ದೀಪಾವಳಿಯ ಶುಭ ದಿನದಂದು ಈ ಐದು ಟಾಪ್ ಬೈಕ್ ಖರೀದಿಸಿ ರೂ.43,000 ವರೆಗೆ ಹಣ ಉಳಿಸಿ
ಒಂದು ವೇಳೆ ನೀವೂ ಕೂಡ ಹಬ್ಬದ ಋತುವಿನಲ್ಲಿ ಬೈಕ್ ಖರೀದಿಗಾಗಿ ಯೋಜನೆ ರೂಪಿಸಿದ್ದರೆ, ಹೊಂಡಾ ಒಳಗೊಂಡಂತೆ ಬಜಾಜ್ ಹಾಗೂ ಟಿವಿಎಸ್ ಗಳಂತಹ ಕಂಪನಿಗಳು ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆಗಳನ್ನೂ ನೀಡುತ್ತಿವೆ. ನೀವೂ ಕೂಡ ನಿಮ್ಮ ಬಜೆಟ್ ಗೆ ತಕ್ಕಂತೆ ಬೈಕ್ ಖರೀದಿಸಬಹುದು. ಇಲ್ಲಿವೆ ನಿಮಗಾಗಿ ಕೆಲ ಆಕರ್ಷಕ ಆಫರ್ ಗಳು.
ನವದೆಹಲಿ: ಕೊರೊನಾ (Corona Epidemic) ಮಹಾಮಾರಿಯ ಕಾರಣ ಜನರು ಸಾರ್ವಜನಿಕ ಸಾರಿಗೆ ಬಳಸುವುದರಿಂದ ಹಿಂಜರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಹನ ಖರೀದಿಯತ್ತ ಮುಖಮಾಡಿದ್ದಾರೆ. ನಾಲ್ಕು ಚಕ್ರಗಳ ವಾಹನ ಖರೀದಿಸಲು ಬಜೆಟ್ ಇಲ್ಲದವರು, ದ್ವಿಚಕ್ರ ವಾಹನ ಅಂದರೆ ಮೋಟರ್ ಸೈಕಲ್ ಗಳನ್ನು ಖರೀದಿಸುತ್ತಿದ್ದಾರೆ. ನೀವೂ ಸಹ ಬರುವ ದೀಪಾವಳಿ ಹಬ್ಬದ ಶುಭ ದಿನದಂದು ಬೈಕ್ ಖರೀದಿಸಲು ಯೋಜಿಸುತ್ತಿದ್ದರೆ, ಇದು ನಿಮಗೆ ಒಂದು ಉತ್ತಮ ಅವಕಾಶ ಇದೆ. ದೇಶದ ಬಹುತೇಕ ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿವೆ. ಬಜಾಜ್, ಹಿರೋ, ಟಿವಿಎಸ್ ಮತ್ತು ಹೊಂಡಾ ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿವೆ. ಇದರರ್ಥ ಹಣ ಉಳಿತಾಯಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ. ಈ ವೇಳೆ ನೀವು ನಿಮ್ಮ ಬಜೆಟ್ ಗೆ ಅನುಗುಣವಾಗಿ ಯಾವುದೇ ಬೈಕ್ ಖರೀದಿಸಬಹುದು.
ಇದನ್ನು ಓದಿ- Average ಬಜೆಟ್ ನಲ್ಲಿ ಮ್ಯಾಕ್ಸಿಮಮ್ ಔಟ್ಪುಟ್ ನೀಡುವ Powerful Bike ಗಳಿವು, ಯಾವ ಆಪ್ಶನ್ ಬೆಸ್ಟ್?
1. ಬಜಾಜ್ ಪ್ಲಾಟಿನಾ 110
ಬಜಾಜ್ ಆಟೋ ತನ್ನ ಬಜಾಜ್ ಪ್ಲಾಟಿನಾ ಬೈಕ್ ಮೇಲೆ ರೂ.2800 ಗಳ ಕೊಡುಗೆ ನೀಡುತ್ತಿದೆ. ಇದಲ್ಲದೆ ಗ್ರಾಹಕರು ಈ ಬೈಕ್ ಅನ್ನು ಕೇವಲ ರೂ. 7226 ಆಕರ್ಷಕ ಡೌನ್ ಪೇಮೆಂಟ್ ಮಾಡಿ ಬೈಕ್ ಅನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು. ಈ ಬೈಕ್ ಮೇಲೆ ಗ್ರಾಹಕರಿಗೆ ಶೇ. 6.99ರ ಆಕರ್ಷಕ ದರದಲ್ಲಿ ಫೈನಾನ್ಸ್ ಸೌಲಭ್ಯ ಕೂಡ ಸಿಗುತ್ತಿದೆ.
