Indian Railways: ತನ್ನ ನೌಕರರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೈಲು ಇಲಾಖೆ

Railway Bonus 2021 - ಹಬ್ಬಗಳು ಆರಂಭವಾಗುವುದಕ್ಕು ಮುನ್ನವೇ ಭಾರತೀಯ ರೈಲು ಇಲಾಖೆ ತನ್ನ ನೌಕರರಿಗೆ ಇಂದು ಭಾರಿ ಉಡುಗೊರೆಯೊಂದನ್ನು ಘೋಷಣೆ ಮಾಡಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರೈಲು ಇಲಾಖೆಯ ನೌಕರರಿಗೆ 78 ದಿನಗಳ ಬೋನಸ್ ನೀಡಲಾಗುವುದು ಎಂದು ಘೋಷಿಸಲಾಗಿದೆ.

Written by - Nitin Tabib | Last Updated : Oct 6, 2021, 05:12 PM IST
  • ರೇಲ್ವೆ ಇಲಾಖೆಯ ನೌಕರರಿಗೆ ಇಂದು ಬೋನಸ್ ಘೋಷಣೆ
  • ರೇಲ್ವೆ ನೌಕರರಿಗೆ ಸಿಗಲಿದೆ 78 ದಿನಗಳ ಬೋನಸ್,
  • CIL ಹಾಗೂ SCCL ನೌಕರರಿಗೆ ಸಿಗಲಿದೆ 72,500ಗಳ PLR.
Indian Railways: ತನ್ನ ನೌಕರರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೈಲು ಇಲಾಖೆ title=
Railway Bonus 2021 (Representational Image)

Railway Bonus 2021 - ಭಾರತೀಯ ರೈಲು ಇಲಾಖೆ (Indian Railways) ಹಬ್ಬಗಳ ಸೀಜನ್ ಆರಂಭಕ್ಕೂ ಮುನ್ನವೆ ತನ್ನ ನೌಕರರಿಗೆ ಭಾರಿ ಉಡುಗೊರೆಯೊಂದನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ಇಂದು ಸಂಪನ್ನಗೊಂಡ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಬೋನಸ್ ಕುರಿತು ನಿರ್ಧಾರ ಪ್ರಕಟಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), 78 ದಿನಗಳ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದಿದ್ದಾರೆ. ದಸರಾ ಹಬ್ಬ ಆರಂಭಕ್ಕೂ ಮುನ್ನವೇ ರೇಲ್ವೆ ಇಲಾಖೆಯ ನೌಕರರಿಗೆ ಈ ಬೋನಸ್ ಹಣವನ್ನು ಪಾವತಿಸಲಾಗುವುದು. ಪ್ರತಿ ವರ್ಷ ರೇಲ್ವೆ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ ಈ 78 ದಿನಗಳ ಬೋನಸ್ ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಎಷ್ಟು ಹಣ ಸಿಗಲಿದೆ?
ಈ ಬಾರಿ ರೈಲು ಇಲಾಖೆಯ ನೌಕರರಿಗೆ ಸುಮಾರು 18000 ರೂ ಹೆಚ್ಚುವರಿ ಬೋನಸ್ ಸಿಗಲಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಾಮಾನ್ಯವಾಗಿ ಬೋನಸ್ 72 ದಿನಗಳ ವೇತನ ಆಗಿರುತ್ತದೆ. ಆದರೆ, ಈ ಬಾರಿ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ. ರೈಲು ಇಲಾಖೆಯ ಸುಮಾರು 11.56 ಲಕ್ಷ ನೌಕರರಿಗೆ ಇದರ ಲಾಭ ಸಿಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1985 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-IRCTC ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ! ಈ ಕೆಲಸ ಮಾಡಿ ಅತ್ಯುತ್ತಮ ಪ್ರಯೋಜನ ಪಡೆಯಿರಿ

ಎಲ್ಲಾ ನೌಕರರಿಗೆ ಸಿಗಲಿದೆ 72, 500 ರೂ.ಗಳ ರಿವಾರ್ಡ್ 
ಇನ್ನೊಂದೆಡೆ, ಸಾರ್ವಜನಿಕ ವಲಯದ ಕೋಲ್ ಇಂಡಿಯಾ ಲಿಮಿಟೆಡ್ (Coal India Limited) ಹಬ್ಬದ ಸೀಸನ್ ಗೆ ಮುಂಚಿತವಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಅಂದರೆ,  2020-21ರ ಹಣಕಾಸು ವರ್ಷಕ್ಕೆ ತನ್ನ ಎಲ್ಲ ಕಾರ್ಯನಿರ್ವಾಹಕವಲ್ಲದ ಕೆಲಸಗಾರರಿಗೆ 72,500 ರೂ.ಗಳ PLR (Performance-Linked Reward) ನೀಡುವುದಾಗಿ ಘೋಷಿಸಿದೆ. PLR ಅನ್ನು ಅಕ್ಟೋಬರ್ 11, 2021 ಅಥವಾ ಅದಕ್ಕಿಂತ ಮೊದಲು ಪಾವತಿಸಲಾಗುವುದು ಎಂದು ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಕಂಪನಿ ಹೇಳಿದೆ. ಅಂದರೆ, ದಸರಾಕ್ಕಿಂತ ಮುಂಚಿತವಾಗಿ ಉದ್ಯೋಗಿಗಳಿಗೆ ಇದು ಸಿಗಲಿದೆ.

ಇದನ್ನೂ ಓದಿ-IRCTC News: ಭಾರತೀಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಸಂಪೂರ್ಣ ಪಟ್ಟಿ ಇಲ್ಲಿದೆ

ಕೋಲ್ ಇಂಡಿಯಾ ಉಡುಗೊರೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ 'ಕೋಲ್ ಇಂಡಿಯಾ ಹಾಗೂ ಅದರ ಸಬ್ಸಿಡರಿ ಸಿಂಗರೆನಿ ಕೊಲಿಯರಿಸ್ ಕಂಪನಿ ಲಿಮಿಟೆಡ್ ಕಾರ್ಯನಿರ್ವಾಹಕರಲ್ಲದ ಕೆಡೆರ್ ನೌಕರರಿಗೆ ಆರ್ಥಿಕ ವರ್ಷ 2020-21 ಕ್ಕಾಗಿ 72, 500 ರೂ.ಗಳ PLR ನೀಡಲಾಗುವದು' ಎಂದು ಹೇಳಿದೆ. ಸೆಂಟ್ರಲ್ ಟ್ರೇಡ್ ಯೂನಿಯನ್ ಪ್ರತಿನಿಧಿಗಳು ಹಾಗೂ ಕೋಲ್ ಇಂಡಿಯಾ ಹಾಗೂ SCCL ಮ್ಯಾನೇಜ್ಮೆಂಟ್ ಮಧ್ಯೆ ನಡೆದ ದ್ವಿಪಕ್ಷಿಯ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-IRCTC ನೀಡುತ್ತಿದೆ ಲಕ್ಷಾಧಿಪತಿ ಆಗುವ ಅವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News