BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್ ಗಿಫ್ಟ್ : ಈ ವಿಶೇಷ ಯೋಜನೆಗಳಿಗೆ ನೀಡುತ್ತಿದೆ 25% ರಿಯಾಯಿತಿ
ಬಿಎಸ್ಎನ್ಎಲ್ ತನ್ನ ಗ್ರಾಹಕರ ರೀಚಾರ್ಜ್ ಮುಗಿದ ನಂತರ ಮೊಬೈಲ್ ಸಂಪರ್ಕವನ್ನು ಕೊನೆಗೊಳಿಸುವ ಮೊದಲು ಎರಡು ಗ್ರೇಸ್ ಅವಧಿಗಳನ್ನು ನೀಡುತ್ತದೆ.
ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಕೊಡುಗೆಯನ್ನು ತಂದಿದೆ. ಕಂಪನಿಯು ಹೊಸ ಗ್ರೇಸ್ ಪ್ರಿಪೇಯ್ಡ್ 2 ಯೋಜನೆಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಹೊಸ ಯೋಜನೆಗಳಲ್ಲಿ ಗ್ರಾಹಕರು ಶೇಕಡಾ 25 ರಷ್ಟು ರಿಯಾಯಿತಿ ಪಡೆಯುತ್ತಿದ್ದಾರೆ. ಈ ಕೊಡುಗೆಗಳನ್ನು ಎಸ್‌ಟಿವಿ 187 (STV 187) ಮತ್ತು ಪ್ಲಾನ್ ವೋಚರ್ 1,499 (Plan voucher 1,499) ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.
ಎಸ್‌ಟಿವಿ 187 ಯೋಜನೆಯ ಲಾಭಗಳು:
ಎಸ್‌ಟಿವಿ 187 ಯೋಜನೆಗೆ 187ರೂ. ಪಾವತಿಸಬೇಕಾಗಿದೆ. ಆದರೆ ಹೊಸ ರಿಯಾಯಿತಿಯ ನಂತರ ಈ ರೀಚಾರ್ಜ್ ಯೋಜನೆಯನ್ನು 139 ರೂ.ಗಳಿಗೆ ಖರೀದಿಸಬಹುದು. ಇದರಲ್ಲಿ ಬಿಎಸ್ಎನ್ಎಲ್ (BSNL) ಬಳಕೆದಾರರಿಗೆ ಅನಿಯಮಿತ ಕರೆಗಳನ್ನು ಮಾಡುವ ಸೌಲಭ್ಯವನ್ನು ನೀಡುತ್ತಿದೆ. ಇದರ ಹೊರತಾಗಿ ಗ್ರಾಹಕರಿಗೆ ಪ್ರತಿದಿನ 2 ಜಿಬಿ ಡೇಟಾ ಕೂಡ ಸಿಗುತ್ತದೆ. ಇದರೊಂದಿಗೆ ಅದರ ಸಿಂಧುತ್ವವು 28 ದಿನಗಳವರೆಗೆ ಇರುತ್ತದೆ.
Airtel, Jio, Vi, BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ
Plan Voucher 1,499 :-
ಪ್ಲಾನ್ ವೋಚರ್ 1,499 ಗೆ ಗ್ರಾಹಕರು 1,499 ರೂ.ಗಳನ್ನು ಖರ್ಚು ಮಾಡಬೇಕಾಗಿಲ್ಲ. ಬಿಎಸ್‌ಎನ್‌ಎಲ್‌ನ ಈ ಯೋಜನೆಗೆ ಗ್ರಾಹಕರು 1,119 ರೂ. ಗೆ ಸಿಗಲಿದೆ. 1,499 ರೂ.ಗಳ ಯೋಜನೆಯಲ್ಲಿ ಗ್ರಾಹಕರಿಗೆ 365 ದಿನಗಳ ಮಾನ್ಯತೆ ಸಿಗುತ್ತದೆ. ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಂಎಸ್ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ನೀಡಲಾಗುತ್ತದೆ. ಅಲ್ಲದೆ 24 ಜಿಬಿ ಡೇಟಾ ಸಹ ಇದರಲ್ಲಿ ಲಭ್ಯವಿದೆ.
BSNLನ ಅದ್ಭುತ ಯೋಜನೆ, ಈಗ ಮೊಬೈಲ್ ರೀಚಾರ್ಜ್ ಆಗಲಿದೆ Free!
ಬಿಎಸ್ಎನ್ಎಲ್ ತನ್ನ ಗ್ರಾಹಕರ ರೀಚಾರ್ಜ್ ಮುಗಿದ ನಂತರ ಮೊಬೈಲ್ ಸಂಪರ್ಕವನ್ನು ಕೊನೆಗೊಳಿಸುವ ಮೊದಲು ಎರಡು ಗ್ರೇಸ್ ಅವಧಿಗಳನ್ನು ನೀಡುತ್ತದೆ.
- ಗ್ರೇಸ್ ಅವಧಿ 1ರಲ್ಲಿಅದರ ಸಿಂಧುತ್ವವು 7 ದಿನಗಳು.
- ಗ್ರೇಸ್ ಪೀರಿಯಡ್ 2 ಗೆ ಬಂದಾಗ ಇದು 1 ನೇ ಅವಧಿ ಮುಗಿದ ನಂತರ ಎಂಟನೇ ದಿನದಿಂದ ಪ್ರಾರಂಭವಾಗುತ್ತದೆ ಮತ್ತು 172ನೇ ದಿನದವರೆಗೆ ಮುಂದುವರಿಯುತ್ತದೆ. ಅಂದರೆ ಅದರ ಸಿಂಧುತ್ವವು 165 ದಿನಗಳು.