ನವದೆಹಲಿ: ಬಿಎಸ್ಎನ್ಎಲ್ ಮತ್ತೊಮ್ಮೆ ಹಳೆಯ ಮೂಡ್ ಗೆ ತೆರಳುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯಿಂದ ನೀಡಲಾಗುತ್ತಿರುವ ಒಂದಕ್ಕಿಂತ ಒಂದು ಹೊಸ ಹೊಸ ಯೋಜನೆಗಳು ಖಾಸಗಿ ಟೆಲಿಕಾಂ ಆಪರೇಟರ್ಗಳಿಗೆ ಟಕ್ಕರ್ ನೀಡುತ್ತಿದೆ. ಈಗ ಈ ಸಂಚಿಕೆಯಲ್ಲಿ ಬಿಎಸ್ಎನ್ಎಲ್ (BSNL) ಗ್ರಾಹಕರಿಗೆ ಮೊಬೈಲ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
Paytm ನಿಂದ ಮೊದಲ ಬಾರಿಗೆ ರೀಚಾರ್ಜ್ನಲ್ಲಿ 100% ಕ್ಯಾಶ್ಬ್ಯಾಕ್:
ಬಿಎಸ್ಎನ್ಎಲ್ ಇತ್ತೀಚೆಗೆ ಆನ್ಲೈನ್ ಪಾವತಿ ವೇದಿಕೆ ಪೇಟಿಎಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಗ್ರಾಹಕರು Paytm ನಿಂದ ಮೊದಲ ರೀಚಾರ್ಜ್ನಲ್ಲಿ 100% ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ಅಂದರೆ ಗ್ರಾಹಕರು Paytm ನೊಂದಿಗೆ ರೀಚಾರ್ಜ್ ಮಾಡಲು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಹೊಸ ಅಭಿಯಾನಕ್ಕೆ 'ಫರ್ಸ್ಟ್ ರೀಚಾರ್ಜ್ ಫ್ರೀ' (‘First Recharge Free’) ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಬಿಎಸ್ಎನ್ಎಲ್ ಮಾಹಿತಿ ಹಂಚಿಕೊಂಡಿದೆ.
ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
Recharge your #BSNL number through @Paytm for the first time and get 100% #Cashback! #CustomerDelighthttps://t.co/luQ3hrzmCN#Unite2FightCorona pic.twitter.com/G2AOYcuhW8
— BSNL India (@BSNLCorporate) November 2, 2020
ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರಾಹಕರು ತಮ್ಮ ಬಿಎಸ್ಎನ್ಎಲ್ ಮೊಬೈಲ್ ಸಂಪರ್ಕಕ್ಕಾಗಿ ಪೇಟಿಎಂ ಮೂಲಕ ರೀಚಾರ್ಜ್ ಮಾಡಿದರೆ, ಕ್ಯಾಶ್ಬ್ಯಾಕ್ ಮಾತ್ರ ಲಭ್ಯವಿರುತ್ತದೆ. ಕ್ಯಾಶ್ಬ್ಯಾಕ್ನ ಗರಿಷ್ಠ ಮೊತ್ತ 50 ರೂಪಾಯಿಗಳು. ಅಂದರೆ ಗ್ರಾಹಕರು Paytm ನಿಂದ ರೀಚಾರ್ಜ್ ಮಾಡಿದಾಗ, ಈ ಮೊತ್ತವು ಅವರ Paytm ಖಾತೆಯಲ್ಲಿ ಬರುತ್ತದೆ.
BSNL ಗ್ರಾಹಕರಿಗೆ ಗುಡ್ ನ್ಯೂಸ್, ಈಗ ಡಿಸೆಂಬರ್ವರೆಗೆ ಸಿಗಲಿದೆ ಈ ಸೌಲಭ್ಯ
ಬಿಎಸ್ಎನ್ಎಲ್ನ 365 ರೂಪಾಯಿ ಯೋಜನೆ:
ಪ್ರಿಪೇಯ್ಡ್ ಗ್ರಾಹಕರಿಗೆ 365 ರೂ.ಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ. ಈ ಯೋಜನೆಯ ಸಿಂಧುತ್ವವು ಪೂರ್ಣ ವರ್ಷ ಅಂದರೆ 365 ದಿನಗಳು. ಈ ರೀಚಾರ್ಜ್ನಲ್ಲಿ, ಗ್ರಾಹಕರು ಪ್ರತಿದಿನ 250 ನಿಮಿಷಗಳ ಕಾಲ ಉಚಿತ ಕರೆ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದಲ್ಲದೆ ಗ್ರಾಹಕರು ಪ್ರತಿದಿನ 100 ಉಚಿತ ಎಸ್ಎಂಎಸ್ ಸೇವೆಯನ್ನೂ ಪಡೆಯಬಹುದು.