ನವದೆಹಲಿ: Budget 2021 - ಕರೋನಾ ಸಾಂಕ್ರಾಮಿಕದ ಕಾರಣ ಒಂದು ವೇಳೆ ನಿಮ್ಮ ಆರೋಗ್ಯವು ಹಾಳಾಗಿದ್ದರೆ ಮತ್ತು ಚಿಕಿತ್ಸೆಯಲ್ಲಿ ಭಾರಿ ವೆಚ್ಚವಾಗಿದ್ದರೆ, ಈ ಸುದ್ದಿ ನಿಮಗೆ ಹೆಚ್ಚಿನ ನೆಮ್ಮದಿ ನೀಡಲಿದೆ. ಬಜೆಟ್ನಲ್ಲಿ ಮೋದಿ ಸರ್ಕಾರವು ಕರೋನಾ ಚಿಕಿತ್ಸೆಯಲ್ಲಿ ಖರ್ಚು ಮಾಡಿದ ಹಣವನ್ನು ತೆರಿಗೆ ವಿನಾಯಿತಿಯಲ್ಲಿ ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾ ಚಿಕಿತ್ಸೆಯ ವೆಚ್ಚಕ್ಕೆ ತೆರಿಗೆ ವಿನಾಯ್ತಿ!
ನೀವು ವಾರ್ಷಿಕವಾಗಿ ಮಾಡುವ ಗಳಿಕೆಯ ಮೇಲೆ ಸರ್ಕಾರ ಆದಾಯ ತೆರಿಕ್ಗೆ ವಿಧಿಸುತ್ತದೆ. ಕರೋನಾ(Corona) ಚಿಕಿತ್ಸೆಯಲ್ಲಿ ಖರ್ಚು ಮಾಡಿದ ಮೊತ್ತವನ್ನು ಸರ್ಕಾರ ಒಂದು ವೇಳೆ ಟ್ಯಾಕ್ಸ್ ಡಿಡಕ್ಶನ್ ವ್ಯಾಪ್ತಿಗೆ ಸೇರಿಸಿದರೆ (Corona Treatment Expenses Tax Free), ನಿಮ್ಮ ಆದಾಯದ ಬಹುಪಾಲು ಭಾಗವು ತೆರಿಗೆ ಮುಕ್ತವಾಗಿರುತ್ತದೆ. ಈ ಪ್ರಕಟಣೆಯು ಕರೋನಾ ಸೋಂಕಿಗೆ ಒಳಗಾದ ಮತ್ತು ಚಿಕಿತ್ಸೆಯಲ್ಲಿ ಭಾರಿ ಮೊತ್ತವನ್ನು ಖರ್ಚು ಮಾಡಿದ ಎಲ್ಲರಿಗೂ ದೊಡ್ಡ ನೆಮ್ಮದಿಯನ್ನೇ ನೀಡಲಿದೆ. ಈ ಬಾರಿಯ ಬಜೆಟ್ (Budget 2021 Expectations) ನಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಇದರ ಹೊರತಾಗಿ, ತನ್ನ ಸಂಪನ್ಮೂಲಗಳನ್ನು ಹೆಚ್ಚಿಸಲು, ಸರ್ಕಾರವು ಕೋವಿಡ್ ಬಾಂಡ್‌ಗಳಂತಹ ಹೊಸ ವರ್ಗದ ತೆರಿಗೆ ಉಳಿತಾಯ ಬಾಂಡ್‌ಗಳನ್ನು ಬಜೆಟ್ (Budget 2021)ನಲ್ಲಿ ಪರಿಚಯಿಸಬಹುದು ಎಂದೂ ಕೂಡ ವರ್ತಿಸಲಾಗುತ್ತಿದೆ. ಈ ಬಾಂಡ್‌ಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಸರ್ಕಾರ ಸುಗಮಗೊಳಿಸಬಹುದು.
ಇದನ್ನು ಓದಿ- Budget 2021-22: ರೈತರಿಗೆ ಸಿಗಲಿದೆ ಉಡುಗೊರೆ! Kisan Samman Nidhi ಕೊಡುಗೆಯಲ್ಲಿ ಏರಿಕೆ!
ಭಾರತದಲ್ಲಿ ಕೊರೊನಾ ಪ್ರಕೋಪ
ಪ್ರಪಂಚದ ಇತರೆ ದೇಶಗಳನ್ನು ಸೇರಿದಂತೆ ಭಾರತದಲ್ಲಿಯೂ ಕೂಡ ಕೊರೊನಾ ಅಪಾರ ಹಾನಿಯನ್ನುಂಟು ಮಾಡಿದೆ. ಅಂಕಿಅಂಶಗಳ ಪ್ರಕಾರ, 10 ಕೋಟಿಗೂ ಹೆಚ್ಚು ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಮತ್ತು 1 ಲಕ್ಷ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ, ಕರೋನಾ ವ್ಯಾಕ್ಸಿನೇಷನ್ ಅಭಿಯಾನ ಭಾರತದಲ್ಲಿ ಮುಂದುವರೆದಿದೆ. ಆದರೂ ಕರೋನಾ ಇನ್ನೂ ಸಂಪೂರ್ಣವಾಗಿ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ದೇಶಾದ್ಯಂತ ನೀತಿ ಸುಮಾರು100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿ- Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್
ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತು
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಈ ಬಾರಿಯ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರದ (Budget Expectation Health Secto)r ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವ ನಿರೀಕ್ಷೆ ಇದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಖಾತೆ ಕೀರ್ದಿಯಲ್ಲಿ ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂಬ ನಿರೀಕ್ಷೆ ಇದೆ. ಪ್ರಸ್ತುತ ಜಿಡಿಪಿಯ ಶೇ.1.4 ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ, ಆದರೆ 2024 ರ ವೇಳೆಗೆ ಜಿಡಿಪಿಯ ಶೇ.4 ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುವ ಗುರಿ ಸರ್ಕಾರ ಹೊಂದಿದ್ದರಿಂದ ಸರ್ಕಾರವು ಅದನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನು ಓದಿ-ರೈಲಿನಲ್ಲಿ ಬರಲಿದೆ smart window, ಪ್ರಯಾಣಿಕರ ಪ್ರೈವೆಸಿಗೆ ರೈಲ್ವೆ ಇಲಾಖೆ ಒತ್ತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.