Budget 2021-22 Updates: ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ, ನಿರೀಕ್ಷೆಗಳೇನು?
Budget 2021-22: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ದೇಶದ ವಿಭಿನ್ನ ಕ್ಷೇತ್ರಗಳಿಗೆ ವಿತ್ತ ಸಚಿವರು ಬಜೆಟ್ ಘೋಷಿಸಲಿದ್ದಾರೆ. ಈ ಬಾರಿಯ ಬಜೆಟ್ ಪ್ರತಿ ಬಾರಿಯ ಬಜೆಟ್ ಗಿಂತ ಭಿನ್ನವಾಗಿರಲಿದೆ. ಏಕೆಂದರೆ ಕೊರೊನಾ ಪ್ರಕೋಪದ ಸವಾಲುಗಳ ನಡುವೆ ಈ ಬಜೆಟ್ ಮಂಡನೆಯಾಗುತ್ತಿದೆ.
Budget 2020-21: ಇಂದು ದೇಶದ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ದಶಕದ ಮೊದಲ ಬಜೆಟ್ ಮಂಡಿಸಲಿದ್ದಾರೆ. ಸೀತಾರಾಮನ್ ಅವರ ಈ ಬಜೆಟ್ ನಿಂದ ಜನಸಾಮಾನ್ಯರಿಗೆ ಭಾರಿ ನಿರೀಕ್ಷೆ ಇದೆ. ನಿರ್ಮಲಾ ಸೀತಾರಾಮನ್ ತಮ್ಮ 'ವಹಿ-ಖಾತಾ' (ಖಾತಾ ಕೀರ್ದಿ)ದಿಂದ ಸಾಮಾನ್ಯ ಜನರಿಗೆ ಏನು ನೀಡಲಿದ್ದಾರೆ ಎಂಬುದು ಶ್ರೀಸಾಮಾನ್ಯರ ನಿರೀಕ್ಷೆ. ಕೊರೊನಾ ಪ್ರಕೋಪದ ಹಿನ್ನೆಲೆ ಹಳಿತಪ್ಪಿದ ದೇಶದ ಅರ್ಥವ್ಯವಸ್ಥೆಯನ್ನು ಪುನಃ ಹಳಿಗೆ ತರಲು ಈ ಬಜೆಟ್ ನಲ್ಲಿ ಮಹತ್ವಪೂರ್ಣ ಘೋಷಣೆಗಳು ಆಗುವ ನಿರೀಕ್ಷೆ ಇದೆ. ಸೇವಾ ಕ್ಷೇತ್ರ, ಮೂಲಭೂತ ಸೌಕರ್ಯಾಭಿವೃದ್ಧಿ ಹಾಗೂ ರಕ್ಷಣಾ ವಲಯದ ಮೇಲೆ ಹೆಚ್ಚಿನ ಖರ್ಚು ಮಾಡುವ ಮೂಲಕ ಆರ್ಥಿಕ ಸುಧಾರಣೆಗಳನ್ನು ಮುಂದಕ್ಕೆ ಕೊಂಡೊಯ್ಯುವುದರ ಮೇಲೆ ಅಧಿಕ ಗಮನ ಕೇಂದ್ರೀಕರಿಸುವ ಸಾಧ್ಯತೆಗಳಿವೆ.
ಇದು ಈ ದಶಕದ ಮೊದಲ ಸಾಮಾನ್ಯ ಬಜೆಟ್ ಆಗಿದೆ. ಒಂದು ಆಂತರಿಕ ಬಜೆಟ್ ಅನ್ನು ಜೋಡಿಸಿ ಹೇಳುವುದಾದರೆ, ಇದು ಮೋದಿ ಸರ್ಕಾರದ 9 ನೇ ಬಜೆಟ್ ಆಗಿರಲಿದೆ. ಪ್ರಸ್ತುತ ದೇಶ ಕೊವಿಡ್ -19 ಸಂಕಷ್ಟದಿಂದ ಹೊರಬೀಳುತ್ತಿರುವುದರ ನಡುವೆ ಈ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆ ಈ ಬಜೆಟ್ ಭಾರಿ ಮಹತ್ವಪಡೆದುಕೊಂಡಿದೆ.
ದೇಶ ಕೊವಿಡ್ ಸಂಕಷ್ಟದಿಂದ ಹೊರಬೀಳಲು ಪ್ರಯತ್ನಿಸುತ್ತಿರುವುದರ ನಡುವೆ ವ್ಯಾಪಕ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಉದಾರ ಹಣ ನೀಡುವ ಆವಶ್ಯಕತೆ ಇದೆ. ಈ ಬಜೆಟ್ ನಲ್ಲಿ ಸಾಮಾನ್ಯ ತೆರಿಗೆ ಪಾವತಿದಾರರ ಕೈಯಲ್ಲಿ ಹೆಚ್ಚಿನ ಹಣ ನೀಡುವ ಹಾಗೂ ವಿದೇಶಗಳಿಂದ ತೆರಿಗೆ ಆಕರ್ಷಿಸಲು ನಿಯಮಗಳಲ್ಲಿ ಸಡಿಲಿಕೆಯಾಗುವ ನಿರೀಕ್ಷೆ ಇದೆ.
