ನವದೆಹಲಿ: Union Budget 2022 - 75 ವರ್ಷಗಳ ಸ್ವತಂತ್ರ ಭಾರತದಲ್ಲಿ 73 ಬಾರಿ ಬಜೆಟ್ (Budget) ಮಂಡಿಸಲಾಗಿದೆ. ಪ್ರತಿ ಬಾರಿಯೂ ಬಜೆಟ್ ಹೊಸ ಭರವಸೆಯನ್ನು ತರುತ್ತದೆ ಮತ್ತು ಕೆಲವೊಮ್ಮೆ ಹೊಸ ಸುಧಾರಣೆಗಳು, ಹೊಸ ಯೋಜನೆಗಳು ಅಥವಾ ಹೊಸ ನಿಯಮಗಳನ್ನು ನೀಡುತ್ತದೆ.  ಇದೇ ಕಾರಣಕ್ಕೆ 1997-98ರಲ್ಲಿ ಬಜೆಟ್ ಮಂಡನೆಯಾದಾಗ ‘ಕನಸಿನ ಬಜೆಟ್’ ಮತ್ತು 1973ರಲ್ಲಿ ಬಜೆಟ್ ಮಂಡಿಸಿದಾಗ 'ಕರಾಳ ಬಜೆಟ್' ಎಂದು ಹೆಸರಿಸಲಾಗಿತ್ತು. ಕನಸಿನ ಬಜೆಟ್ ಎಂಬುದರ ಅರ್ಥ - ಜನರ ಕನಸುಗಳ ಬಜೆಟ್. ಆದರೆ ಈ ಕಪ್ಪು ಬಜೆಟ್ ಅಥವಾ ಕರಾಳ ಬಜೆಟ್ ಎಂದರೇನು ಮತ್ತು ಅಂತಹ ಬಜೆಟ್ ಅನ್ನು ಏಕೆ ಮಂಡಿಸಲಾಯಿತು? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಮುಖ್ಯ ಕಾರಣ ಏನು
1973-74ರಲ್ಲಿ ಸಾಮಾನ್ಯ ಬಜೆಟ್ ಮಂಡಿಸಿದಾಗ ದೇಶದ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ದೇಶವು ಆರ್ಥಿಕ ಬಿಕ್ಕಟ್ಟಿನ ಮೂಲಕ ಸಾಗುತ್ತಿತ್ತು.  ಒಂದು ಕಡೆ ಕೆಟ್ಟ ಮಾನ್ಸೂನ್ ಪರಿಸ್ಥಿತಿಯನ್ನು ಬಿಗಡಾಯಿಸಿದ್ದರೆ, ಇನ್ನೊಂದು ಕಡೆ 1971 ರಲ್ಲಿ ಬಾಂಗ್ಲಾದೇಶ ಯುದ್ಧ ಜರುಗಿತ್ತು. ಇದು ಆರ್ಥಿಕತೆಗೆ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಇದೆಲ್ಲವೂ ದೇಶದ ಬಜೆಟ್ ಮೇಲೂ ಪರಿಣಾಮ ಬೀರಿತ್ತು. ಇದೇ ಕಾರಣಕ್ಕೆ ಬಜೆಟ್ ಮಂಡನೆ ವೇಳೆ 550 ಕೋಟಿ ವಿತ್ತೀಯ ಕೊರತೆ ಎದುರಾಗಿತ್ತು.  ಆ ಸಮಯದಲ್ಲಿ ಇಂದಿರಾ ಗಾಂಧಿ (Indira Gandhi) ದೇಶದ ಪ್ರಧಾನಿಯಾಗಿದ್ದರು ಮತ್ತು ಆ ಬಜೆಟ್ ಅನ್ನು ಅಂದಿನ ಹಣಕಾಸು ಸಚಿವ ಯಶವಂತರಾವ್.ಬಿ.ಚವ್ಹಾಣ್ (YB Chavan) ಮಂಡಿಸಿದ್ದರು.


ಇದನ್ನೂ ಓದಿ-SBI Changes Rule: SBI ನಿಯಮಗಳಲ್ಲಿ ಭಾರೀ ಬದಲಾವಣೆ, ಗ್ರಾಹಕರು ತಿಳಿದುಕೊಳ್ಳಲೇಬೇಕಾದ ವಿಚಾರ


ಬಜೆಟ್‌ನಲ್ಲಿ ಏನಿತ್ತು
ಸಾಮಾನ್ಯ ವಿಮಾ ಕಂಪನಿಗಳು, ಭಾರತೀಯ ತಾಮ್ರ ನಿಗಮ ಮತ್ತು ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣಕ್ಕಾಗಿ ಆ ಬಜೆಟ್‌ನಲ್ಲಿ 56 ಕೋಟಿ ರೂ. ಅಲ್ಲದೇ ಬಜೆಟ್ ನಲ್ಲಿ 550 ಕೋಟಿ ಕೊರತೆ ತೋರಿಸಲಾಗಿದೆ. ಇದು ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಕಪ್ಪು ಬಜೆಟ್ ಆಗಿತ್ತು. ದೇಶದಲ್ಲಿ ಬರ ಪರಿಸ್ಥಿತಿ ಉಂಟಾಗಿ ಆಹಾರಧಾನ್ಯ ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗಿರುವುದರಿಂದ ಬಜೆಟ್ ಕೊರತೆ ಹೆಚ್ಚಾಗಿದ್ದು, ಕರಾಳ ಬಜೆಟ್ ಮಂಡಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅಂದಿನ ಹಣಕಾಸು ಸಚಿವ ಯಶವಂತರಾವ್ ಚವ್ಹಾಣ್ ಬಜೆಟ್ ಭಾಷಣದಲ್ಲಿ ಹೇಳಿದ್ದರು.


ಇದನ್ನೂ ಓದಿ-ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ ಒದಗಿಸುತ್ತೆ ಈ ಅಪ್ಲಿಕೇಶನ್‌, ಅದನ್ನು ಈ ರೀತಿ ಡೌನ್‌ಲೋಡ್ ಮಾಡಿ


ಏನಿರುತ್ತೆ ಈ ಬ್ಲ್ಯಾಕ್ ಬಜೆಟ್?
ಸರ್ಕಾರದ ವೆಚ್ಚ ಸರ್ಕಾರದ ಆದಾಯದ ಹೋಲಿಕೆಯಲ್ಲಿ ಹೆಚ್ಚಾದರೆ, ಸರ್ಕಾರ ತನ್ನ ಬಜೆಟ್ ನಲ್ಲಿ ವೆಚ್ಚಗಳನ್ನು ತಗ್ಗಿಸಬೇಕಾಗುತ್ತದೆ. ಇಂತಹ ಬಜೆಟ್ ಅನ್ನು ಸಾಮಾನ್ಯವಾಗಿ ಬ್ಲಾಕ್ ಬಜೆಟ್ ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ-ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.