Budget 2021: ಮದ್ಯ ಪ್ರಿಯರಿಗೆ ಶೇ.100 ರ ಬಿಗ್ ಶಾಕ್
Budget 2021: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಆರ್ಥಿಕ ವರ್ಷ 2021-22 ರ ಬಜೆಟ್ ನಲ್ಲಿ ಮದ್ಯಕ್ಕೆ ಸಂಬಂಧಿಸಿದ ಪೇಯಗಳ ಸೆಸ್ ದರವನ್ನು ಶೇ.100 ರಷ್ಟು ಹೆಚ್ಚಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮದ್ಯದ ದರದಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Budget 2021 - ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman)ಮುಂದಿನ ಆರ್ಥಿಕ ವರ್ಷ 2021-22 ರ ಬಜೆಟ್ (Budget 2021) ನಲ್ಲಿ ಮದ್ಯಕ್ಕೆ ಸಂಬಂಧಿಸಿದ ಪೇಯಗಳ ಸೆಸ್ (Agriculture Cess) ದರವನ್ನು ಶೇ.100 ರಷ್ಟು ಹೆಚ್ಚಿಸಿದ್ದಾರೆ. ಕೇಂದ್ರ ಸರ್ಕಾರದ (Modi Government) ಈ ನಿರ್ಧಾರದಿಂದ ಮದ್ಯದ (Agriculture Cess On Alcohol) ದರದಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಿತ್ತ ಸಚಿವರ ಕೆಲ ಪ್ರಮುಖ ಅಂಶಗಳು ಇಲ್ಲಿವೆ
- ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳಲ್ಲಿ ಗ್ಯಾಸ್ ಪೈಪಲೈನ್ ಯೋಜನೆ .
- 1000 ನೂತನ ಗ್ಯಾಸ್ ಏಜೆನ್ಸಿಗಳಿಗೆ ಅನುಮತಿ ನೀಡಲಾಗುವುದು
- ಗ್ರಾಹಕ ಬಂಡವಾಳ ಭದ್ರತಾ ವಿಮೆ 1 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ.
- ವಿಮಾ ಕ್ಷೇತ್ರದಲ್ಲಿ FDI ಶೇ.49 ರಿಂದ ಶೇ.73ಕ್ಕೆ ಏರಿಕೆ.
- ನವೀಕರಿಸಬಹುದಾದ ಇಂಧನಕ್ಕೆ 1.5 ಸಾವಿರ ಕೋಟಿ ರೂ ಅನುದಾನ.
ಇದನ್ನು ಓದಿ- Budget 2021: Pensionನಿಂದ ಬಂದ ಆದಾಯಕ್ಕೆ No Tax, ಯಾವ ಯಾವ ಸರಕುಗಳ ಮೇಲೆ ಕೃಷಿ ಸೆಸ್ ?
- ಉಜ್ವಲಾ ಯೋಜನೆಯ ಲಾಭ 8 ಕೋಟಿ ಜನರಿಗೆ ತಲುಪಿದೆ, ಮತ್ತೆ 1 ಕೋಟಿ ಜನರಿಗೆ ಇದರ ಲಾಭ ನೀಡಲಾಗುವುದು.
- 2021-22 ರಲ್ಲಿ LIC IPO ತರಲು ನಿರ್ಧರಿಸಲಾಗಿದೆ.
- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 3 ನೇ ಬಜೆಟ್ ಮಂಡನೆ
- ಅಲ್ಕೋಹಾಲ್ ಪೇಯ ಪದಾರ್ಥಗಳ ಮೇಲೆ ಕೃಷಿ ಸೆಸ್.
- ಮದ್ಯದ ಮೇಲೆ ಶೇ.100 ರಷ್ಟು ಕೃಷಿ ಸೆಸ್ ವಿಧಿಸಿದ ಕೇಂದ್ರ ವಿತ್ತ ಸಚಿವರು.
ಇದನ್ನು ಓದಿ-Budget 2021: ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಾ ಇಲ್ವಾ..?
- ಬ್ಯಾಂಕ್ ಗಳ ಬಂಡವಾಳ ಮರುಪೂರನಕ್ಕೆ 20 ಸಾವಿರ ಕೋಟಿ ರೂ.
- NPA ಸಮಸ್ಯೆಗೆ ಮುಕ್ತಿ ಹಾಡಲು 'ಬ್ಯಾಡ್ ಬ್ಯಾಂಕ್'ಗಳ ಘೋಷಣೆ.
- ಏರ್ ಇಂಡಿಯಾ, IDBI, BMEL ಗಳ ಬಂಡವಾಳ ಹಿಂತೆಗೆತ ಯಶಸ್ವಿ
- ಕೃಷಿ ಉತ್ಪನ್ನಗಳಿಗೆ MSP ಭರವಸೆ
- ಮುಂದಿನ ವರ್ಷ 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ.
ಇದನ್ನು ಓದಿ- Budget 2021: ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ವಿವರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.