Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ !
Union Budget 2024 :ಇಂದು ಮಂಡನೆಯಗಲಿರುವ ಬಜೆಟ್ ಮೇಲೆ ವೇತನ ವರ್ಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುವ ನಿರೀಕ್ಷೆ ಇದೆ.
Union Budget 2024 : ಇನ್ನು ಕೆಲವೇ ಕ್ಷಣಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ.ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿರಲಿದೆ.ಈ ಬಾರಿ ಮಧ್ಯಮ ವರ್ಗ ಸರ್ಕಾರದಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.ಪ್ರತಿ ಬಾರಿಯಂತೆ ಈ ಬಾರಿಯೂ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ಪರಿಹಾರವನ್ನು ವೇತನದಾರರು ನಿರೀಕ್ಷಿಸುತ್ತಿದ್ದಾರೆ.ಈ ಬಾರಿಯ ಹಣಕಾಸು ಸಚಿವರು ಮಧ್ಯಮ ವರ್ಗದವರಿಗೆ ಪರಿಹಾರ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ಹೆಚ್ಚುವುದೇ ತೆರಿಗೆ ವಿನಾಯಿತಿ ಮಿತಿ ? :
ಹಣಕಾಸು ಸಚಿವರು 2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ರಿಯಾಯಿತಿಯನ್ನು ಹೆಚ್ಚಿಸಿದ್ದರು.ಇದರ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಪದ್ದತಿಯ ಪ್ರಕಾರ, 7 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ.ಆದರೆ, ಸರಕಾರ ಮತ್ತೆ ಈ ಮಿತಿಯನ್ನು ಹೆಚ್ಚಿಸಬಹುದು ಎನ್ನುವ ಭರವಸೆನ್ನು ಉದ್ಯೋಗಿಗಳು ಇಟ್ಟುಕೊಂಡಿದ್ದಾರೆ.7 ಲಕ್ಷದ ಮಿತಿಯನ್ನು8 ಲಕ್ಷಕ್ಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆಯೂ ಇದೆ.
ಇದನ್ನೂ ಓದಿ : ATM ಅವಶ್ಯಕತೆಯೇ ಇಲ್ಲ, ಈಗ ಮೊಬೈಲ್‌ನ ಸಹಾಯದಿಂದ ಹಣ ವಿತ್ ಡ್ರಾ ಮಾಡಬಹುದು!
ಹಳೆಯ ತೆರಿಗೆ ಪದ್ಧತಿಯ ವ್ಯಾಪ್ತಿಯಲ್ಲಿ ಹೆಚ್ಚಳ :
2019ರಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಕೊನೆಯ ಬದಲಾವಣೆ ಮಾಡಲಾಗಿದೆ.ಈ ಹಿಂದೆ 2.5 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ರೀತಿಯ ತೆರಿಗೆ ಇರಲಿಲ್ಲ.ಆದರೆ 2019 ರ ಬಜೆಟ್‌ನಲ್ಲಿ ಸರ್ಕಾರವು 5 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಗೆ ವಿನಾಯಿತಿ ನೀಡಿತ್ತು.ತೆರಿಗೆಗೆ ಒಳಪಡುವ ವ್ಯಕ್ತಿಯ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.ಹಳೆಯ ಪದ್ದತಿಯಲ್ಲಿ ಆದಾಯ ತೆರಿಗೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ.ಉದ್ಯೋಗಿಗಳ ಪರವಾಗಿ,ಹಳೆಯ ತೆರಿಗೆ ಪದ್ಧತಿಯ ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ:
ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಸರ್ಕಾರವು ಪರಿಷ್ಕರಿಸಬಹುದು ಎಂಬ ಭರವಸೆಯಲ್ಲಿ ಅನೇಕ ಉದ್ಯೋಗಿಗಳು ಇದ್ದಾರೆ. ಮಧ್ಯಮ ಆದಾಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ದರ ಇಳಿಕೆ ಮಾಡಬೇಕೆಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ.ಹೊಸ ತೆರಿಗೆ ಪದ್ಧತಿಯಲ್ಲಿ ವಿಧಿಸಲಾದ ತೆರಿಗೆಯ ಗರಿಷ್ಠ ದರವು 25% ಆಗಿದೆ.ಹಳೆಯ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ದರವು 37% ಆಗಿದೆ.ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಲಭ್ಯವಿರುವ ಪರಿಹಾರವನ್ನು ಹಳೆಯ ತೆರಿಗೆ ಪದ್ಧತಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ : Arecanut Price in Karnataka: ಚಿತ್ರದುರ್ಗ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
ಎಚ್‌ಆರ್‌ಎ ವಿನಾಯಿತಿ :
ಎಚ್‌ಆರ್‌ಎ ವಿನಾಯಿತಿಯನ್ನು ಲೆಕ್ಕಾಚಾರ ಮಾಡಲು ಮೆಟ್ರೋ ನಗರಗಳ ಪಟ್ಟಿಯಲ್ಲಿ ಹೆಚ್ಚಿನ ಶ್ರೇಣಿ-II ನಗರಗಳನ್ನು ಸೇರಿಸುವ ಬೇಡಿಕೆಯೂ ಇದೆ . ಪ್ರಸ್ತುತ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಮೆಟ್ರೋ ನಗರಗಳನ್ನು ಮಾತ್ರ HRA ವಿನಾಯಿತಿಗಾಗಿ ಪರಿಗಣಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಗುರಗಾಂವ್, ಅಹಮದಾಬಾದ್ ಸೇರಿದಂತೆ ಇತರ ನಗರಗಳ ನಿವಾಸಿಗಳು ಎಚ್‌ಆರ್‌ಎ ರಿಯಾಯಿತಿಯ ಉದ್ದೇಶಕ್ಕಾಗಿ ಈ ನಗರಗಳನ್ನೂ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಕಡಿತ ಮಿತಿಯಲ್ಲಿ ಹೆಚ್ಚಳ:
ಸೆಕ್ಷನ್ 80ಡಿ ಅಡಿಯಲ್ಲಿ ಲಭ್ಯವಿರುವ ಆರೋಗ್ಯ ವಿಮಾ ಪ್ರೀಮಿಯಂನ ಕವರ್‌ನಲ್ಲಿ ಬದಲಾವಣೆಗೆ ಬೇಡಿಕೆಯಿದೆ.ವಿಮಾ ಪ್ರೀಮಿಯಂನ ಹೆಚ್ಚಿನ ವೆಚ್ಚದ ಕಾರಣ,ಅದರ ಮಿತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎನ್ನುವ ವಾದವೂ ಇದೆ.ತೆರಿಗೆದಾರರಿಗೆ ಪರಿಹಾರ ನೀಡಲು 80ಸಿ ಮಿತಿಯನ್ನು ಹೆಚ್ಚಿಸಬೇಕೆಂಬ ಆಗ್ರಹವಿದೆ.80ಸಿ ಅಡಿಯಲ್ಲಿ ಕೊನೆಯ ಬದಲಾವಣೆಯನ್ನು 2014-15 ರಲ್ಲಿ ಮಾಡಲಾಗಿದೆ.ಸದ್ಯ ಇದರ ಮಿತಿ 1.5 ಲಕ್ಷ ರೂ.ಗಳಾಗಿದ್ದು, ಇದನ್ನು 2 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯೂ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