ಬೆಂಗಳೂರು: ಕೇಂದ್ರ ಸರ್ಕಾರ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಅಧಿಕೃತವಾಗಿ ಜಾರಿಗೊಳ್ಳಲಿದೆ. ಈ ನೀತಿಯು ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ದಿನಬಳಕೆಯ ಹಾಗೂ ಆಹಾರ ವಸ್ತುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಎಸ್‌ಟಿ ಕೌನ್ಸಿಲ್‌ ಅದಾಗಲೇ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನರಿಗೆ ಗಾಯದ ಮೇಲೆ ಬರೆ ಬೀಳುವುದು ಗ್ಯಾರೆಂಟಿಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vegetable Price: ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ


ಯಾವುದೆಲ್ಲಾ ದುಬಾರಿ..?
* ಪ್ಯಾಕ್ ಮಾಡಿದ ಆಹಾರ ವಸ್ತು (ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು)
* ಎಲ್ ಇಡಿ ಬಲ್ಬ್, ಎಲ್‌ಇಡಿ ಲ್ಯಾಂಪ್, ಸೋಲಾರ್ ವಾಟರ್ ಹೀಟರ್, ಮುದ್ರಣ ಇಂಕ್, 
* ನಿತ್ಯ 1000 ರೂಗಿಂತ ಕಡಿಮೆ ಇರೋ ಹೋಟೆಲ್ ರೂಂಗೂ 12% ಜಿಎಸ್ಟಿ ಜಾರಿ
* ಚೆಕ್ ಬುಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಅಂಚೆ ಇಲಾಖೆ ಬುಕ್ ಪೋಸ್ಟ್
* ನಿತ್ಯ 5000 ರೂ ಹೆಚ್ಚು ಶುಲ್ಕ ಇರುವ ಆಸ್ಪತ್ರೆಯ ಸ್ಪೆಷಲ್ ವಾರ್ಡ್‌ಗೆ 5% GSt ಜಾರಿ (ಐಸಿಯು ಹೊರತುಪಡಿಸಿ)
* ನಿತ್ಯ 5000ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಧಾರ್ಮಿಕ ಕೇಂದ್ರಗಳು, ಮಾಸಿಕ 2500ಕ್ಕೂ ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಜಿಎಸ್‌ಟಿ ಜಾರಿ
* ಬ್ಲಡ್ ಬ್ಯಾಂಕ್, ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು ನೀಡಿದ್ದ ವಸತಿ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ರದ್ದು


ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನ ಸಾಮಾನ್ಯರಿಗೆ ಈ ನೀತಿಯು ನುಂಗಲಾರದ ಬಿಸಿ ತುಪ್ಪವಾಗಲಿದೆ. ಇವಷ್ಟೇ ಅಲ್ಲದೆ, ಹಾಲು ಉತ್ಪನ್ನಗಳ ಮೇಲೂ ಜಿಎಸ್‌ಟಿ ಜಾರಿಯಾಗಲಿದೆ. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. 


ಇದನ್ನೂ ಓದಿ: Surya Gochar 2022: ಈ ನಾಲ್ಕು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾರೆ ಶನಿ-ಸೂರ್ಯ


ಶೇ 5ರಷ್ಟು ಜಿಎಸ್‌ಟಿ ವಿಧಿಸಿದ ಪರಿಣಾಮ ಇಂದಿನಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವಾಗಲಿದೆ. 1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆಯಾಗಲಿದೆ. ಆದರೆ, ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊಸರು ಲೀಟರ್‌ಗೆ 43 ಇದ್ದದ್ದು ಇನ್ಮುಂದೆ 46 ರೂ. ಆಗಲಿದೆ. ಅದೇ ರೀತಿ ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂ ಏರಿಕೆಯಾಗಿದೆ. ಜೊತೆಗೆ ಲಸ್ಸಿ ಬೆಲೆಯಲ್ಲಿಯೂ ಸಹ ಒಂದು ರೂ. ಏರಿಕೆ ಕಂಡಿದೆ. ಗ್ರಾಹಕರು ಹೊಸ ದರವನ್ನು ತಿಳಿದುಕೊಳ್ಳಬೇಕೆಂದು ಕೆಎಂಎಫ್‌ ಸೂಚನೆ ನೀಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