Budgetಗೆ 'ಬಜೆಟ್' ಅಂತಾನೆ ಏಕೆ ಕರೆಯುತ್ತಾರೆ? ಯಾರು ಅದನ್ನು ಆರಂಭಿಸಿದರು, 289 ವರ್ಷಗಳ ಹಿಂದಿನ ಕಥೆ ಇಲ್ಲಿದೆ

Budget 2022: ಇತ್ತೀಚಿನ ದಿನಗಳಲ್ಲಿ ಬಜೆಟ್ ಎಂಬ ವಿಷಯದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಪದವು ಎಲ್ಲಿಂದ ಬಂದಿದೆ ಮತ್ತು ಇದರ ಅರ್ಥವೇನು ಎಂದು ತಿಳಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ?

Written by - Nitin Tabib | Last Updated : Jan 31, 2022, 09:08 PM IST
  • ಇಂದು ಬಜೆಟ್ ಎಂಬ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ.
  • ಈ ಬಜೆಟ್ ಪದ ಎಲ್ಲಿಂದ ಬಂತು, ಯಾರು ಮೊದಲು ಅದನ್ನು ಆರಂಭಿಸಿದರು?
  • ನಮ್ಮ ಸಂವಿಧಾನದಲ್ಲಿ ಬಜೆಟ್ ಎಂಬ ಪದ ಏಕೆ ಇಲ್ಲ?
Budgetಗೆ 'ಬಜೆಟ್' ಅಂತಾನೆ ಏಕೆ ಕರೆಯುತ್ತಾರೆ? ಯಾರು ಅದನ್ನು ಆರಂಭಿಸಿದರು, 289 ವರ್ಷಗಳ ಹಿಂದಿನ ಕಥೆ ಇಲ್ಲಿದೆ  title=
Story Behind Word Budget (File Photo)

ನವದೆಹಲಿ: Story Behind Word Budget - ಹಾಗೆ ಗಮನಿಸುವುದಾದರೆ ಪ್ರತಿ ತಿಂಗಳು ನಿಮ್ಮ ಮನೆಯ ಬಜೆಟ್ ಅನ್ನು ನೀವು ಮಾಡುತ್ತೀರಿ. ಆದರೆ ಕಳೆದ ಕೆಲವು ದಿನಗಳಿಂದ ‘ಬಜೆಟ್’ ಎಂಬ ಮಾತು ಸಾಕಷ್ಟು ಚರ್ಚೆಯಲ್ಲಿದೆ. ಕಾರಣ ಫೆಬ್ರವರಿ 1 ರಂದು ದೇಶದ ಬಜೆಟ್ (Union Budget 2022-23) ಮಂಡನೆಯಾಗಲಿದೆ. ಈ ಬಜೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎಲ್ಲರಿಗೂ ಬಜೆಟ್ ನಿಂದ ಸಾಕಷ್ಟು ನಿರೀಕ್ಷೆಗಳಿವೆ. ಆದರೆ, ಸದ್ಯದ ಪ್ರಶ್ನೆ ಏನೆಂದರೆ ಅದು ಮನೆಯ ಖರ್ಚಿಗೆ ಸಂಬಂಧಿಸಿದ ವಿಷಯವಾಗಲಿ ಅಥವಾ ದೇಶದ ವಿಷಯವೆ ಆಗಲಿ ಈ ಪದ ಒಂದೇ ಆಗಿದೆ.

ಈ ಪದ ಎಲ್ಲಿಂದ ಬಂತು? ವಾಸ್ತವವಾಗಿ ಇದರ ಅರ್ಥವೇನು? ಅದಕ್ಕೊಂದು ವಿಭಿನ್ನ ಕಥೆಯೂ ಇದೆ. ಇದೆ ವೇಳೆ ನಮ್ಮ ಸಂವಿಧಾನದಲ್ಲಿ ಬಜೆಟ್ ಎಂಬ ಪದವನ್ನು ಎಲ್ಲಿಯೂ ಬಳಸದಿರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಈ ಕುತೂಹಲಕಾರಿ ಸಂಗತಿಯ ಬಗ್ಗೆ ವಿವರವಾಗಿತಿಳಿಯೋಣ ಬನ್ನಿ

