70 ಸಾವಿರ ರೂ.ಗೆ ಬೈಕ್ ಅಥವಾ ಸ್ಕೂಟರ್ ಖರೀದಿಸುತ್ತೀರಾ? ಮೊದಲು ಇದನ್ನು ತಿಳಿಯಿರಿ
ಬೈಕ್ Vs ಸ್ಕೂಟರ್: ಸ್ಕೂಟರ್ ಮತ್ತು ಬೈಕ್ ಎರಡೂ ಸಾರಿಗೆಯ ಆರ್ಥಿಕ ಸಾಧನಗಳಾಗಿವೆ. ಆದರೆ ಇವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಕೂಟರ್, ಬೈಕ್ ಕೊಳ್ಳುವ ನಿರ್ಧಾರದಲ್ಲಿ ಹಲವರು ತಪ್ಪು ಮಾಡುತ್ತಾರೆ.
ಬೈಕ್ ಅಥವಾ ಸ್ಕೂಟರ್ ಖರೀದಿ: ಸ್ಕೂಟರ್ ಮತ್ತು ಬೈಕು ಎರಡೂ ಸುಗಮ ಸಂಚಾರಕ್ಕೆ ಅಗತ್ಯವಾಗಿ ಬೇಕು. ಆದರೆ ಇವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಸ್ಕೂಟರ್ ಮತ್ತು ಬೈಕ್ ಕೊಳ್ಳುವ ನಿರ್ಧಾರದಲ್ಲಿ ಹಲವರು ತಪ್ಪು ಮಾಡುತ್ತಾರೆ. ಆದಾಗ್ಯೂ, ಸ್ಕೂಟರ್ ಅಥವಾ ಬೈಕು ಖರೀದಿಸುವ ನಿರ್ಧಾರವು ನಿಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ನೀವು ನಗರ ಸಾರಿಗೆಗಾಗಿ ದ್ವಿಚಕ್ರ ವಾಹನ ಹುಡುಕುತ್ತಿದ್ದರೆ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ನಿಮ್ಮ ಲಾಂಗ್ ಡ್ರೈವ್‍ಗೆ ಬೈಕ್ ಉತ್ತಮ ಆಯ್ಕೆಯಾಗಿದೆ.
ದ್ವಿಚಕ್ರ ವಾಹನವನ್ನು 70,000 ರೂ.ಗೆ ಖರೀದಿಸಬೇಕು ಎಂದರೆ ನೀವು ಚಿಕ್ಕ ಬೈಕ್ ಅಥವಾ ಸಣ್ಣ ಸ್ಕೂಟರ್ ಖರೀದಿಸಲು ಬಯಸುತ್ತೀರಿ. ನಿಮ್ಮ ಮನೆಯ ಅಗತ್ಯ ಕೆಲಸಗಳಿಗೆ ಇವು ಸಹಕಾರಿಯಾಗಿವೆ. ಆದರೆ ಇವುಗಳಲ್ಲಿ ನಿಮಗೆ ಸ್ಕೂಟರ್ ಉತ್ತಮ ಆಯ್ಕೆಯಾಗಿರುತ್ತದೆ. ಹೇಗೆ ಎಂದು ತಿಳಿಯಿರಿ.
ಇದನ್ನೂ ಓದಿ: ಜೀ ಸಂಸ್ಥೆಯ ಷೇರುದಾರರಿಗೆ ಗುಡ್ ನ್ಯೂಸ್..! ZEEL-Sony ವೀಲಿನ ಪ್ರಕ್ರಿಯೆಗೆ NCLT ಅನುಮೋದನೆ
ಆರಾಮದಾಯಕ
ಬೈಕ್‌ಗಳಿಗಿಂತ ಸ್ಕೂಟರ್‌ಗಳು ಸವಾರಿ ಮಾಡಲು ಹೆಚ್ಚು ಆರಾಮದಾಯಕವಾಗಿದೆ. ಸ್ಕೂಟರ್‌ನ ಆಸನವು ವಿಶಾಲವಾಗಿದೆ, ಅದರ ಮೇಲೆ ಕುಳಿತುಕೊಳ್ಳಲು ಆರಾಮದಾಯಕವಾಗಿದೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಆರಾಮವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಸ್ಟೋರೇಜ್
ಬೈಕ್‌ಗಳಿಗೆ ಹೋಲಿಸಿದರೆ ಸ್ಕೂಟರ್‌ಗಳು ಹೆಚ್ಚಿನ ಸ್ಟೋರೇಜ್ ನೀಡುತ್ತವೆ. ಸೀಟಿನ ಕೆಳಗೆ ಸ್ಟೋರೇಜ್ ಇರುತ್ತದೆ ಮತ್ತು ಸವಾರರು ತಮ್ಮ ಪಾದಗಳನ್ನು ಇಡುವ ಮುಂಭಾಗದಲ್ಲಿಯೂ ಸಹ ಸಾಕಷ್ಟು ಸ್ಥಳಾವಕಾಶವಿರುತ್ತದೆ. ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಲು ಇದು ನಿಮಗೆ ಅನುಕೂಲವಾಗಿರುತ್ತದೆ.
ಇದನ್ನೂ ಓದಿ: ಏರ್ ಇಂಡಿಯಾದ ನೂತನ ಲೋಗೋ ಅನಾವರಣ
ಸುಗಮ ಚಾಲನೆ
ಬೈಕ್‌ಗೆ ಹೋಲಿಸಿದರೆ ಸ್ಕೂಟರ್ ಸುಗಮ ಚಾಲನೆಯ ಅನುಭವವನ್ನು ನೀಡುತ್ತದೆ. ಇದರಲ್ಲಿ ಸವಾರನು ಗೇರ್ ಬದಲಾಯಿಸಬೇಕಾಗಿಲ್ಲ. ಇದು ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರುತ್ತದೆ. ಹೀಗಾಗಿ ಇದು ಸುಗಮ ಚಾಲನೆಗೆ ನೆರವಾಗುತ್ತದೆ.
ಮಹಿಳೆಯರಿಗೆ ಮತ್ತು ಹಿರಿಯರಿಗೆ ಉತ್ತಮ
ಬೈಕ್‌ಗಳಿಗಿಂತ ಸ್ಕೂಟರ್‌ಗಳು ಮಹಿಳೆಯರಿಗೆ ಮತ್ತು ವಯಸ್ಸಾದವರಿಗೆ ಉತ್ತಮ. ಏಕೆಂದರೆ ಇವುಗಳು ಸವಾರಿ ಮಾಡಲು ಸುಲಭವಾಗಿದೆ ಮತ್ತು ಸಾಮಾನ್ಯವಾಗಿ ಬೈಕುಗಳಿಗಿಂತ ಉತ್ತಮವೆಂದು ಪರಿಗಣಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.