Budget 2021: ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಾ ಇಲ್ವಾ..? ಇಷ್ಟಕ್ಕೂ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದೇನು ..?

Budget 2021: 2021ರ ಕೇಂದ್ರ ಬಜೆಟ್ ಮಂಡನೆಯಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ಆದಾಯ ತೆರಿಗೆಯ ಸ್ಲ್ಯಾಬ್‌ನಲ್ಲಿ(income tax slab) ಯಾವುದೇ ಬದಲಾವಣೆ ಮಾಡಿಲ್ಲ. ಆದಾಯ ತೆರಿಗೆ ಸ್ಲ್ಯಾಬ್ ಯಥಾ ರೀತಿ ಮುಂದುವರೆಯಲಿದೆ.

Written by - Ranjitha R K | Last Updated : Feb 1, 2021, 02:48 PM IST
  • Budget 2021 : ತೆರಿಗೆ ಸ್ಲ್ಯಾಬ್ ಯಥಾ ರೀತಿ
  • ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಕೃಷಿ ಮೇಲೆ ಸೆಸ್
  • ಏರಿಕೆಯಾಗಲಿದೆಯಾ ಪೆಟ್ರೋಲ್, ಡಿಸೇಲ್ ಬೆಲೆ
Budget  2021: ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಾ ಇಲ್ವಾ..? ಇಷ್ಟಕ್ಕೂ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದೇನು ..? title=
Budget 2021

ನವದೆಹಲಿ : Budget 2021: 2021ರ ಕೇಂದ್ರ ಬಜೆಟ್ ಮಂಡನೆಯಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ಆದಾಯ ತೆರಿಗೆಯ ಸ್ಲ್ಯಾಬ್‌ನಲ್ಲಿ(income tax slab) ಯಾವುದೇ ಬದಲಾವಣೆ ಮಾಡಿಲ್ಲ. ಆದಾಯ ತೆರಿಗೆ ಸ್ಲ್ಯಾಬ್ ಯಥಾ ರೀತಿ ಮುಂದುವರೆಯಲಿದೆ. ಆದರೆ, ಪೆಟ್ರೋಲ್ (Petrol) ಮತ್ತು ಡಿಸೇಲ್ (Deseil) ಮೇಲೆ ಕೃಷಿ ಮೇಲೆ ಸೆಸ್ ವಿಧಿಸಿದೆ.  ಕೃಷಿ ಇನ್ಫ್ರಾ ಡೆವಲಪ್ಮೆಂಟ್ ಸೆಸ್ ಎಂಬ ಹೆಸರಿನಲ್ಲಿ ಈ ಮೇಲ್ತೆರಿಗೆ ವಿಧಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 2.5 ರೂ. ಮತ್ತು ಡೀಸೆಲ್‌ಗೆ ಪ್ರತಿ ಲೀಟರ್ ಕೃಷಿ ಸೆಸ್‌ 4 ರೂ. ವಿಧಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಪೆಟ್ರೋಲ್ (Petrol)  ಡೀಸೆಲ್ (Diesel) ದರ ರಿಕೆಯಾಗುವ (Rate hike) ಸಂಭವ ಇದೆ, ಇದು ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ತೈಲ ಬೆಲೆ ಏರಿಕೆಯಿಮದ ಪರದಾಡುತ್ತಿರುವ ವಾಹನ ಸವಾರರಿಗೆ ಮತ್ತೆ ಶಾಕ್ ನೀಡಿದಂತಾಗಿದೆ. 

ಇದನ್ನೂ ಓದಿ Budget 2021 : ಹಿರಿಯ ನಾಗರಿಕರಿಗೆ ಕೊಡುಗೆ : 75 ವರ್ಷ ಮೇಲ್ಪಟ್ಟವರು ಐಟಿ ರಿಟರ್ನ್ ಸಲ್ಲಿಸಬೇಕಿಲ

ಬಜೆಟ್ (Budget) ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) ಕೃಷಿ ಸೆಸ್ ವಿಧಿಸುವ ಪ್ರಸ್ತಾಪ ಮಾಡಿದ್ದಾರೆ. ಇದರ ಜೊತೆ ಇದರ ಹೊರೆ ಗ್ರಾಹಕರ ಮೇಲೆ ಬೀಳಲು ಬಿಡುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಶುಲ್ಕವನ್ನು ಇಳಿಸಲಾಗುವುದು. ಕೃಷಿ ಸೆಸ್ ಆ ಮೂಲಕವೇ ಪಡೆಯಲಾಗುವುದು ಎಂದಿದ್ದಾರೆ. ಆದ್ದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರುವುದಿಲ್ಲ ಎಂದು ಹೇಳಲಾಗಿದೆ. ಇಂದು ರಾತ್ರಿಯೇ ಪೆಟ್ರೋಲ್, ಡಿಸೇಲ್ ನ ಪರಿಷ್ಕೃತ ದರ ಪ್ರಕಟವಾಗಲಿದೆ. ಹೊಸ ದರ ಪ್ರಕಟವಾಗುತ್ತಿದ್ದಂತೆ ಕೃಷಿ ಸೆಸ್ ವಾಹನ ಸವಾರರ ಜೇಬಿನ ಮೇಲೆ ಪರಿಣಾಮ ಬೀರಲಿದೆಯೇ ಇಲ್ಲವೇ ಎಂಬುದಕ್ಕೆ ಉತ್ತರ ಸಿಗಲಿದೆ.
ಇನ್ನು , 2021 ರ ಬಜೆಟ್‌ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್ ಹಿಂದಿನಂತೆಯೇ ಮುಂದುವರೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.  ಅಂದರ, ಈ ಬಾರಿ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ  ಇರುವುದಿಲ್ಲ. 

ಇದನ್ನೂ ಓದಿ : ಕೋವಿಡ್ ಎಫೆಕ್ಟ್ ಆರೋಗ್ಯ ಕ್ಷೇತ್ರಕ್ಕೆ ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News