Railway Rules : ದೂರದ ಊರುಗಳಿಗೆ ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ, ಈ ಸುದ್ದಿಯ ಬಗ್ಗೆ ನಿಮಗೆ ತಿಳಿದಿರಬೇಕು. ಕೆಲವು ಪ್ರಮುಖ ನಿಯಮಗಳಲ್ಲಿನ ಬದಲಾವಣೆಗಳನ್ನು ರೈಲ್ವೆ ಮಂಡಳಿಯು ಅನುಮೋದಿಸಿದೆ. ಈ ಬದಲಾವಣೆಯ ನಂತರ, ಜೂನ್ ತಿಂಗಳ ನಂತರ ರೈಲುಗಳ ಪ್ಯಾಂಟ್ರಿ ಕಾರ್‌ಗಳಲ್ಲಿ ಪ್ರಯಾಣಿಕರಿಗೆ ಉಪಹಾರ ಮತ್ತು ಆಹಾರವನ್ನು ಸಿದ್ಧಪಡಿಸಲಾಗುವುದಿಲ್ಲ. ಪ್ಯಾಂಟ್ರಿ ಕಾರಿನಲ್ಲಿ, ನೀರು ಬಿಸಿ ಮಾಡಬಹುದು ಅಥವಾ ತೀರಾ ಅಗತ್ಯ ಎಂದಾದಾಗ ಚಹಾ ತಯಾರಿಸಬಹುದು. ರೈಲ್ವೆ ನಿಲ್ದಾಣಗಳ ಸುತ್ತ ಇರುವ IRCTC ಬೇಸ್ ಕಿಚನ್ ಗಳನ್ನು ಕೂಡಾ ಮುಚ್ಚಲಾಗುವುದು.


COMMERCIAL BREAK
SCROLL TO CONTINUE READING

ಕ್ಲಸ್ಟರ್‌ನಲ್ಲಿ ಪ್ಯಾಂಟ್ರಿಕಾರ್  :
ಈ ಬದಲಾವಣೆಯ ನಂತರ, ಕ್ಲಸ್ಟರ್‌ನಲ್ಲಿ ಪ್ಯಾಂಟ್ರಿಕಾರ್ ಅನ್ನು ನಿರ್ವಹಿಸಲು IRCTC ಸಿದ್ಧತೆ ನಡೆಸುತ್ತಿದೆ. ಇಲ್ಲಿ ತಯಾರಿಸಿದ ಉಪಹಾರ ಮತ್ತು ಆಹಾರವನ್ನು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುತ್ತದೆ. ಪ್ರಸ್ತುತ ಸೆಮಿ ಹೈಸ್ಪೀಡ್ ಟ್ರೈನ್ ವಂದೇ ಭಾರತ್‌ನಲ್ಲಿ ಇದೇ ರೀತಿಯ ವ್ಯವಸ್ಥೆ ಇದೆ.ವಂದೇ ಭಾರತ್ ರೈಲಿನಲ್ಲಿ ಬಿಸಿನೀರಿನ ವ್ಯವಸ್ಥೆ ಇದೆ. ಉಳಿದ ಎಲ್ಲಾ ವಸ್ತುಗಳನ್ನು ಮೊದಲೇ ಸಿದ್ದಪಡಿಸಿ ನಂತರ ಪ್ರಯಾಣಿಕರಿಗೆ  ನೀಡಲಾಗುತ್ತದೆ. ರೈಲ್ವೇ ಮಂಡಳಿಯ ಈ ಆದೇಶದ ಹಿನ್ನೆಲೆಯಲ್ಲಿ ಜುಲೈನಿಂದ ರೈಲುಗಳಲ್ಲಿ ಅಡುಗೆ ವ್ಯವಸ್ಥೆ ಸಂಪೂರ್ಣ ಬದಲಾಗಲಿದೆ.


