ಸಿಲಿಕಾನ್ ಸಿಟಿ IT ಉದ್ಯೋಗಿಗಳಿಗೆ ಇನ್ಮುಂದೆ 14 ಗಂಟೆ ಕೆಲಸ?

14-hour per day work: ಈಗಾಗಲೇ IT ಎಂಪ್ಲೈಯಿಸ್ ಅಸೋಸಿಯೇಷನ್ & ಕಾರ್ಮಿಕ ಇಲಾಖೆ ಸಭೆ ನಡೆದಿದ್ದು, ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ, ದೈಹಿಕ ಹಿಂಸೆ, ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Jul 22, 2024, 03:22 PM IST
  • ಐಟಿ-ಬಿಟಿ ಕಂಪನಿಗಳ 20 ಲಕ್ಷ ಉದ್ಯೋಗಿಗಳಿಗೆ ಬಿಗ್ ಶಾಕ್
  • ಸಿಲಿಕಾನ್ ಸಿಟಿ IT ಉದ್ಯೋಗಿಗಳಿಗೆ ಇನ್ಮುಂದೆ 14 ಗಂಟೆ ಕೆಲಸ?
  • ಕಾರ್ಮಿಕ ಇಲಾಖೆ, ಐಟಿ ಕಂಪನಿಗಳ ವಿರುದ್ಧ ಭಾರೀ ಆಕ್ರೋಶ
ಸಿಲಿಕಾನ್ ಸಿಟಿ IT ಉದ್ಯೋಗಿಗಳಿಗೆ ಇನ್ಮುಂದೆ 14 ಗಂಟೆ ಕೆಲಸ?  title=
ಇನ್ಮುಂದೆ 14 ಗಂಟೆ ಕೆಲಸ? 

IT Job in Bangalore: ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದೆ. ಇದು ಸಾಫ್ಟ್‌ವೇರ್‌ ನೌಕರರಿಗೆ ಬಿಗ್‌ ಶಾಕ್‌ ಅಂತಾನೇ ಹೇಳಬದುದು. ಹೌದು, ಇನ್ಮೇಲೆ 9 ಗಂಟೆಯಲ್ಲ 14 ಗಂಟೆ ಕೆಲಸ ಮಾಡಬೇಕಂತೆ. 

ಈ ಸಮಯದ ವಿಸ್ತರಣೆ ಬಗ್ಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಡಬೇಕಾಗಿದೆ. ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳು ಇನ್ಮುಂದೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಒತ್ತಡವಿದೆ. ಇದರಿಂದ salary ಜಾಸ್ತಿ ಆಗುತ್ತಾ NO, ಈಗ ಇರುವ ಅದೇ ಸಂಬಳವಿರುತ್ತದೆ. ಆದರೆ ಕೆಲಸದ ಸಮಯ ಮಾತ್ರ ವಿಸ್ತರಣೆ ಮಾಡಲು ಕಾರ್ಮಿಕ ಇಲಾಖೆ ಮುಂದಾಗಿದೆ. 

ಇದನ್ನೂ ಓದಿ: SBI Recruitment 2024: ಪದವಿ ಪಾಸಾದವರಿಗೆ SBIನಲ್ಲಿ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಾಗಲೇ IT ಎಂಪ್ಲೈಯಿಸ್ ಅಸೋಸಿಯೇಷನ್ & ಕಾರ್ಮಿಕ ಇಲಾಖೆ ಸಭೆ ನಡೆದಿದ್ದು, ಸಭೆಯಲ್ಲಿ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದಾರೆ. 14 ಗಂಟೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ, ದೈಹಿಕ ಹಿಂಸೆ, ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

14 ಗಂಟೆ ಕೆಲಸ ಮಾಡಿದರೆ ಐಟಿ ನೌಕರರ ಡಿಪ್ರೆಷನ್‌ಗೆ ಕಾರಣವಾಗುತ್ತದೆ. 14 ಗಂಟೆ ಕೆಲಸ ಅಂದರೆ ಜರ್ನಿ ಎಲ್ಲಾ ಸೇರಿ 18-20 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಇದು ಡಿಪ್ರೆಷನ್ ಮಾತ್ರವಲ್ಲ, ಕೌಟುಂಬಿಕ ಸಮಸ್ಯೆಗೂ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಕೆಲಸದ ಅವಧಿಯನ್ನು ವಿಸ್ತರಣೆ ಮಾಡಬಾರದು ಅಂತಾ IT ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಅಂಬಾನಿ ಮನೆಯ ಪ್ರೀತಿಯ ಶ್ವಾನಕ್ಕಾಗಿ 4 ಕೋಟಿ ರೂಪಾಯಿ ಕಾರು..Mercedes-Benz G 400D ಕಾರಿನಲ್ಲಿ 'ಹ್ಯಾಪಿ' ಲೈಫ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News