Budget App 2022: ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ ಒದಗಿಸುತ್ತೆ ಈ ಅಪ್ಲಿಕೇಶನ್‌, ಅದನ್ನು ಈ ರೀತಿ ಡೌನ್‌ಲೋಡ್ ಮಾಡಿ

Budget App 2022: ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಜೆಟ್ ಅನ್ನು ಓದಲು ನೀವು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಈ ಆ್ಯಪ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ.

Written by - Yashaswini V | Last Updated : Feb 1, 2022, 09:26 AM IST
  • ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ, ಬಜೆಟ್ ಅನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ
  • ಈ ಅಪ್ಲಿಕೇಶನ್ ಮೂಲಕ ನೀವು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಬಜೆಟ್ ಅನ್ನು ಓದಬಹುದು
  • ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದರೊಂದಿಗೆ ಬೆರಳ ತುದಿಯಲ್ಲಿಯೇ ಸಂಪೂರ್ಣ ಮಾಹಿತಿ ಲಭ್ಯ
Budget App 2022: ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ ಒದಗಿಸುತ್ತೆ ಈ ಅಪ್ಲಿಕೇಶನ್‌, ಅದನ್ನು ಈ ರೀತಿ ಡೌನ್‌ಲೋಡ್ ಮಾಡಿ title=
App, How to download Budget App

Budget App 2022: 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು (ಕೇಂದ್ರ ಬಜೆಟ್ 2022) ಇಂದು ಅಂದರೆ ಫೆಬ್ರವರಿ 1 ರಂದು ಮಂಡಿಸಲಾಗುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2022 ಮಂಡಿಸಲಿದ್ದಾರೆ. ಬಜೆಟ್ ಬಗ್ಗೆ ಜನರ ಮನಸ್ಸಿನಲ್ಲಿ ಹಲವು ನಿರೀಕ್ಷೆಗಳಿವೆ. ಈ ಬಾರಿಯ ಬಜೆಟ್‌ನ ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚಿನ ನಿರೀಕ್ಷೆಗಳಿವೆ.

ಈ ಬಾರಿಯ ಬಜೆಟ್‌ಗಾಗಿ ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ಏಕಕಾಲಕ್ಕೆ ಹಲವು ವಿಷಯಗಳ ಬಗ್ಗೆ ಹೊಸ ಘೋಷಣೆಗಳು ಹೊರಬೀಳುತ್ತವೆ. ಕೆಲವೊಮ್ಮೆ ಎಲ್ಲಾ ಮಾಹಿತಿಯನ್ನು ಒಟ್ಟಿಗೆ ತಿಳಿದುಕೊಳ್ಳಲು ಜನರಿಗೆ ಕಷ್ಟವಾಗುತ್ತದೆ. ಹೀಗಾಗಿ ಜನರ ಕಷ್ಟ ಕಡಿಮೆ ಮಾಡಲು ಸರ್ಕಾರ ಬಜೆಟ್ ಆಪ್ (Budget App) ಬಿಡುಗಡೆ ಮಾಡಿದೆ. ಬಜೆಟ್ ಸಮಯದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಯಾವುದೇ ವಿಳಂಬವಿಲ್ಲದೆ ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ, ಇದನ್ನು ಜನರು ಸುಲಭವಾಗಿ ಓದಬಹುದು.

ಇದನ್ನೂ ಓದಿ- Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಜನಸಾಮಾನ್ಯರ 10 ದೊಡ್ಡ ನಿರೀಕ್ಷೆಗಳಿವು

ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ, ಬಜೆಟ್ ಅನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ:
ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ (Union Budget Mobile App) ಅನ್ನು ಡೌನ್‌ಲೋಡ್ ಮಾಡುವುದರೊಂದಿಗೆ, ಜನರುಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಇದರಿಂದ ಬೆರಳ ತುದಿಯಲ್ಲಿಯೇ ಬಜೆಟ್ ಸಂಬಂಧಿತ ಸಂಪೂರ್ಣ ಮಾಹಿತಿ ಪಡೆಯಬಹುದು. ಬಜೆಟ್ ಮಂಡನೆಯಾಗುತ್ತಿದ್ದಂತೆ ಜನಸಾಮಾನ್ಯರು ತಮ್ಮ ಮೊಬೈಲ್‌ನಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಇದನ್ನು ಸುಲಭವಾಗಿ ಓದಬಹುದು. ಒಂದೇ ಒಂದು ಕ್ಲಿಕ್ನಲ್ಲಿ ಕೇಂದ್ರ ಬಜೆಟ್ನ ಫುಲ್ ಡೀಟೇಲ್ಸ್ ಪಡೆಯಲು ಈಗಲೇ ಈ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ.

ಇದನ್ನೂ ಓದಿ- Budget 2022 : ಬಜೆಟ್ ನತ್ತ ಎಲ್ಲರ ಚಿತ್ತ, ಬಜೆಟ್ ನಂತರ ಯಾವ ವಸ್ತುಗಳು ಆಗಲಿವೆ ಅಗ್ಗ

ಈ ರೀತಿಯಲ್ಲಿ ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು:
ನೀವು android ಮತ್ತು iPhone ಬಳಕೆದಾರರಾಗಿದ್ದರೆ Google Play Store ಮತ್ತು App Store ನಿಂದ ಈ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಬಹುದು. ಮೊಬೈಲ್ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುತ್ತದೆ. http://indiabudget.gov.in ಗೆ ಭೇಟಿ ನೀಡುವ ಮೂಲಕ ಇದನ್ನು ಬಜೆಟ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್‌ನಲ್ಲಿ ನೀವು ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ. ಇದನ್ನು ನೀವೇ ಓದಬಹುದು ಮತ್ತು ಇತರರಿಗೆ ಸುಲಭವಾಗಿ ವಿವರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News