Cabinet Approves PM MITRA: Mega Textile Park ಸ್ಥಾಪನೆಗೆ Modi Cabinet ಅನುಮೋದನೆ, 21 ಲಕ್ಷ ಯುವಕರಿಗೆ ಉದ್ಯೋಗಾವಕಾಶ
Cabinet Approves PM MITRA - Mega Textile Park ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸರ್ಕಾರದ ಈ ಕ್ರಮವು 7 ಲಕ್ಷ ನೇರ ಮತ್ತು 14 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ
Cabinet Approves PM MITRA: ಮುಂಬರುವ ಐದು ವರ್ಷಗಳಲ್ಲಿ ಒಟ್ಟು ರೂ 4,445 ಕೋಟಿ ವೆಚ್ಚದಲ್ಲಿ 7 ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪಾರೆಲ್ (PM MITRA) ಪಾರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯ (Cabinet Meeting) ಬಳಿಕ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಜವಳಿ ಸಚಿವ (Union Textile Minister) ಪಿಯುಶ್ ಗೋಯೆಲ್ (Piyush Goyal), ಸರ್ಕಾರದ ಈ ಹೆಜ್ಜೆಯಿಂದ 7 ಲಕ್ಷ ಪ್ರತ್ಯಕ್ಷ ಹಾಗೂ 14 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ. ಈ ಗಾಗಲೇ 10 ರಾಜ್ಯಗಳು ಈ ಯೋಜನೆಯಲ್ಲಿ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಿವೆ ಎಂದು ಗೋಯಲ್ ಹೇಳಿದ್ದಾರೆ.
Nobel Prize 2021 Chemistry: 2021ನೇ ಸಾಲಿನ ರಸಾಯನ ಶಾಸ್ತ್ರವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟ
ವರ್ಷ 2025ರವರೆಗೆ 200 ಬಿಲಿಯನ್ ಡಾಲರ್ ವ್ಯಾಪಾರದ ನಿರೀಕ್ಷೆ
ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ ಜವಳಿ ಉದ್ಯಮದ ವಹಿವಾಟು $ 45 ಬಿಲಿಯನ್ ಆಗಿದ್ದು, 2025 ರ ವೇಳೆಗೆ ಇದು $ 200 ಬಿಲಿಯನ್ ತಲುಪುವ್ ನಿರೀಕ್ಷೆಯಿದೆ. 10 ನೇ ಪಂಚವಾರ್ಷಿಕ ಯೋಜನೆಯಡಿ 2005 ರಲ್ಲಿ ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕ್ ಸ್ಕೀಮ್ (ITPS) ಅನ್ನು ಆರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Big Verdict:ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು
ಏನಿದು ಜವಳಿ ಪಾರ್ಕ್? (Textile Park)
ಭಾರತ ಜವಳಿ ಉದ್ಯಮದಲ್ಲಿ ವಿಶ್ವದ ಆರನೇ ಅತಿದೊಡ್ಡ ರಫ್ತುದಾರ ದೇಶವಾಗಿದೆ. ಟೆಕ್ಸ್ಟೈಲ್ ಪಾರ್ಕ್ ಮೂಲಕ ಈ ವಲಯದಲ್ಲಿ ರಫ್ತು ಶ್ರೇಣಿಯನ್ನು (Export Ranking) ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಜವಳಿ ಸಚಿವಾಲಯದ ಸಮಗ್ರ ಜವಳಿ ಪಾರ್ಕ್ ಯೋಜನೆಯಡಿ, ದೇಶದಲ್ಲಿ 59 ಜವಳಿ ಪಾರ್ಕ್‌ಗಳಿಗೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ-ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.