RBI Big Relief: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಆರ್ಬಿಐ, ಬಿಲ್ಲಿಂಗ್ ಗೂ ಹೊಸ ನಿಯಮ ಜಾರಿ!

RBI New Credit Card Rules: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. (Business News In Kannada)
 
RBI Big Relief To Credit Card Customers: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಭಾರಿ ನೆಮ್ಮದಿಯನ್ನು ನೀಡಲು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾವಣೆ ಮಾಡಿದೆ. ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳ ದಬ್ಬಾಳಿಕೆಗೆ ಅಂತ್ಯಹಾಡಲು ರಿಸರ್ವ್ ಬ್ಯಾಂಕ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೀಗ ಗ್ರಾಹಕರು ತಮ್ಮ ಆಯ್ಕೆಯ ಕ್ರೆಡಿಟ್ ಕಾರ್ಡ್ ಅನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ (rbi new rule on credit card billing cycle and network selection). ಹೊಸ ನಿಯಮದ ಪ್ರಕಾರ, ಇದೀಗ ಗ್ರಾಹಕರು ಕೇವಲ ತಮ್ಮ ಇಚ್ಛೆಗೆ ಅನುಗುಣವಾಗಿ ಕಾರ್ಡ್ ಅನ್ನು ಆಯ್ಕೆ ಮಾಡುವುದಲ್ಲದೆ, ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಿಲ್ಲಿಂಗ್ ಸೈಕಲ್ ಅನ್ನು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಹೊಸ ನಿಯಮದಲ್ಲಿ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಅಥವಾ ಸ್ಟೇಟ್‌ಮೆಂಟ್ ದಿನಾಂಕವನ್ನು ಬದಲಾಯಿಸುವ ಸೌಲಭ್ಯ ಪಡೆಯಲಿದ್ದಾರೆ (Business News In Kannada)

ಇದನ್ನೂ ಓದಿ-Home Loan ಮೇಲೆ ಭಾರಿ ರಿಯಾಯಿತಿ, ಹೋಳಿ ಹಬ್ಬಕ್ಕೂ ಮುನ್ನ ಬಡ್ಡಿದರದಲ್ಲಿ ಭಾರಿ ಇಳಿಕೆ ಮಾಡಿದೆ ಈ ಸರ್ಕಾರಿ ಬ್ಯಾಂಕ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

RBI Big Relief To Credit Card Customers: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಭಾರಿ ನೆಮ್ಮದಿಯನ್ನು ನೀಡಲು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾವಣೆ ಮಾಡಿದೆ. ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳ ದಬ್ಬಾಳಿಕೆಗೆ ಅಂತ್ಯಹಾಡಲು ರಿಸರ್ವ್ ಬ್ಯಾಂಕ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೀಗ ಗ್ರಾಹಕರು ತಮ್ಮ ಆಯ್ಕೆಯ ಕ್ರೆಡಿಟ್ ಕಾರ್ಡ್ ಅನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ (rbi new rule on credit card billing cycle and network selection). ಹೊಸ ನಿಯಮದ ಪ್ರಕಾರ, ಇದೀಗ ಗ್ರಾಹಕರು ಕೇವಲ ತಮ್ಮ ಇಚ್ಛೆಗೆ ಅನುಗುಣವಾಗಿ ಕಾರ್ಡ್ ಅನ್ನು ಆಯ್ಕೆ ಮಾಡುವುದಲ್ಲದೆ, ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಿಲ್ಲಿಂಗ್ ಸೈಕಲ್ ಅನ್ನು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಹೊಸ ನಿಯಮದಲ್ಲಿ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಅಥವಾ ಸ್ಟೇಟ್‌ಮೆಂಟ್ ದಿನಾಂಕವನ್ನು ಬದಲಾಯಿಸುವ ಸೌಲಭ್ಯ ಪಡೆಯಲಿದ್ದಾರೆ (Business News In Kannada)  

2 /5

ನಿಮ್ಮ ಇಚ್ಚೆಯಂತೆ ಕ್ರೆಡಿಡ್ ಕಾರ್ಡ್ ಆಯ್ಕೆ ಮಾಡಬಹುದು: ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ಬಳಕೆದಾರರಿಗೆ ಅವರ ಇಚ್ಚೆಗೆ ಅನುಗುಣವಾಗಿ ಕಾರ್ಡ್ ನೆಟ್‌ವರ್ಕ್‌ಗಳನ್ನು ಆಯ್ಕೆ ಮಾಡುವ ಅಧಿಕಾರ ನೀಡುವ ಸುತ್ತೋಲೆಯನ್ನು ಹೊರಡಿಸಿತ್ತು. ಮಾರ್ಚ್ 6 ರಂದು ಹೊರಡಿಸಲಾದ ಈ ಸುತ್ತೋಲೆಯ ಪ್ರಕಾರ, ಗ್ರಾಹಕರು ತಮ್ಮ ಬ್ಯಾಂಕ್ ಅಥವಾ ಹಣಕಾಸು ಕಂಪನಿಗಳಿಂದ ಆಯ್ಕೆಯ ಕಾರ್ಡ್ ನೆಟ್‌ವರ್ಕ್ ಅನ್ನು ಕೇಳಬಹುದು, ಅರ್ಥಾತ್ Visa, MasterCard, American Express, Diners Club International ಮತ್ತು RuPay ನಂತಹ ಕಾರ್ಡ್ ಪಾವತಿ ನೆಟ್‌ವರ್ಕ್‌ಗಳಿಂದ ಯಾವುದಾದರೊಂದನ್ನು ಆಯ್ಕೆ ಮಾಡಬಹುದು. (rbi new rule on credit card network selection)  

