ಜೀ ಸಂಸ್ಥೆಯ ಷೇರುದಾರರಿಗೆ ಗುಡ್ ನ್ಯೂಸ್..!  ZEEL-Sony ವೀಲಿನ ಪ್ರಕ್ರಿಯೆಗೆ NCLT ಅನುಮೋದನೆ

ಜೀ ಸಂಸ್ಥೆಯ ಎಲ್ಲಾ ಷೇರುದಾರರಿಗೆ ಈಗ ಗುಡ್ ನ್ಯೂಸ್..! ಹೌದು..ಈಗ ಬಂದಿರುವ ಮಾಹಿತಿ ಪ್ರಕಾರ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ (ZEEL) ಮತ್ತು ಸೋನಿ ವಿಲೀನವನ್ನು  ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮೋದಿಸಿದೆ.ಆ ಮೂಲಕ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ಆಕ್ಷೇಪಣೆಗಳನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ತಿರಸ್ಕರಿಸಿದ ನಂತರ ವ್ಯಾಪಾರ ವೀಲಿನವು ಸುಗಮವಾಗಿ ನೆರವೇರಿದೆ.

Written by - Manjunath N | Last Updated : Aug 10, 2023, 10:45 PM IST
  • ಶುಕ್ರವಾರದಂದು ಆದೇಶದ ವಿವರವಾದ ಪ್ರತಿಯನ್ನು ಕಂಪನಿಗಳು ಬಿಡುಗಡೆ ಮಾಡಲಿವೆ
  • ಈಗ ಈ ವಿಲೀನದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಕಂಪನಿಯ ಶೇರುಗಳು ಶೇ 16 ರಷ್ಟು ಏರಿಕೆಯನ್ನು ಕಂಡಿದೆ.
  • ಈ ಹಿನ್ನೆಲೆಯಲ್ಲಿ ಈಗ ಜೀ ಸಂಸ್ಥೆಯ ಎಲ್ಲಾ ಶೇರುದಾರರು ಈ ಸುದ್ದಿಯಿಂದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
 ಜೀ ಸಂಸ್ಥೆಯ ಷೇರುದಾರರಿಗೆ ಗುಡ್ ನ್ಯೂಸ್..!  ZEEL-Sony ವೀಲಿನ ಪ್ರಕ್ರಿಯೆಗೆ NCLT ಅನುಮೋದನೆ title=
file photo

ನವದೆಹಲಿ: ಜೀ ಸಂಸ್ಥೆಯ ಎಲ್ಲಾ ಷೇರುದಾರರಿಗೆ ಈಗ ಗುಡ್ ನ್ಯೂಸ್..! ಹೌದು..ಈಗ ಬಂದಿರುವ ಮಾಹಿತಿ ಪ್ರಕಾರ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ (ZEEL) ಮತ್ತು ಸೋನಿ ವಿಲೀನವನ್ನು  ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮೋದಿಸಿದೆ.ಆ ಮೂಲಕ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ಆಕ್ಷೇಪಣೆಗಳನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ತಿರಸ್ಕರಿಸಿದ ನಂತರ ವ್ಯಾಪಾರ ವೀಲಿನವು ಸುಗಮವಾಗಿ ನೆರವೇರಿದೆ.

ಶುಕ್ರವಾರದಂದು ಆದೇಶದ ವಿವರವಾದ ಪ್ರತಿಯನ್ನು ಕಂಪನಿಗಳು ಬಿಡುಗಡೆ ಮಾಡಲಿವೆ, ಈಗ ಈ ವಿಲೀನದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಕಂಪನಿಯ ಶೇರುಗಳು ಶೇ 16 ರಷ್ಟು ಏರಿಕೆಯನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ಈಗ ಜೀ ಸಂಸ್ಥೆಯ ಎಲ್ಲಾ ಶೇರುದಾರರು ಈ ಸುದ್ದಿಯಿಂದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ (ZEEL) ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ನಡುವಿನ ವಿಲೀನ ಪ್ರಕ್ರಿಯೆಯನ್ನು ಎರಡು ಕಂಪನಿಗಳ ಮನರಂಜನಾ ಮಂಡಳಿಗಳು ಅನುಮೊದಿಸಿವೆ. ಈ ಹಿಂದೆ ಈ ಹಲವಾರು ಕಂಪನಿಗಳು ಈ ವಿಲೀನ ಪ್ರಕ್ರಿಯೆಗೆ ಅಡ್ಡಿಪಡಿಸಲು ಅರ್ಜಿಗಳನ್ನು ಸಲ್ಲಿಸಿದ್ದವು.