2. ಹೀರೋ ಸೂಪರ್ ಸ್ಪ್ಲೆಂಡರ್
ಒಂದು ವೇಳೆ ನೀವು ಹೀರೋ ಸ್ಪ್ಲೆಂಡರ್ ಬೈಕ್ ಖರೀದಿಸಲು ಬಯಸುತ್ತಿದ್ದರೆ, ಈ ಬೈಕ್ ಮೇಲೆ ನಿಮಗೆ ರೂ.3100 ಗಳ ಫೆಸ್ಟಿವ್ ಕ್ಯಾಶ್ ಡಿಸ್ಕೌಂಟ್ ಸಿಗುತ್ತಿದೆ. ಇದರಲ್ಲಿ ರೂ. 2100 ಗಳ ಕ್ಯಾಶ್ ಡಿಸ್ಕೌಂಟ್ ಹಾಗೂ ರೂ.1000 ಎಕ್ಸ್ ಚೇಂಜ್ ಟಾಪ್-ಅಪ್ ಶಾಮೀಲಾಗಿದೆ. ಗ್ರಾಹಕರು ರೂ.4999 ಆರಂಭಿಕ ಡೌನ್ ಪೇಮೆಂಟ್ ಮಾಡಿ ಈ ಬೈಕ್ ಅನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು. ಒಂದು ವೇಳೆ ನೀವು ಫೈನಾನ್ಸ್ ಮಾಡಲು ಬಯಸಿದರೆ ಶೇ.6.99 ದರದಲ್ಲಿ ಫೈನಾನ್ಸ್ ಮಾಡಿಸಬಹುದು. Paytm ಮೂಲಕ ಹಣ ಪಾವತಿಸುವವರಿಗೆ ರೂ. 7500 ಹೆಚ್ಚುವರಿ ಕ್ಯಾಶ್ ಬ್ಯಾಕ್ ಪಡೆಯಬಹುದು.
ಇದನ್ನು ಓದಿ- Festive Seasonನಲ್ಲಿ ನೂತನ ಕಾರ್ ಬಿಡುಗಡೆ ಮಾಡಿದ BMW, Honda
3. ಪಲ್ಸರ್ 125 ನಿಯಾನ್
ಒಂದು ವೇಳೆ ನೀವು ಪಲ್ಸರ್ 125 ನಿಯಾನ್ ಹಾಗೂ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಅನ್ನು ಈ ಹಬ್ಬದ ಋತುವಿನಲ್ಲಿ ಖರೀದಿಸಿದರೆ ನಿಮಗೆ ನೇರವಾಗಿ ರೂ.3000 ಲಾಭ ಸಿಗಲಿದೆ. ಗ್ರಾಹಕರು ಕೇವಲ ರೂ.8580 ಗಳ ಆಕರ್ಷಕ ಡೌನ್ ಪೇಮೆಂಟ್ ಮಾಡುವ ಮೂಲಕ ಈ ಬೈಕ್ ಅನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು. ಇದಲ್ಲದೆ ಎಲ್ಲ ರೀತಿಯ ಪಲ್ಸರ್ ಮಾಡೆಲ್ ಗಳ ಫೈನಾನ್ಸ್ ಮೇಲೆ ರೂ.12000 ವರೆಗೆ ಹಣ ಉಳಿತಾಯ ಮಾಡಬಹುದಾಗಿದೆ.
4. ಟಿವಿಎಸ್ ಸ್ಪೋರ್ಟ್
ಹಬ್ಬದ ಸೀಜನ್ ನಲ್ಲಿ ನೀವು ಬೇಕಾದರೆ ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಕೂಡ ನಿಮ್ಮ ಮನೆಗೆ ಕೊಂಡೊಯ್ಯಬಹುದು. ಕೇವಲ ರೂ. 11,111 ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಬಹುದು. ಈ ಬೈಕ್ ಮೇಲೆ ಶೇ.100 ರಷ್ಟು ಸಾಲ ಸೌಲಭ್ಯ ಕೂಡ ಲಭ್ಯವಿದೆ. ಇದರಲ್ಲಿ ಗ್ರಾಹಕರು ತಿಂಗಳಿಗೆ ರೂ. 1555 EMI ಪಾವತಿಸಬಹುದು.
5. ಹೊಂಡಾ ಹೈನೆಸ್ CB 350
ಇತ್ತೀಚೆಗಷ್ಟೇ ಹೊಂಡಾ ಬಿಡುಗಡೆಗೊಳಿಸಿರುವ ಹೊಸ ರೆಟ್ರೋ ಮೋಟರ್ ಸೈಕಲ್ ಹೊಂಡಾ ಹೈನೆಸ್ ಸಿಬಿ-350 ಮೇಲೆ ಗ್ರಾಹಕರಿಗೆ ರೂ.43,000 ಗಳ ಉಳಿತಾಯ ಮಾಡಬಹುದಾಗಿದೆ. ಈ ಬೈಕ್ ಅನ್ನು ನೀವು ರೂ.4999 ಗಳ ಆರಂಭಿಕ EMI ಮೇಲೆ ಈ ಬೈಕ್ ಅನ್ನು ಖರೀದಿಸಬಹುದು.