Budget 2021-22 ರಿಂದ ನಿರೀಕ್ಷೆಗಳೇನು
1. ಷೇರು ಮಾರುಕಟ್ಟೆ ಮುಂಬೈ ಷೇರು ಸೂಚ್ಯಂಕ ಐತಿಹಾಸಿಕ 50 ಸಾವಿರ ಮಟ್ಟವನ್ನು ತಲುಪಿ ಕಳೆದ ಸುಮಾರು ಆರು ದಿನಗಳಿಂದ ನಿರಂತರ ಕುಸಿಯುತ್ತಲೇ ಇದೆ. ವಿದೇಶಿ ಬಂಡವಾಳ ಹೂಡಿಕೆದಾರರು ವ್ಯಾಪಕ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇಂತಹುದರಲ್ಲಿ ಸೆನ್ಸೆಕ್ಸ್ ಅನ್ನು ಮತ್ತೊಂದು ಹೊಸ ದಾಖಲೆಯ ಮಟ್ಟಕ್ಕೆ ಕೊಂಡೊಯ್ಯಲು ವಿತ್ತ ಸಚಿವರು ಹೆಜ್ಜೆ ಇಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕು.
ಇದನ್ನು ಓದಿ- Union Budget ಇತಿಹಾಸ - ಬಜೆಟ್‌ಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ
2. ಬಜೆಟ್ ಗೂ ಮೊದಲು ವಿದೇಶಿ ಬಂಡವಾಳ ಹೂಡಿಕೆದಾರರು ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಶೇರುಗಳ ಮೇಲಿನ ಲಾಂಗ್ ಟರ್ಮ್ ಗೆನ್ ಟ್ಯಾಕ್ಸ್ ಹೆಚ್ಚಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಇದೀಗ ಎಲ್ಲರ ದೃಷ್ಟಿ ಬಜೆಟ್ ಮೇಲೆ ನೆಟ್ಟಿದೆ.
3. ಕಳೆದ 10 ವರ್ಷಗಳ ಹೋಲಿಕೆಯಲ್ಲಿ ಈ ವರ್ಷ ಚಿನ್ನದ ಆರಂಭ ತುಂಬಾ ಕಳಪೆಮಟ್ಟದ್ದಾಗಿದೆ. ಜನವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಶೇ.3 ರಷ್ಟು ಕುಸಿದಿದೆ. ಇಂತಹುದರಲ್ಲಿ ಬಜೆಟ್ ಚಿನ್ನ-ಬೆಳ್ಳಿಯ ಬೆಲೆಯ ಮೇಲೆ ಭಾರಿ ಪ್ರಭಾವ ಬೀರುವ ನಿರೀಕ್ಷೆ ಹೊಂದಲಾಗಿದೆ. ಚಿನ್ನವನ್ನು ಅಗ್ಗವಾಗಿಸಲು ಟ್ಯಾಕ್ಸ್ ಕಡಿತ ಮಾಡಿದರೆ ಪುನಃ ಹೊಸದೊಂದು ಎತ್ತರಕ್ಕೆ ಚಿನ್ನ ಹೋಗಬಹುದು.
4. ಪ್ರಸ್ತುತ ಅಮೇರಿಕಾದ ಡಾಲರ್ ಹೋಲಿಕೆಯಲ್ಲಿ ರೂಪಾಯಿ ಮೌಲ್ಯ 73 ರೂ.ಗಳಾಗಿದೆ. ಇಂತಹುದರಲ್ಲಿ ರೂಪಾಯಿ ಮೌಲ್ಯ ಬಲವರ್ಧನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿರಲಿದೆ.
5. ಕೊರೊನಾ ಪ್ರಕೋಪದ ಹಿನ್ನೆಲೆ ಹಲವರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಈ ಬಾರಿಯ ಬಜೆಟ್ ನಲ್ಲಿ ಯಾವ ಯಾವ ಘೋಷಣೆಗಳಾಗಲಿವೆ ಇದರ ಮೇಲೆ ಎಲ್ಲರ ದೃಷ್ಟಿ ಇರಲಿದೆ.
ಇದನ್ನು ಓದಿ- ಇಂದು Union Budgetನಲ್ಲಿ ಕರ್ನಾಟಕಕ್ಕೆ ಏನೇನು ಸಿಗಬಹುದು?
