ಯುವಕರಿಗೆ ಮೋದಿ ಸರ್ಕಾರ ಪ್ರತಿ ತಿಂಗಳು ನೀಡುವುದು 50 ಸಾವಿರ ರೂಪಾಯಿ.! ಇಂದೇ ಅರ್ಜಿ ಸಲ್ಲಿಸಿ

ಈ ಯೋಜನೆಯಡಿಯಲ್ಲಿ, 30 ವರ್ಷದೊಳಗಿನ ಯುವಕರು ಭಾಗವಹಿಸಬಹುದು. ಇದಕ್ಕಾಗಿ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Written by - Ranjitha R K | Last Updated : Dec 28, 2022, 10:59 AM IST
  • ಯುವಕರಿಗಾಗಿ 'ಪಿಎಂ ಯುವ 2.0 ಯೋಜನೆ' ಆರಂಭ
  • ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯುವ ಅವಕಾಶ
  • ಪ್ರತಿ ತಿಂಗಳು 50,000 ರೂ. ವಿದ್ಯಾರ್ಥಿ ವೇತನ
ಯುವಕರಿಗೆ ಮೋದಿ ಸರ್ಕಾರ ಪ್ರತಿ ತಿಂಗಳು ನೀಡುವುದು 50 ಸಾವಿರ ರೂಪಾಯಿ.! ಇಂದೇ ಅರ್ಜಿ ಸಲ್ಲಿಸಿ   title=
PM Yuva Yojana

ಬೆಂಗಳೂರು : ಕೇಂದ್ರ ಸರ್ಕಾರ ಯುವಕರಿಗಾಗಿ 'ಪಿಎಂ ಯುವ 2.0 ಯೋಜನೆ' ಆರಂಭಿಸಲಾಗುತ್ತಿದೆ. ಇದರ ಅಡಿಯಲ್ಲಿ ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯುವ ಅವಕಾಶ ನೀಡಲಾಗುತ್ತಿದೆ. ಈ  ಯೋಜನೆಯಡಿ ಆಯ್ಕೆಯಾಗುವ ಯುವ ಬರಹಗಾರರಿಗೆ ಪ್ರತಿ ತಿಂಗಳು 50,000 ರೂ.ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

30 ವರ್ಷದೊಳಗಿನವರು ಈ ಯೋಜನೆಯಲ್ಲಿ ಭಾಗವಹಿಸಬಹುದು :
ಯೋಜನೆಯಡಿಯಲ್ಲಿ, 30 ವರ್ಷದೊಳಗಿನ ಯುವಕರು ಭಾಗವಹಿಸಬಹುದು. ಇದಕ್ಕಾಗಿ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಯುವ ಮತ್ತು ಹೊಸ ಬರಹಗಾರರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ಯುವ ಯೋಜನೆಯ ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಿದೆ. ದೇಶದಲ್ಲಿ ಓದುವ ಮತ್ತು ಬರೆಯುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ : Gold Price Today : ಚಿನ್ನ ಖರೀದಿಸಬೇಕೆ? ಹಾಗಿದ್ದರೆ ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ ತಿಳಿಯಿರಿ

ಈ ಯೋಜನೆಯಡಿಯಲ್ಲಿ 75 ಬರಹಗಾರರನ್ನು ಆಯ್ಕೆ ಮಾಡಲಾಗುವುದು : 
ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಒಟ್ಟು 75 ಬರಹಗಾರರನ್ನು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (NBT) ಆಯ್ಕೆ ಮಾಡುತ್ತದೆ.  ತರಬೇತಿ ಮತ್ತು ಮಾರ್ಗದರ್ಶನದ ಕೊನೆಯಲ್ಲಿ ಪ್ರತಿ ತಿಂಗಳಿಗೆ 50,000 ರೂ. ಶಿಷ್ಯವೇತನದಂತೆ ಆರು ತಿಂಗಳಿಗೆ ಪ್ರತಿ ಯುವ ಬರಹಗಾರರಿಗೆ 3 ಲಕ್ಷ ರೂ. ನೀಡಲಾಗುವುದು. 

ಈ ಭಾಷೆಗಳಲ್ಲಿ ಅರ್ಜಿ ಸಲ್ಲಿಸಬಹುದು :
22 ವಿವಿಧ ಭಾಷೆಗಳನ್ನು ಬಲ್ಲವರು ು 'PM ಯುವ 2.0 ಯೋಜನೆ'ಯಲ್ಲಿ ಭಾಗವಹಿಸಬಹುದು. ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮಿ, ಬಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ  ಭಾಷೆಗಳನ್ನು ಬಲ್ಲವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ? :
ಮೊದಲು https://innovateindia.mygov.in/yuva/ ವೆಬ್‌ಸೈಟ್‌ಗೆ ಹೋಗಿ. ಇಲ್ಲಿ ಕೆಳಗಿನ ಎಡಭಾಗದಲ್ಲಿರುವ 'Click here to submit' ಮೇಲೆ ' ಕ್ಲಿಕ್ ಮಾಡಿ. PM ಯುವ 2.0 ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಇಲ್ಲಿ ನೀವು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ,  ಸಲ್ಲಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News