Car Sales: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಾಟಾದ 3 ಕಾರುಗಳು..!
ಟಾಟಾದ ಅತಿಹೆಚ್ಚು ಮಾರಾಟವಾದ ಕಾರುಗಳು: ಟಾಟಾ ಮೋಟಾರ್ಸ್‌ನ 3 ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಟಾಟಾದ ಮೊದಲ ಕಾರು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಬ್ರೆಝಾಗಳಿಗೆ ಮಣ್ಣು ಮುಕ್ಕಿಸಿದೆ.
ನವದೆಹಲಿ: ಟಾಟಾ ಮೋಟಾರ್ಸ್ ದೇಶದ 3ನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ಏಪ್ರಿಲ್ ತಿಂಗಳಿನಲ್ಲಿಯೂ ಸಹ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಟಾಟಾ ಮೋಟಾರ್ಸ್ ಅತಿಹೆಚ್ಚು ಕಾರು ಮಾರಾಟ ಮಾಡಿದ ದಾಖಲೆ ಹೊಂದಿದೆ. ಪ್ರಸ್ತುತ ಶೇ.14.2ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಟಾಟಾ ಮೋಟಾರ್ಸ್ ಏಪ್ರಿಲ್ 2023ರಲ್ಲಿ 47,010 ಕಾರುಗಳನ್ನು ಮಾರಾಟ ಮಾಡಿದೆ.
ಇದು ಏಪ್ರಿಲ್ 2022ರಲ್ಲಿ ಮಾರಾಟವಾದ 41,590 ಕಾರುಗಳಿಗಿಂತ ಶೇ.13ರಷ್ಟು ಹೆಚ್ಚು. ಇಲ್ಲಿ ನಾವು ಟಾಟಾ ಮೋಟಾರ್ಸ್‌ನ 3 ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಈ ಕಂಪನಿಯ ಮೊದಲ ಕಾರು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಬ್ರೆಝಾಗೆ ಸಹ ಮಣ್ಣು ಮುಕ್ಕಿಸಿದೆ.
ಇದನ್ನೂ ಓದಿ: 130 KM ವೇಗ, 6 ಗಂಟೆಗೆ 520 KM; ದೇಶದ 17ನೇ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಓಡಲಿದೆ!
ಟಾಟಾದ ಅತಿಹೆಚ್ಚು ಮರಾಟವಾದ ಕಾರುಗಳು
ಪ್ರತಿ ತಿಂಗಳಂತೆ ಟಾಟಾ ನೆಕ್ಸಾನ್ ಕಂಪನಿಯ ಶ್ರೇಣಿಯಲ್ಲಿ ಹೆಚ್ಚು ಮಾರಾಟವಾಗುವ ಕಾರಾಗಿದೆ. ಇದು ದೇಶದ ಅತಿಹೆಚ್ಚು ಮಾರಾಟವಾಗುವ SUV ಕೂಡ ಆಗಿದೆ. ನೆಕ್ಸಾನ್ ಮಾರಾಟವು ಏಪ್ರಿಲ್ ತಿಂಗಳಿನಲ್ಲಿ 15,002 ಯುನಿಟ್‌ಗಳು ಅಂದರೆ ಶೇ.11ರಷ್ಟು ಹೆಚ್ಚಾಗಿದೆ. 2022ರ ಏಪ್ರಿಲ್‍ಗೆ ಹೊಳಿಸಿದ್ರೆ 13,471 ಯುನಿಟ್‌ಗಳು ಅಂದು ಮಾರಾಟವಾಗಿದ್ದವು. ಮಾಸಿಕ ಆಧಾರದ ಮೇಲೆ ನೆಕ್ಸಾನ್ ಕೇವಲ ಶೇ.2ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಪೆಟ್ರೋಲ್ / ಡೀಸೆಲ್ ನೆಕ್ಸಾನ್ ಜೊತೆಗೆ EV ಆವೃತ್ತಿಯ ಮಾರಾಟವನ್ನು ಸಹ ಒಳಗೊಂಡಿದೆ.
ಟಾಟಾ ಪಂಚ್ ಕೈಚಳಕ!
ಟಾಟಾ ಪಂಚ್ ಕಂಪನಿಯ 2ನೇ ಅತಿಹೆಚ್ಚು ಮಾರಾಟವಾದ ಕಾರ್ ಆಗಿ ಮುಂದುವರೆದಿದೆ. ಟಾಟಾ ಪಂಚ್ ಏಪ್ರಿಲ್‌ನಲ್ಲಿ 10,934 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2022ರ ಏಪ್ರಿಲ್‌ನಲ್ಲಿ 10,132 ಯುನಿಟ್‌ಗಳು ಮಾತ್ರ ಮಾರಾಟವಾಗಿದ್ದವು. ಈ ಮೂಲಕ ಟಾಟಾ ಪಂಚ್ ಮಾರಾಟದಲ್ಲಿ ಒಟ್ಟು ಶೇ.8ರಷ್ಟು ಬೆಳವಣಿಗೆ ದಾಖಲಿಸಿದೆ.
ಇದನ್ನೂ ಓದಿ: Gold Price: ಮದುವೆಯ ಸೀಸನ್‌ನಲ್ಲಿ ಚಿನ್ನ-ಬೆಳ್ಳಿ ಮತ್ತಷ್ಟು ಅಗ್ಗ, ಬೆಲೆಯಲ್ಲಿ ತೀವ್ರ ಕುಸಿತ!
ಟಾಟಾದ 3ನೇ ಅತಿಹೆಚ್ಚು ಮಾರಾಟವಾದ ಕಾರು
ಕಂಪನಿಯ ಟಾಟಾ ಟಿಯಾಗೊ ಕಾರು 3ನೇ ಸ್ಥಾನದಲ್ಲಿದೆ. ಇದು ಏಪ್ರಿಲ್ 2023ರಲ್ಲಿ 8,450 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದೇ ರೀತಿ ಏಪ್ರಿಲ್ 2022ರಲ್ಲಿ 5,061 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಟಿಯಾಗೊ ಶೇ.67ರಷ್ಟು ಬೆಳವಣಿಗೆ ದಾಖಲಿಸಿದೆ. Nexonನಂತೆ ಇದು EV ಆವೃತ್ತಿಯ ಮಾರಾಟವನ್ನು ಸಹ ಒಳಗೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.