Budget 2025 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2025 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಬಗ್ಗೆ ಜನರು ನಾನಾ ರೀತಿಯ  ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮಧ್ಯಮ ವರ್ಗದ ಜನರು, ತೆರಿಗೆ ಪಾವತಿದಾರರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಎಲ್ಲರಿಗೂ ವಿಶಿಷ್ಟವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಕೇಂದ್ರ ಬಜೆಟ್ 2025: 
 ಇಂದು ನಾವು ಹಿರಿಯ ನಾಗರಿಕರಿಗೆ ಇರುವ ಒಂದು ಪ್ರಮುಖ ನಿರೀಕ್ಷೆಯ ಬಗ್ಗೆ  ಹೇಳುತ್ತಿದ್ದೇವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು, ಹಿರಿಯ ನಾಗರಿಕರು ರೈಲು ಟಿಕೆಟ್‌ಗಳಲ್ಲಿ ಶೇಕಡಾ 40 ರಿಂದ 50 ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದರು. ಆದರೆ ಸಾಂಕ್ರಾಮಿಕ ಸಮಯದಲ್ಲಿ, ಈ ಸೌಲಭ್ಯವನ್ನು ನಿಲ್ಲಿಸಲಾಯಿತು. 


ಇದನ್ನೂ ಓದಿ : ಇಪಿಎಫ್‌ಒ ಪಿಂಚಣಿದಾರರಿಗೆ ಗುಡ್ ನ್ಯೂಸ್- ನಿಮ್ಮ ಪಿಂಚಣಿ ಹಣ ಆಗಲಿದೆ ದ್ವಿಗುಣ: ಸರ್ಕಾರದ ಪ್ಲಾನ್ ಏನು ಅಂತಾ ತಿಳಿಯಿರಿ!


ಈಗ ಕೋವಿಡ್ ಎಫೆಕ್ಟ್ ಮುಗಿದಿದೆ. ಆದರೆ, ಸರಕಾರ ಹಿರಿಯ ನಾಗರಿಕರಿಗೆ ಈ ಹಿಂದೆ ನೀಡಿದ್ದ ರಿಯಾಯಿತಿಯನ್ನು ಇನ್ನು ಕೂಡಾ ಪುನರಾರಂಭಿಸಿಲ್ಲ. ಮುಂಬರುವ ಬಜೆಟ್‌ನಲ್ಲಿ ರೈಲು ಟಿಕೆಟ್ ಮೇಲಿನ ರಿಯಾಯಿತಿಯನ್ನು ಮರುಸ್ಥಾಪಿಸಬೇಕು ಎಂದು ಹಿರಿಯ ನಾಗರಿಕರು ಒತ್ತಾಯಿಸುತ್ತಲೇ ಇದ್ದಾರೆ. 


2019 ರವರೆಗೆ ರಿಯಾಯಿತಿ : 
2019ರ ಅಂತ್ಯದವರೆಗೆ, ಭಾರತೀಯ ರೈಲ್ವೇ ಮತ್ತು IRCTC ಮೇಲ್, ಎಕ್ಸ್‌ಪ್ರೆಸ್, ರಾಜಧಾನಿ, ಶತಾಬ್ದಿ ಮತ್ತು ಡ್ಯುರಾಂತೋ ಮುಂತಾದ ವಿಶೇಷ ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿಗಳನ್ನು ನೀಡುತ್ತಿತ್ತು. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಟಿಕೆಟ್‌ಗಳ ಮೇಲೆ 40% ರಿಯಾಯಿತಿ ಮತ್ತು 58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ 50% ರಿಯಾಯಿತಿ ನೀಡಲಾಗುತ್ತಿತ್ತು.  ಉದಾಹರಣೆಗೆ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಟಿಕೆಟ್ 4,000 ರೂ.ಆಗಿದ್ದರೆ ಹಿರಿಯ ನಾಗರಿಕರಿಗೆ ಈ ಟಿಕೆಟ್ 2,000 ಅಥವಾ 2,300 ರೂ.ಗಳಲ್ಲಿ ಲಭಿಸುತ್ತಿತ್ತು. 