6. ಈ ಬಾರಿಯ ಬಜೆಟ್ ನಲ್ಲಿ ಹೂಡಿಕೆಯ ಮೇಲೆ 80 ಸಿ ಅಡಿ ಹಾಗೂ NPS ಅಡಿ ಸಿಗುವ ತೆರಿಗೆ ವಿನಾಯ್ತಿಯ ಪರಧಿ ವಿಸ್ತರಣೆಯಾಗಬಹುದೇ ಎಂಬುದ ಸಾಮಾನ್ಯ ತೆರಿಗೆ ಪಾವತಿದಾರರ ಪ್ರಶ್ನೆ. ಏಕೆಂದರೆ 2014 ರಿಂದ ಇದರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ. ವರ್ತಮಾನದಲ್ಲಿ ತೆರಿಗೆ ವಿನಾಯ್ತಿಯ ಪರಿಧಿ 2.5 ಲಕ್ಷಕ್ಕೆ ಸೀಮಿತವಾಗಿದೆ. ಇದರ ವಿಸ್ತರಣೆಯಾಗಬೇಕು ಎಂಬುದು ಸಾಮಾನ್ಯ ತೆರಿಗೆ ಪಾವತಿದಾರರ ನಿರೀಕ್ಷೆ.
7. 'ಕುಸುಮ್' ಯೋಜನೆಯ ವಿಸ್ತಾರ ರೈತರ ನಿರೀಕ್ಷೆಯಾಗಿದೆ. ಈ ಯೋಜನೆಯ ಅಡಿ ರೈತರಿಗೆ ಸಬ್ಸಿಡಿ ಆಧಾರದ ಮೇಲೆ ಸೋಲಾರ್ ಪ್ಯಾನೆಲ್ ನೀಡಲಾಗುತ್ತದೆ.
8. ಕೃಷಿಯಲ್ಲಿ ಹೂಡಿಕೆ ಹೆಚ್ಚಿಸುವುದರ ಜೊತೆಗೆ ಕೃಷಿ ಸಾಲದಲ್ಲಿ ಶೇ.25 ರಷ್ಟು ಏರಿಕೆಯಾಗಬೇಕು ಎಂಬುದು ರೈತರ ಮತ್ತೊಂದು ಬೇಡಿಕೆಯಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ದೇಶದ ರೈತರ ಗಮನ ಇದರ ಮೇಲಿರಲಿದೆ
9. ಕೊರೊನಾ ಸಂಕಷ್ಟದ ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ರೇಟ್ ಗಳಲ್ಲಿ ಭಾರಿ ಕಡಿತ ಕೈಗೊಂಡಿದೆ. ಇದಾದ ಬಳಿಕ ದೇಶದ ವಿವಿಧ ಬ್ಯಾಂಕ್ ಗಳು ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಭಾರಿ ಇಳಿಕೆ ಮಾಡಿವೆ. ಇದರ ಜೊತೆಗೆ FD ಸೇರಿದಂತೆ ಎಲ್ಲ ಉಳಿತಾಯ ಯೋಜನೆಗಳ ಮೇಲಿಂದ ಬಡ್ಡಿದರಗಳನ್ನು ಸಹ ಇಳಿಕೆ ಮಾಡಿವೆ. ದೇಶದ ಹಿರಿಯ ನಾಗರಿಕರಿಗೆ ಇದರಿಂದ ದೊಡ್ಡ ಹಾನಿಯಾಗಿದೆ. ಹೀಗಾಗಿ ಬಡ್ಡಿ ದರಗಳಲ್ಲಿ ಏರಿಕೆಯ ನಿರೀಕ್ಷೆ ವಿತ್ತ ಸಚಿವರ ಮುಂದಿನ ಸಾವಾಲಾಗಿದೆ.
ಇದನ್ನು ಓದಿ- ಇಂದು Union Budgetನಲ್ಲಿ ಕರ್ನಾಟಕಕ್ಕೆ ಏನೇನು ಸಿಗಬಹುದು?
10. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳನ್ನು ನಿಯಂತ್ರಿಸಲು ಅವುಗಳನ್ನು GST ವ್ಯಾಪ್ತಿಗೆ ತರಬೇಕು ಎಂಬುದು ಜನಸಾಮಾನ್ಯರ ಬಹುಕಾಲದ ಬೇಡಿಕೆಯಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ ಪರಿಹಾರ ಸಿಗಲಿದೆಯೇ ಎಂಬುದು ಕಾಲವೇ ನಿರ್ಧರಿಸಲಿದೆ.
11. ಕೊರೊನಾ ಹಿನ್ನೆಲೆ ಕಡಿಮೆಯಾದ ಆದಾಯ ಸಂಗ್ರಹಣೆಯನ್ನು ಸರಿದೂಗಿಸಲು ಕರೋನಾ ಸೆಸ್ ಅನ್ನು ವಿಧಿಸಲಾಗುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಸೆಸ್ ಅನ್ನು ಯಾವ ಐಟಂನಲ್ಲಿ ಅನ್ವಯಿಸಲಾಗುತ್ತದೆ ಎಂಬುದರ ಉತ್ತರ ಬಜೆಟ್ ನಲ್ಲಿ ಮಾತ್ರ ಸಿಗಲಿದೆ..