ಬಜೆಟ್ ಎಂಬ ಪದ ಎಲ್ಲಿಂದ ಬಂತು
ಬಜೆಟ್ ಎಂಬ ಪದವು ಫ್ರೆಂಚ್ ಪದ 'ಬೌಜ್' ನಿಂದ ಬಂದಿದೆ. ಇದರರ್ಥ ಚಿಕ್ಕ ಚೀಲ. ಇಂಗ್ಲೆಂಡ್‌ನ ಮಾಜಿ ಹಣಕಾಸು ಸಚಿವ ಸರ್ ರಾಬರ್ಟ್ ವಾಲ್ಪೋಲ್ ಅವರು ಈ ಪದವನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಾಸ್ತವದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಘಟನೆ ಇದೆ. 1733 ರಲ್ಲಿ, ವಾಲ್ಪೋಲ್ ಹಣಕಾಸಿಗೆ ಸಂಬಂಧಿಸಿದ ವಿವರಗಳನ್ನು ಚೀಲದಲ್ಲಿ ಹೊತ್ತುಕೊಂಡು ಸದನಕ್ಕೆ ಬಂದಾಗ. ಯಾರೋ ಬ್ಯಾಗ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ಇದರಲ್ಲಿ ನಿಮಗಾಗಿ ಬಜೆಟ್ ತಂದಿದ್ದೇನೆ ಎಂದು ಅವರು ಹೇಳಿದ್ದರು. ಇದಾದ ಬಳಿಕ ಅಲ್ಲಿನ ನಿಯತಕಾಲಿಕವೊಂದು ವಾಲ್ಪೋಲ್ ಅವರ ಈ ಹೇಳಿಕೆಯನ್ನು ಲೇವಡಿ ಮಾಡುವ ಲೇಖನವನ್ನೂ ಪ್ರಕಟಿಸಿದೆ. ಅದರ ಶೀರ್ಷಿಕೆ - 'ಬಜೆಟ್ ತೆರೆಯಲಾಗಿದೆ' ಎಂದಿತ್ತು. ಅಂದಿನಿಂದ ಹಣಕಾಸು ಖಾತೆಗಳ ವಿವರಣೆಗೆ ಬಜೆಟ್ ಪದ ಬಳಕೆ ಆರಂಭವಾಯಿತು ಎಂದು ಹೇಳಲಾಗುತ್ತದೆ ಮತ್ತು ಅದು ಇಂದಿಗೂ ಕೂಡ ಮುಂದುವರೆದಿದೆ.

ಇದನ್ನೂ ಓದಿ-Economic Survey 2022: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಲ್ಲಿವೆ ಹೈಲೈಟ್ಸ್

ಬಜೆಟ್ ಎಂಬ ಪದ ಸಂವಿಧಾನದಲ್ಲಿ ಸೇರ್ಪಡೆಯಾಗಿಲ್ಲ
ಭಾರತೀಯ ಸಂವಿಧಾನದಲ್ಲಿ ಬಜೆಟ್ ಎಂಬ ಪದವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಬದಲಿಗೆ ಇದನ್ನು ಸಂವಿಧಾನದ 112 ನೇ ವಿಧಿಯಲ್ಲಿ ವಾರ್ಷಿಕ ಹಣಕಾಸು ಹೇಳಿಕೆ ಎಂದು ಹೆಸರಿಸಲಾಗಿದೆ. ಈ ಹೇಳಿಕೆಯಲ್ಲಿ, ಸರ್ಕಾರವು ಇಡೀ ವರ್ಷದ ತನ್ನ ಅಂದಾಜು ವೆಚ್ಚಗಳು ಮತ್ತು ಆದಾಯದ ವಿವರಗಳನ್ನು ನೀಡುತ್ತದೆ.

ಇದನ್ನೂ ಓದಿ-Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!

ಬಜೆಟ್ ಅಧಿವೇಶನ ಆರಂಭಗೊಂಡಿದೆ
ಸಂಸತ್ತಿನ ಬಜೆಟ್ ಅಧಿವೇಶನ ಇಂದು ಆರಂಭವಾಗಿದೆ, ರಾಷ್ಟ್ರಪತಿ ರಾಮನಾಥ್ (Ramnath Kovind) ಕೋವಿಂದ್ ಅವರ ಭಾಷಣದ ನಂತರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗಿದೆ. ಆರ್ಥಿಕ ಸಮೀಕ್ಷೆಯು (Economic Survey) ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಒಂದು ರೀತಿಯ ವರದಿ ಕಾರ್ಡ್ ಆಗಿದೆ. ಆರ್ಥಿಕ ಸಮೀಕ್ಷೆಯು 2022-2023 ಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 8-8.5 ಎಂದು ಅಂದಾಜಿಸಿದೆ. ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆ ದರ ಇಳಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ-Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News