ಒಂದು ವೇಳೆ ನೀವೂ ಕೂಡ ಬೈಕ್ ಪ್ರೇಮಿಗಳಾಗಿದ್ದರೆ ಮತ್ತು ಸನೀಹದಲ್ಲಿ ಬೈಕ್ ಕೊಂಡುಕೊಳ್ಳಲು ಯೋಜನೆ ರೂಪಿಸುತ್ತಿದ್ದರೆ, ಯಾವ ಬೈಕ್ ಉತ್ತಮ ಎಂಬ ಪ್ರಶ್ನೆ ನಿಮಗೂ ಕಾಡಲಿದೆ.
ನವದೆಹಲಿ: ಒಂದು ವೇಳೆ ನೀವೂ ಕೂಡ ಬೈಕ್ (Bike) ಪ್ರೇಮಿಗಳಾಗಿದ್ದರೆ ಮತ್ತು ಸನೀಹದಲ್ಲಿ ಬೈಕ್ ಕೊಂಡುಕೊಳ್ಳಲು ಯೋಜನೆ ರೂಪಿಸುತ್ತಿದ್ದರೆ, ಯಾವ ಬೈಕ್ ಉತ್ತಮ ಎಂಬ ಪ್ರಶ್ನೆ ನಿಮಗೂ ಕಾಡಲಿದೆ. ಈ ಕುರಿತು ಹೇಳುವ ತಜ್ಞರು ಇದಕ್ಕಾಗಿ ನೀವು ನಿಮ್ಮ ಬಜೆಟ್ ಅನ್ನು ಮೊದಲು ನಿರ್ಧರಿಸಬೇಕು ಎನ್ನುತ್ತಾರೆ. ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಆಪ್ಶನ್ ಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು. 1 ಲಕ್ಷ ರೂ. ರೇಂಜ್ ನಲ್ಲಿ ಬೈಕ್ ಖರೀದಿಸಲು ಒಂದು ವೇಳೆ ನೀವು ಬೈಕ್ ಖರೀದಿಸಲು ಬಯಸುತಿದ್ದರೆ, ಖ್ಯಾತ ಆಟೋ ಎಕ್ಸ್ಪರ್ಟ್ ಟುಟು ಧವನ್ ಕೆಲ ಬೈಕ್ ಗಳ ಆಪ್ಶನ್ ಗಳನ್ನು ಸೂಚಿಸಿದ್ದಾರೆ. ಈ ಆಪ್ಶನ್ ಗಳ ಆಧಾರದ ಮೇಲೆ ನೀವೂ ಕೂಡ ನಿಮ್ಮ ಬೈಕ್ ಹಾಗೂ ಬಜೆಟ್ ಅನ್ನು ನಿರ್ಧರಿಸಬಹುದು.
ಒಂದು ಲಕ್ಷ ರೂ. ರೇಂಜ್ ನಲ್ಲಿ ನೀವು TVS ಮೋಟರ್ ಬೈಕ್ ಅಪಾಚೆ RTR 160 ಅನ್ನು ನೀವು ಖರೀದಿಸಬಹುದು. ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಬೈಕ್ ನ ಆರಂಭಿಕ ಬೆಲೆ ರೂ.97,000 ರಷ್ಟಿದೆ.
ಇದೆ ಬಜೆಟ್ ನಲ್ಲಿ ಬಜಾಜ್ ಆಟೋಮೊಬೈಲ್ಸ್ ಬೈಕ್ ಆಗಿರುವ ಬಜಾಜ್ ಪಲ್ಸರ್ 150 ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ ರೂ.91 ಸಾವಿರದಿಂದ 1 ಲಕ್ಷ ರೂ.ಗಳ ವರೆಗೆ ಇರಲಿದೆ (ಎಕ್ಸ್ ಷೋ ರೂಂ ಪ್ರೈಸ್)
ಹೊಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ನ 125 ಸಿಸಿ ಇಂಜಿನ್ ಕ್ಷಮತೆಯ ಇಂಜಿನ್ ಹೊಂದಿರುವ ಬೈಕ್ ಹೋಂಡಾ ಶೈನ್ 125 ಅನ್ನು ಕೂಡ ನೀವು ಖರೀದಿಸಬಹುದು. ಇದರ ಎಕ್ಸ್ ಷೋರೂಂ ಬೆಲೆ 71-74 ಸಾವಿರ ರೂ.ಗಳಷ್ಟಿದೆ.
ಹೀರೋ ಮೋಟೋಕಾರ್ಪಸ್ ನ ಬೈಕ್ ಆಗಿರುವ ಹಿರೋ ಎಕ್ಷಟ್ರೀಮ್ 160 R ಅನ್ನು ಕೂಡ ನೀವು ಆಯ್ದುಕೊಳ್ಳಬಹುದು. ಇದರ ಎಕ್ಸ್ ಷೋರೂಂ ಬೆಲೆ ರೂ.99000 ಗಳಷ್ಟಿದೆ.
ಟುಟು ಧವನ್ ಹೇಳುವ ಪ್ರಕಾರ ಒಂದು ವೇಳೆ ನೀವು 125 ಸಿಸಿ ಬೈಕ್ ಗೋಸ್ಕರ ಯೋಚಿಸುತ್ತಿದ್ದರೆ, ಹೀರೊ ಮೋಟೋಕಾರ್ಪ್ಸ್ ನ ಬೈಕ್ ಹೀರೋ ಗ್ಲ್ಯಾಮರ್ 125 ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ ರೇಂಜ್ 71,000 ರಿಂದ 74, 000 ಗಳಷ್ಟಿದೆ.
ಹೊಂಡಾ ಕಂಪನಿಯ ಹೊಂಡಾ ಯೂನಿಕಾರ್ನ್ BS-VI ಕೂಡ ಒಂದು ಲಕ್ಷ ರೂ.ಗಳ ರೇಂಜ್ ನಲ್ಲಿ ಒಂದು ಉತ್ತಮ ಆಪ್ಶನ್ ಆಗಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ ರೂ.94,500 ಗಳಷ್ಟಿದೆ.