನೀವು ಆರಿಸಿದ ನಿಲ್ದಾಣಗಳ ಮಧ್ಯೆ ಚಲಿಸುವ ರೈಲುಗಳ ಪಟ್ಟಿ ಪರದೆ ಮೇಲೆ ಕಾಣಿಸುತ್ತದೆ. ತತ್ಕಾಲ್ ಕೋಟಾದ ಅಡಿಯಲ್ಲಿ ಟಿಕೆಟ್‌ಗಳು ಲಭ್ಯವಿದ್ದರೆ, 'Book Now’ ಮೇಲೆ ಕ್ಲಿಕ್ ಮಾಡಿ.
8. ಈಗ ಪ್ರಯಾಣಿಕರ ವಿವರಗಳನ್ನು ತುಂಬಲು ರಿ ಡೈರೆಕ್ಟ್ ಮಾಡಲಾಗುತ್ತದೆ.  ಇಲ್ಲಿ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ಬರ್ತ್ ಆದ್ಯತೆಯನ್ನು  ನಮೂದಿಸಿ. 
9. ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪುಟದ ಕೆಳಭಾಗದಲ್ಲಿ ಕ್ಯಾಪ್ಚಾ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. 
10. ನಿಮ್ಮ ಆದ್ಯತೆಯ ಪಾವತಿ ಆಯ್ಕೆಯನ್ನು ಆರಿಸಿ ಮತ್ತು ಪಾವತಿ ಮಾಡಿ.
11 . ಟಿಕೆಟ್ ವಿವರಗಳನ್ನು ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.