RBI Cancels Sunday Holiday: ವಾರದ ರಜೆ ಕ್ಯಾನ್ಸಲ್, ಭಾನುವಾರ ಕೂಡ ಬ್ಯಾಂಕ್ ತೆರೆಯಿರಿ, RBIನ ಈ ತೀರ್ಮಾನಕ್ಕೆ ಕಾರಣ ಏನು?

RBI Update On Sunday Holiday: ವರ್ಷ 2023-24ರ ಆರ್ಥಿಕ ವರ್ಷ ಮುಕ್ತಾಯಕ್ಕೆ ದಿನಗನಡೆ ಆರಂಭವಾಗಿದೆ. ಮಾರ್ಚ್ 31ರ ಭಾನುವಾರದಂದು ಬ್ಯಾಂಕ್‌ಗಳನ್ನು ತೆರೆಯುವಂತೆ ಆರ್‌ಬಿಐ (Rbi cancels sunday holiday today) ಸೂಚನೆ ನೀಡಿದೆ. ಇದು ಹಣಕಾಸು ಕೊನೆಯ ದಿನವಾಗಿರುವುದರಿಂದ ರಿಸರ್ವ್ ಬ್ಯಾಂಕ್ ಈ ನಿರ್ಣಯ ಕೈಗೊಂಡಿದೆ. ಮಾರ್ಚ್ 31 ರಂದು ಅನ್ಯುವಲ್ ಕ್ಲೋಸಿಂಗ್ ದಿನ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. (Business News In Kannada)

Written by - Nitin Tabib | Last Updated : Mar 20, 2024, 10:16 PM IST
  • ಬ್ಯಾಂಕ್‌ಗಳು ಮಾತ್ರವಲ್ಲ, ಎಲ್ಲಾ ಆದಾಯ ತೆರಿಗೆ ಕಚೇರಿಗಳು ಮಾರ್ಚ್ 31 ರ ಭಾನುವಾರದಂದು ಕಾರ್ಯನಿರ್ವಹಿಸಲಿವೆ.
  • ಆದಾಯ ತೆರಿಗೆ ಕಚೇರಿಗಳು ಭಾನುವಾರ ಮಾತ್ರವಲ್ಲದೆ ಶುಕ್ರವಾರ, ಮಾರ್ಚ್ 29 (ಗುಡ್ ಫ್ರೈಡೇ), ಶನಿವಾರ, ಮಾರ್ಚ್ 30 ಮತ್ತು ಭಾನುವಾರ, ಮಾರ್ಚ್ 31 ರಂದು ತೆರೆದಿರಲಿವೆ.
  • ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಆದಾಯ ತೆರಿಗೆ ಕಚೇರಿಗಳನ್ನು ತೆರೆದಿಡಲು ನಿರ್ದೇಶನ ನೀಡಿದೆ.
RBI Cancels Sunday Holiday: ವಾರದ ರಜೆ ಕ್ಯಾನ್ಸಲ್, ಭಾನುವಾರ ಕೂಡ ಬ್ಯಾಂಕ್ ತೆರೆಯಿರಿ, RBIನ ಈ ತೀರ್ಮಾನಕ್ಕೆ ಕಾರಣ ಏನು? title=

Financial Year 2023-34 End: ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ದಿನವಾಗಿರುವ ಮಾರ್ಚ್ 31, 2024 ರ ಭಾನುವಾರದಂದು ದೇಶಾದ್ಯಂತ ಎಲ್ಲಾ ಬ್ಯಾಂಕುಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ. ಈ ಕುರಿತು ಮಹತ್ವದ ನಿರ್ಣಯ ತೆಗೆದುಕೊಂಡ RBI, ಭಾನುವಾರದ ಹೊರತಾಗಿಯೂ ಮಾರ್ಚ್ 31, 2024 ರಂದು ದೇಶದಾದ್ಯಂತ ಬ್ಯಾಂಕುಗಳನ್ನು ತೆರೆಯಲು ನಿರ್ದೇಶನ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆರ್‌ಬಿಐ ಈ ಮಾಹಿತಿಯನ್ನು ನೀಡಿದೆ. ಸೆಂಟ್ರಲ್ ಬ್ಯಾಂಕ್‌ನ ಸೂಚನೆಗಳನ್ನು ಅನುಸರಿಸಿ, ಮಾರ್ಚ್ 31 ರಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. 

