7th Pay Commission: ಸರ್ಕಾರಿ ನೌಕರರಿಗೆ ಮನೆ ನಿರ್ಮಾಣಕ್ಕೆ ಸಿಗಲಿದೆ House Building Advance
7th Pay Commission Latest News: ಕರೋನಾ ಅವಧಿಯಲ್ಲಿ ಕೇಂದ್ರ ಸರ್ಕಾರ ತನ್ನ 52 ಲಕ್ಷ ಉದ್ಯೋಗಿಗಳಿಗೆ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಅನ್ನು ಘೋಷಿಸಿದೆ. ಕರೋನಾ ನಂತರ 2020 ರ ಜೂನ್‌ನಲ್ಲಿ ಇದನ್ನು ಘೋಷಿಸಲಾಯಿತು.
ನವದೆಹಲಿ : 7th Pay Commission Latest News: ಕರೋನಾ ಅವಧಿಯಲ್ಲಿ ಕೇಂದ್ರ ಸರ್ಕಾರ ತನ್ನ 52 ಲಕ್ಷ ಉದ್ಯೋಗಿಗಳಿಗೆ ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಅನ್ನು (House Building Advance) ಘೋಷಿಸಿದೆ. ಕರೋನಾ ನಂತರ 2020 ರ ಜೂನ್‌ನಲ್ಲಿ ಇದನ್ನು ಘೋಷಿಸಲಾಯಿತು. ಈ ಯೋಜನೆಯಡಿ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮನೆಗಳನ್ನು ನಿರ್ಮಿಸಲು ಕೈಗೆಟುಕುವ ದರದಲ್ಲಿ ಹಣವನ್ನು ಒದಗಿಸುವುದಾಗಿ ಘೋಷಿಸಿದೆ..
ಏನಿದು ಯೋಜನೆ ?
House Building Advance ಯೋಜನೆಯಡಿ, 52 ಲಕ್ಷ ಕೇಂದ್ರ ಸರ್ಕಾರಿ ನೌಕರರು ಕೇವಲ 7.9 ಶೇಕಡಾ ದರದಲ್ಲಿ ಮನೆ ನಿರ್ಮಿಸಲು ಹಣವನ್ನು ತೆಗೆದುಕೊಳ್ಳಬಹುದು. ಆದರೆ, ಈ ಯೋಜನೆಯ ಲಾಭವನ್ನು ನೀವು ಮಾರ್ಚ್ 31, 2022 ರವರೆಗೆ ಮಾತ್ರ ಪಡೆಯಬಹುದಾಗಿದೆ. ಈ ವಿಶೇಷ ಯೋಜನೆಯನ್ನು 1 ಅಕ್ಟೋಬರ್ 2020 ರಿಂದ ಪ್ರಾರಂಭಿಸಲಾಯಿತು. ಸೆಪ್ಟೆಂಬರ್ 2020 ರಲ್ಲಿ, ಹಣಕಾಸು ಸಚಿವೆ, ನಿರ್ಮಲಾ ಸೀತಾರನ್ (Niramala Sitharaman) ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇತ್ತೀಚೆಗೆ, ಏಳನೇ ವೇತನ ಆಯೋಗವನ್ನು ಗಮನದಲ್ಲಿಟ್ಟುಕೊಂಡು, ಹೌಸ್ ಬಿಲ್ಡಿಂಗ್ ಅಡ್ವಾನ್ಸ್‌ನಲ್ಲಿಯೂ ಪರಿಷ್ಕರಣೆ ಮಾಡಲಾಯಿತು.
ಮನೆ ವಿಸ್ತರಣೆಗೆ ಗರಿಷ್ಠ 10 ಲಕ್ಷ ರೂ:
ಮನೆ ಈಗಾಗಲೇ ನಿರ್ಮಿಸಲ್ಪಟ್ಟಿದ್ದು, ಮತ್ತು ನೀವು ಅದನ್ನು ಮಾರ್ಪಡಿಸಲು ಬಯಸಿದರೆ, ಇದಕ್ಕಾಗಿ, ಈ ಮುಂಗಡವನ್ನು ಗರಿಷ್ಠ 10 ಲಕ್ಷ ರೂ.ವರೆಗೆ ನೀಡಲಾಗುವುದು. ಮೂಲ ವೇತನದ (Salary) 34 ಪಟ್ಟು ಮೊತ್ತವನ್ನು ನೀಡಲಾಗುತ್ತದೆ. ಈ ಸಾಲದ ದೊಡ್ಡ ವೈಶಿಷ್ಟ್ಯವೆಂದರೆ, ಈ ಸಾಲದ ಮರುಪಾವತಿಗೆ ಒಟ್ಟು 20 ವರ್ಷಗಳ ಅವಧಿಯನ್ನು ನೀಡಲಾಗುತ್ತದೆ. ಮೊದಲ 15 ವರ್ಷಗಳಲ್ಲಿ ಅಂದರೆ 180 ಇಎಂಐಗಳನ್ನು ಪಾವತಿಸಬೀಕಾಗುತ್ತದೆ. ನಂತರದ 5 ವರ್ಷಗಳಲ್ಲಿ ಬಡ್ಡಿಯನ್ನು (Interest) ಪಾವತಿಸಲಾಗುವುದು.
ಯೋಜನೆಯ ಷರತ್ತುಗಳು :
ಈ ಅಡ್ವಾನ್ಸ್ ತೆಗೆದುಕೊಳ್ಳಲು ಕೆಲವು ಷರತ್ತುಗಳನ್ನು ಹಾಕಲಾಗಿದೆ. ಉದಾಹರಣೆಗೆ, ಟೆಂಪರರಿ ಉದ್ಯೋಗಿ 5 ವರ್ಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಆ ಉದ್ಯೋಗಿ ಕೂಡಾ, ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಲಾಭವನ್ನು ಪಡೆಯಬಹುದು. ಆದರೆ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸುವುದು ಅವಶ್ಯಕವಾಗಿರುತ್ತದೆ. ಮನೆಯನ್ನು ಆಲ್ಟರ್ ಮಾಡುದುವುದಾದರೂ ಕೂಡಾ, ಹೌಸ್ ಬಿಲ್ಡಿಂಗ್ ಅಡ್ವಾನ್ಸ್ ಅನ್ನು (House Building Advance) ಬಳಸಬಹುದು. ಆದರೆ ಈ ಲಾಭ ಖಾಯಂ ಉದ್ಯೋಗಿಗೆ ಮಾತ್ರ ಸಿಗುತ್ತದೆ.
ಇದನ್ನೂ ಓದಿ : SBI Alert! ನಿಮ್ಮ ಫೋನ್ ಗೂ ಈ ಸಂದೇಶ ಬಂದಿದೇಯಾ? ಹುಷಾರ್ ಕ್ಲಿಕ್ಕಿಸಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.