ನವದೆಹಲಿ :  Budget 2022 For Farmers: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Niramala sitharaman) ಕೇಂದ್ರ ಬಜೆಟ್ ಅ(Union Budget 2022) ನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಸಣ್ಣ ರೈತರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಸ ಉತ್ಪನ್ನಗಳು ಮತ್ತು ಸಮರ್ಥ ಲಾಜಿಸ್ಟಿಕ್ಸ್ ಸೇವೆಯನ್ನು ರಚಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದಲ್ಲದೆ, ಗಂಗಾ ನದಿಯ ದಡದಲ್ಲಿ 5 ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಭೂಮಿಯನ್ನು ಕೇಂದ್ರೀಕರಿಸಿ , ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು. ಇಷ್ಟೇ ಅಲ್ಲ, ರೈತರ ಆದಾಯ (farmer income) ಹೆಚ್ಚಿಸಲು ಪಿಪಿಪಿ ವಿಧಾನದಲ್ಲಿ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ರೈತರ ಆದಾಯ ಮತ್ತು ಭದ್ರತೆಯ ಹಿತದೃಷ್ಟಿಯಿಂದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಆಪ್ಟಿಕಲ್ ಫೈಬರ್ ಹಳ್ಳಿಗಳಿಗೂ ತಲುಪಲಿದೆ ಎಂದು ನಿರ್ಮಲಾ ಸೀತಾರಾಮನ್ (Nirmala sitharaman) ಘೋಷಿಸಿದ್ದಾರೆ.   


ಇದನ್ನೂ ಓದಿ : Union Budget 2022: ರೇಲ್ವೆ ಇಲಾಖೆಗೆ ಭಾರಿ ಉಡುಗೊರೆ, 3 ವರ್ಷಗಳಲ್ಲಿ 400 ಹೊಸ ಒಂದೇ ಭಾರತ್ ರೈಲು ಓಡಿಸಲಾಗುವುದು


ಹಲವು  ಮಹತ್ವದ ಘೋಷಣೆಗಳನ್ನು ಮಾಡಿದ ಸರ್ಕಾರ :
ಬಜೆಟ್ 2022 ಲೈವ್ ಅಪ್‌ಡೇಟ್‌ಗಳನ್ನು ಪ್ರಸ್ತುತಪಡಿಸಿದ (Budget 2022 Live Updates) ಹಣಕಾಸು ಸಚಿವರು,  ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಕೆಲಸವನ್ನು ಪ್ರಾರಂಭಿಸಲಾಗುವುದು. ಕೆನ್-ಬೆಟ್ವಾ ನದಿ ಜೋಡಣೆಗೆ 1400 ಕೋಟಿ ರೂ.ಯನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ಹಣ್ಣು(fruits), ತರಕಾರಿ ಬೆಳೆಯುವ ರೈತರಿಗಾಗಿ ಪ್ಯಾಕೇಜ್‌ಗಳನ್ನು ತರುವುದಾಗಿ ಹೇಳಿದ್ದಾರೆ. ಇದೇ ವೇಳೆ ಕೃಷಿ ವಿಚಾರವಾಗಿ ಮಾತನಾಡಿದ ಹಣಕಾಸು ಸಚಿವರು,  ರೈತರಿಗೆ ಎಂಎಸ್‌ಪಿಗೆ 2.7 ಲಕ್ಷ ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. 


ಎಣ್ಣೆಕಾಳು ಕೃಷಿಗೆ ಸರ್ಕಾರ ಉತ್ತೇಜನ ನೀಡಲಿದೆ ಎಂದೂ ಹೇಳಿದ್ದಾರೆ. ಕಿಸಾನ್  ಡ್ರೋನ್‌ಗಳನ್ನು (kisan drone) ಸರ್ಕಾರವೂ ಉತ್ತೇಜಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಭತ್ತ ಖರೀದಿಗೆ ಸರ್ಕಾರ 2.37 ಲಕ್ಷ ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. 


ಇದನ್ನೂ ಓದಿ : Budget 2022 : ಎಲ್ಐಸಿಯ ಐಪಿಒ ಬಗ್ಗೆ ದೊಡ್ಡ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.