ಇದನ್ನೂ ಓದಿ ರಾಜ್ಯದಲ್ಲಿ ಭಾರತ್ ಅಕ್ಕಿ ಮಾರಾಟ, ಸಾಗಾಟಕ್ಕೆ ಕಡಿವಾಣ : ಇನ್ನು ಇಷ್ಟು ದಿನ ಸಿಗಲ್ಲ ಅಗ್ಗದ ಬೆಲೆಯ ಅಕ್ಕಿ


ಗುಣಮಟ್ಟದ ಆಹಾರ ವಿತರಣೆ : 
ಹೊಸ ವ್ಯವಸ್ಥೆಯಡಿ ಯಾವುದೇ ಮಾರ್ಗದ ರೈಲುಗಳಲ್ಲಿ ಗುಣಮಟ್ಟದ ಆಹಾರ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಪ್ಯಾಂಟ್ರಿಕಾರ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಿವಿಧ ಏಜೆನ್ಸಿಗಳಿಗೆ ನೀಡಲಾಗುವುದು. ಏಜೆನ್ಸಿಯು ಅದೇ ಮಾರ್ಗದಲ್ಲಿ ಐದರಿಂದ ಏಳು ರೈಲುಗಳ ಜವಾಬ್ದಾರಿಯನ್ನು ಹೊಂದಿರುತ್ತದೆ. ಆ ಏಜೆನ್ಸಿ ನಿಲ್ದಾಣದ ಸುತ್ತಲೂ ತನ್ನ ಬೇಸ್ ಕಿಚನ್ ಆರಂಭಿಸುತ್ತದೆ. ನಂತರ ಇಲ್ಲಿಂದಲೇ ರೈಲುಗಳಿಗೆ ಆಹಾರ, ತಿಂಡಿ ತಯಾರಿಸಿ ಸರಬರಾಜು ಮಾಡಲಾಗುವುದು.


ಈಶಾನ್ಯ ರೈಲ್ವೆ ವತಿಯಿಂದ 80 ರೈಲುಗಳ ಪ್ಯಾಂಟ್ರಿ ಕಾರ್‌ಗಳನ್ನು ಕ್ಲಸ್ಟರ್‌ನಂತೆ ನಿರ್ವಹಿಸುವ ಜವಾಬ್ದಾರಿಯನ್ನು ಪ್ರಾರಂಭಿಸಲಾಗಿದೆ.ಇದಕ್ಕಾಗಿ ನಿಗದಿತ ದಿನಾಂಕದವರೆಗೆ ವಿವಿಧ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಅನುಭವದ ಆಧಾರದ ಮೇಲೆ ಮಾತ್ರ ರೈಲುಗಳ ಜವಾಬ್ದಾರಿಯನ್ನು ಏಜೆನ್ಸಿಗೆ ಹಸ್ತಾಂತರಿಸಲಾಗುವುದು. ಕಾಲಕಾಲಕ್ಕೆ ಸಂಸ್ಥೆಯ ಕಾರ್ಯವೈಖರಿಯನ್ನೂ ಪರಿಶೀಲಿಸಲಾಗುವುದು. ಕ್ಲಸ್ಟರ್‌ನಲ್ಲಿ ತೆರೆಯಲಾದ ಬೇಸ್ ಕಿಚನ್ ಅನ್ನು ಕಾಲಕಾಲಕ್ಕೆ ಅನಿರೀಕ್ಷಿತ ತಪಾಸಣೆಗೆ ಒಳಪಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯವಿದ್ದರೆ, ಆಹಾರದ ಮಾದರಿಗಳನ್ನು ಕೂಡಾ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಇದರೊಂದಿಗೆ ಅಡುಗೆಯ ಗುಣಮಟ್ಟ ಹಾಗೆಯೇ ಉಳಿಯುತ್ತದೆ ಎನ್ನುವುದು ರೈಲ್ವೆಯ ಲೆಕ್ಕಾಚಾರ.


ಇದನ್ನೂ ಓದಿ : Gold And Silver Price: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಚಿನ್ನ ಹಾಗೂ ಬೆಳ್ಳೆಯ ದರ ಕುಸಿತ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