ಇದನ್ನೂ ಓದಿ: ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಲೋಕಸಭಾದಿಂದ ಕಾಂಗ್ರೆಸ್‌ನ ಅಧೀರ್ ಚೌಧರಿ ಅಮಾನತು

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್-ಸೋನಿ ಒಪ್ಪಂದವನ್ನು ಅನುಮೋದಿಸುತ್ತಾ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT)  ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಟ್ರಸ್ಟಿಶಿಪ್, ಜೆಸಿ ಫ್ಲವರ್ಸ್ ಮತ್ತು ಆಕ್ಸಿಸ್ ಫೈನಾನ್ಸ್‌ನಂತಹ ಪ್ರಮುಖ ಸಂಸ್ಥೆಗಳ ಆಕ್ಷೇಪಣೆಗಳನ್ನು ತಿರಸ್ಕರಿಸಿತು.ಈ ವೀಲಿನದ ಪ್ರಕ್ರಿಯೆಯಲ್ಲಿ ಸೋನಿ ಸಂಸ್ಥೆಯು ವಿಲೀನದ ಅತಿ ದೊಡ್ಡ ಪಾಲುದಾರ ಸಂಸ್ಥೆಯಾಗಲಿದ್ದು, ಅಲ್ಲದೆ ಈ ಒಪ್ಪಂದದ ನಂತರ ಹೊಸ ಕಂಪನಿಯನ್ನು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುತ್ತದೆ

ಪ್ರಸ್ತುತ ಪರಿಸ್ಥಿತಿಯಲ್ಲಿ, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ ನ ಷೇರುದಾರರ ಪಾಲು ಶೇ 61.25% ಆಗಿದೆ.15.75 ಮಿಲಿಯನ್ ಡಾಲರ್ ಹೂಡಿಕೆಯ ನಂತರ ಈ ಷೇರುಗಳಲ್ಲಿ ಬದಲಾವಣೆ ಇರುತ್ತದೆ. ಇದರ ನಂತರ, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ ಷೇರುದಾರರ ಪಾಲು ಶೇಕಡಾ 47.07 ರಷ್ಟಿದ್ದರೆ, ಸೋನಿಯದ್ದು ಸುಮಾರು ಶೇ 52.93 ರಷ್ಟಿರಲಿದೆ.

ಇದನ್ನೂ ಓದಿ: " ಬಿಜೆಪಿ ಸಂಸದನಿಂದ ಕುಸ್ತಿಪಟುಗಳು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ನಿಮ್ಮಿಂದ ಒಂದೇ ಒಂದು ಮಾತು ಬರಲಿಲ್ಲ ಯಾಕೆ?"

ಹೊಸ ಕಂಪನಿಯ ಆದಾಯವು  2 ಬಿಲಿಯನ್ ಡಾಲರ್ ಗೂ ಹೆಚ್ಚು ಎಂದು ನಿರೀಕ್ಷಿಸಲಾಗಿದೆ .ಈ ಹೊಸ ವಿಲೀನವು ಸೋನಿ ಮತ್ತು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್ ಎರಡಕ್ಕೂ ಉತ್ತೇಜನವನ್ನು ನೀಡುತ್ತದೆ ಎಂದು ಎನ್ನಲಾಗಿದೆ.

ಜೀ ಎಂಟರ್ಟೈನ್ಮೆಂಟ್-ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ನಡುವಿನ ವಿಲೀನವನ್ನು 22 ಸೆಪ್ಟೆಂಬರ್ 2021 ರಂದು ಘೋಷಿಸಲಾಯಿತು. ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸ್ ಲಿಮಿಟೆಡ್-ಸೋನಿ ವಿಲೀನದ ನಂತರ ರೂಪುಗೊಂಡ ಕಂಪನಿಯಲ್ಲಿ 11,605.94 ಕೋಟಿ ರೂ ಹೂಡಿಕೆ ಮಾಡಲಾಗುತ್ತದೆ. ಈಗ ವಿಲೀನ ಕಂಪನಿಯನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News