3 /5

ಕೇಂದ್ರೀಯ ಬ್ಯಾಂಕ್ ಉದ್ದೇಶವೇನು?: ಬ್ಯಾಂಕ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಾರ್ಡ್‌ಗಳನ್ನು ವಿತರಿಸುವಾಗ ತಮ್ಮ ಗ್ರಾಹಕರಿಗೆ ವಿವಿಧ ಕಾರ್ಡ್ ನೆಟ್‌ವರ್ಕ್‌ಗಳ ಆಯ್ಕೆಯನ್ನು ನೀಡಬೇಕು ಎಂದು ಆರ್‌ಬಿಐ ಬಯಸುತ್ತದೆ(rbi new rule on credit card billing cycle and network selection). ಇದೇ ವೇಳೆ ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ಕಾರ್ಡ್ ಅನ್ನು ನವೀಕರಿಸುವ ಸಮಯದಲ್ಲಿ ತಮ್ಮ ಆಯ್ಕೆಗೆ ಅನುಗುಣವಾಗಿಯೇ ನೆಟ್ವರ್ಕ್ ಆಯ್ಕೆ ಮಾಡುವ ಸೌಲಭ್ಯವನ್ನು ಪಡೆಯಬಹುದು. ಆರ್‌ಬಿಐನ ಈ ನಿಯಮವು ಸೆಪ್ಟೆಂಬರ್ 6, 2024 ರಿಂದ ಜಾರಿಗೆ ಬರಲಿದೆ.  

4 /5

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್‌ನ ಹೊಸ ನಿಯಮ (RBI New rule on billing cycle): ಕಾರ್ಡ್ ಆಯ್ಕೆಯ ಜೊತೆಗೆ, ಆರ್‌ಬಿಐ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಸಹ ಬಿಡುಗಡೆ ಮಾಡಿದೆ. ಹೊಸ ನಿಯಮದ ಪ್ರಕಾರ, ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ  ಬಿಲ್ಲಿಂಗ್ ಸೈಕಲ್ ಅನ್ನು ಬದಲಾಯಿಸಬಹುದು. ಹೊಸ ನಿಯಮದಲ್ಲಿ, ಗ್ರಾಹಕರು ಬಿಲ್ಲಿಂಗ್ ಸೈಕಲ್ ಬದಲಾಯಿಸುವ ಸೌಲಭ್ಯವನ್ನು ಹೊಂದಿರಲಿದ್ದಾರೆ. ಕಾರ್ಡ್ ಹೋಲ್ಡರ್ ತನ್ನ ಅನುಕೂಲಕ್ಕೆ ತಕ್ಕಂತೆ ಬಿಲ್ಲಿಂಗ್ ಸೈಕಲ್ ಅನ್ನು ಬದಲಾಯಿಸಬಹುದು.  

5 /5

ಕಾರ್ಡ್ ಹೊಂದಿರುವವರಿಗೆ ಏನು ಪ್ರಯೋಜನ? (rbi new guidelines on billing cycle) : ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರಿಗೆ ಕ್ರೆಡಿಟ್ ಮರುಪಾವಟಿಗೆ ಕಾಲಾವಧಿಯನ್ನು ನೀಡುತ್ತವೆ. ಇದರಲ್ಲಿ ಕಾರ್ಡ್ ಗೆ ತಗಲುವ ಎಲ್ಲಾ ವೆಚ್ಚಗಳನ್ನು ಸೇರಿಸಲಾಗುತ್ತದೆ ಮತ್ತು ನಿರ್ದಿಷ್ಟ ದಿನಾಂಕದೊಳಗೆ ಬಿಲ್ ರೂಪದಲ್ಲಿ ನಿಮಗೆ ಕಳುಹಿಸಲಾಗುತ್ತದೆ. ಬಿಲ್ ಒಮ್ಮೆ ಜನರೇಟ್ ಆದ ಬಳಿಕ ನೀವು ಅದರಲ್ಲಿ ಸೂಚಿಸಲಾದ ಅಂತಿಮ ದಿನಾಂಕದವರೆಗೆ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಇದನ್ನು ಬಿಲ್ಲಿಂಗ್ ಸೈಕಲ್ ಎಂದು ಕರೆಯಲಾಗುತ್ತದೆ.ಇದುವರೆಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ಮಾತ್ರ ಗ್ರಾಹಕರಿಗೆ ಬಿಲ್ಲಿಂಗ್ ಸೈಕಲ್ ಏನೆಂದು ನಿರ್ಧರಿಸುತ್ತಿದ್ದವು, ಆದರೆ ಈಗ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಸೈಕಲ್ ಅನ್ನು ಒಮ್ಮೆಯಾದರೂ ತಮ್ಮ ಇಚ್ಛೆಯಂತೆ ಬದಲಾಯಿಸಬಹುದು.