12. ಕರೋನಾ ಬಿಕ್ಕಟ್ಟಿನ ನಂತರ ವರ್ಕ್ ಫ್ರಮ್ ಹೋಮ್ ಒಂದು ಹೊಸ ಪ್ರವೃತ್ತಿಯಾಗಿ ಬೆಳೆದಿದೆ. ಹೀಗಾಗಿ ಮನೆಯಿಂದ ಕೆಲಸ ಮಾಡುವ ನೌಕರರು ಹೆಚ್ಚಿನ ತೆರಿಗೆ ಪಾವತಿಸಬೇಕಾಗಬಹುದು. ಇದಕ್ಕೆ ಪರಿಹಾರ ನೀಡಲು ಹಣಕಾಸು ಸಚಿವರು ಯಾವುದೇ ಪ್ರಕಟಣೆ ಕೈಗೊಳ್ಳಲಿದ್ದಾರೆಯೇ? ಲಕ್ಷಾಂತರ ಉದ್ಯೋಗಿಗಳು ಇದನ್ನು ಗಮನಿಸುತ್ತಿದ್ದಾರೆ.
ಇದನ್ನು ಓದಿ-Budget 2021: Corona ಚಿಕಿತ್ಸೆಗೆ ಖರ್ಚು ಹೆಚ್ಚಾಯಿತೇ? ಈ ನೆಮ್ಮದಿ ನೀಡಲು ಸರ್ಕಾರದ ಸಿದ್ಧತೆ!
13. ಸಣ್ಣ ಕೈಗಾರಿಕೆಗಳು ಕರೋನಾದಿಂದ ಹೆಚ್ಚು ನಷ್ಟ ಅನುಭವಿಸಿವೆ. ಬಜೆಟ್ನಿಂದ, ಹಣಕಾಸು ಸಚಿವರು ನಿಧಿ ಸೇರಿದಂತೆ ಇತರ ಅಗತ್ಯಗಳಿಗಾಗಿ ವಿಶೇಷ ನಿಬಂಧನೆಗಳನ್ನು ಮಾಡುತ್ತಾರೆ ಎಂಬುದರ ಕಡೆಗೆ ಈ ವಲಯ ಭರವಸೆಯ ಕಣ್ಣುಗಳಿಂದ ನೋಡುತ್ತಿದೆ.
14. ಕರೋನಾ ಸಾಂಕ್ರಾಮಿಕದ ಆರಂಭದಲ್ಲಿ, ನಗರ ವಸತಿ ಮತ್ತು ಬಾಡಿಗೆ ಮನೆಗಳ ರಚನೆಯ ಕುರಿತು ಸರ್ಕಾರ ಘೋಷಿಸಿತು. ಇದರಲ್ಲಿ ಇಲ್ಲಿಯವರೆಗೆ ಯಾವ ಪ್ರಗತಿ ಸಾಧಿಸಲಾಗಿದೆ ಮತ್ತು ಅದಕ್ಕಾಗಿ ಏನು ಮಾಡಲಾಗುವುದು ಎಂಬುದರ ಉತ್ತರ ಬಜೆಟ್ ನಿಂದ ನಿರೀಕ್ಷಿಸಲಾಗುತ್ತಿದೆ.
15. ಕರೋನಾ ಸಾಂಕ್ರಾಮಿಕ ದೇಶದ ಕಳಪೆ ಆರೋಗ್ಯ ವ್ಯವಸ್ಥೆಯ ಕುರಿತು ನಮ್ಮಲ್ಲಿ ಭಾರಿ ಅರಿವು ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಬಜೆಟ್‌ನಲ್ಲಿ ಈ ನಿಟ್ಟಿನಲ್ಲಿ ಏನು ಮಾಡಲಾಗುವುದು ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ಚಿಕಿತ್ಸೆಯನ್ನು ಒದಗಿಸಲು ಯಾವ ಪ್ರಕಟಣೆಗಳನ್ನು ಮಾಡಲಾಗುವುದು ಎಂಬುದರ ಮೇಲೆ ಎಲ್ಲರ ನಿಗಾ ನೆಟ್ಟಿದೆ.
ಇದನ್ನು ಓದಿ- Budget 2021: ಬಜೆಟ್ ನಲ್ಲಿ ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಕಡಿಮೆ ಬಡ್ಡಿ ದೊಡ್ಡ ಸಾಲ.? ನಿಮಗೂ ಅರ್ಹತೆ ಇದೆಯಾ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.