ಸರ್ಕಾರಿ ನೌಕರರರು ಪಿಂಚಣಿದಾರರಿಗೆ ಹೊಸ ವರ್ಷದ ಗಿಫ್ಟ್ !ತುಟ್ಟಿಭತ್ಯೆ 12 % ಹೆಚ್ಚಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ


ಕೊರೊನಾ ಸೋಂಕಿನ ನಂತರ ರೈಲುಗಳಲ್ಲಿನ  ರಿಯಾಯಿತಿಗೆ ತಡೆ : 
ಕೋವಿಡ್ ಸಾಂಕ್ರಾಮಿಕದ ಪ್ರಾರಂಭದಲ್ಲಿ, 2020ರಲ್ಲಿ, ರೈಲ್ವೆ ಟಿಕೆಟ್‌ಗಳ ಮೇಲಿನ ಈ ರಿಯಾಯಿತಿಯನ್ನು ಸರ್ಕಾರ ನಿಲ್ಲಿಸಿತು. ಈಗ ಪರಿಸ್ಥಿತಿ ಸರಿ ಹೋಗಿದ್ದರೂ ಸಾಂಕ್ರಾಮಿಕ ಸೌಲಭ್ಯವನ್ನು ಪುನರಾರಂಭಿಸಲಾಗಿಲ್ಲ.ನಿವೃತ್ತಿಯ ನಂತರ ಆದಾಯದ ಮೂಲಗಳು ಕಡಿಮೆಯಾಗಿರುವುದರಿಂದ ರೈಲ್ವೆ ರಿಯಾಯಿತಿಗಳು ತಮ್ಮ ಪ್ರಯಾಣವನ್ನು ಅಗ್ಗವಾಗಿಸುತ್ತವೆ  ಎನ್ನುವುದು ಹಿರಿಯ ನಾಗರಿಕರ ಮಾತು. ಆದ್ದರಿಂದ, ಈ ರಿಯಾಯಿತಿಯನ್ನು ಮರುಸ್ಥಾಪಿಸಬೇಕು ಎನ್ನುವ ಒತ್ತಾಯ ಹಿರಿಯ ನಾಗರೀಕರದ್ದು.


ಹಣಕಾಸು ಸಚಿವರಿಂದ ನಿರೀಕ್ಷೆಗಳು : 
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2025 ರಂದು ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿದೆ.  ಇದರಲ್ಲಿ ಜನರು ವಿಶೇಷವಾಗಿ ಹಿರಿಯ ನಾಗರಿಕರು ಅನೇಕ ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದಾರೆ. ರೈಲು ಟಿಕೆಟ್ ರಿಯಾಯಿತಿಯಲ್ಲಿ ಈ ಸಡಿಲಿಕೆಯನ್ನು ಮರಳಿ ತರುವ ಮೂಲಕ ಸರ್ಕಾರ ತಮ್ಮ ಪ್ರಯಾಣವನ್ನು ಸುಲಭಗೊಳಿಸಬೇಕು ಎಂದು ಹಿರಿಯ ನಾಗರಿಕರು ಹೇಳುತ್ತಾರೆ. ಆದರೆ, ಇತ್ತೀಚೆಗೆ ಸಂಸತ್ತಿನಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರಿಗೆ ರೈಲು ಟಿಕೆಟ್ ರಿಯಾಯಿತಿ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರ ಈಗಾಗಲೇ ರೈಲು ಟಿಕೆಟ್‌ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ ಎಂದು ಹೇಳಿದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಈ ಬೇಡಿಕೆಯನ್ನು ಬಜೆಟ್ ನಲ್ಲಿ ಸೇರಿಸಿದರೆ ಲಕ್ಷಾಂತರ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. 2025ರ ಬಜೆಟ್‌ನಲ್ಲಿ ಈ ಪರಿಹಾರವನ್ನು ಮರಳಿ ತರಲಾಗುತ್ತದೆಯೇ ಎಂದು ನೋಡಬೇಕಾಗಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.