ಭಾನುವಾರ ಏಕೆ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕು
ಮಾರ್ಚ್ 31ರ ಭಾನುವಾರದಂದು ಬ್ಯಾಂಕ್‌ಗಳನ್ನು ತೆರೆಯುವಂತೆ ಆರ್‌ಬಿಐ ಸೂಚನೆ ನೀಡಿದೆ (Rbi cancels sunday holiday today). ಇದು ಪ್ರಸಕ್ತ ಹಣಕಾಸು ವರ್ಷದ ಅಂದರೆ 2023-24ರ ಕೊನೆಯ ದಿನವಾಗಿರುವುದರಿಂದ ರಿಸರ್ವ್ ಬ್ಯಾಂಕ್ (rbi working days) ಈ ನಿರ್ಣಯ ಕೈಗೊಂಡಿದೆ. ಮಾರ್ಚ್ 31 ರಂದು ಆನ್ಯುವಲ್ ಕ್ಲೋಸಿಂಗ್ ಡೇ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ, ಇದರಿಂದಾಗಿ ಆರ್ಥಿಕ ವರ್ಷದ ಅಂತ್ಯದವರೆಗೆ ನಡೆಯುವ ವಹಿವಾಟುಗಳನ್ನು ಅದೇ ವರ್ಷದಲ್ಲಿ ನೋಂದಾಯಿಸಬಹುದು. ಮಾರ್ಚ್ 31 ರಂದು ವಹಿವಾಟುಗಳಿಗಾಗಿ ಸರ್ಕಾರಿ ರಶೀದಿ ಮತ್ತು ಪಾವತಿಗೆ ಸಂಬಂಧಿಸಿದ ಬ್ಯಾಂಕ್‌ಗಳ ಎಲ್ಲಾ ಶಾಖೆಗಳನ್ನು ಮುಕ್ತವಾಗಿಡಲು ಭಾರತ ಸರ್ಕಾರ ಕೋರಿದೆ, ಇದರಿಂದಾಗಿ ಎಲ್ಲಾ ಸರ್ಕಾರಿ ವಹಿವಾಟುಗಳ ಖಾತೆಗಳನ್ನು ನಿರ್ವಹಿಸಬಹುದು.

ಇದನ್ನೂ ಓದಿ-RBI Big Relief: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಆರ್ಬಿಐ, ಬಿಲ್ಲಿಂಗ್ ಗೂ ಹೊಸ ನಿಯಮ ಜಾರಿ!

ಬ್ಯಾಂಕುಗಳು ಯಾವಾಗ ತೆರೆದುಕೊಳ್ಳಲಿವೆ?
ಮಾರ್ಚ್ 31 ರಂದು ಹಣಕಾಸು ವರ್ಷದ ವಾರ್ಷಿಕ ಮುಕ್ತಾಯದ ಅವಧಿಯಲ್ಲಿ, ದೇಶಾದ್ಯಂತ ಬ್ಯಾಂಕುಗಳು ತಮ್ಮ ನಿಗದಿತ ಸಮಯದಲ್ಲಿ ತೆರೆಯಲು ಸೂಚನೆ ನೀಡಲಾಗಿದೆ ಎಂದು ಆರ್‌ಬಿಐ ಹೇಳಿದೆ. ಮಾರ್ಚ್ 31, ಭಾನುವಾರದಂದು ಎಲ್ಲಾ ಬ್ಯಾಂಕ್‌ಗಳು ತಮ್ಮ ನಿಯಮಿತ ಸಮಯದಲ್ಲಿ ತೆರೆದುಕೊಳ್ಳುತ್ತವೆ ಮತ್ತು ನಿಗದಿತ ಸಮಯಕ್ಕೆ ಮುಚ್ಚಳಿವೆ. ಆದಾಗ್ಯೂ, ಗ್ರಾಹಕರು ಮಧ್ಯ ರಾತ್ರಿಯ 12 ಗಂಟೆ ವರೆಗೆ NEFT ಮತ್ತು RTGS ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ. 

ಇದನ್ನೂ ಓದಿ-Home Loan ಮೇಲೆ ಭಾರಿ ರಿಯಾಯಿತಿ, ಹೋಳಿ ಹಬ್ಬಕ್ಕೂ ಮುನ್ನ ಬಡ್ಡಿದರದಲ್ಲಿ ಭಾರಿ ಇಳಿಕೆ ಮಾಡಿದೆ ಈ ಸರ್ಕಾರಿ ಬ್ಯಾಂಕ್!

ಆದಾಯ ತೆರಿಗೆ ಕಚೇರಿ ಕೂಡ ಕಾರ್ಯ ನಿರ್ವಹಿಸಲಿವೆ
ಬ್ಯಾಂಕ್‌ಗಳು ಮಾತ್ರವಲ್ಲ, ಎಲ್ಲಾ ಆದಾಯ ತೆರಿಗೆ ಕಚೇರಿಗಳು ಮಾರ್ಚ್ 31 ರ ಭಾನುವಾರದಂದು ಕಾರ್ಯನಿರ್ವಹಿಸಲಿವೆ. ಆದಾಯ ತೆರಿಗೆ ಕಚೇರಿಗಳು ಭಾನುವಾರ ಮಾತ್ರವಲ್ಲದೆ ಶುಕ್ರವಾರ, ಮಾರ್ಚ್ 29 (ಗುಡ್ ಫ್ರೈಡೇ), ಶನಿವಾರ, ಮಾರ್ಚ್ 30 ಮತ್ತು ಭಾನುವಾರ, ಮಾರ್ಚ್ 31 ರಂದು ತೆರೆದಿರಲಿವೆ. ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಆದಾಯ ತೆರಿಗೆ ಕಚೇರಿಗಳನ್ನು ತೆರೆದಿಡಲು ನಿರ್ದೇಶನ ನೀಡಿದೆ. 2023-24ನೇ ಹಣಕಾಸು ವರ್ಷದ ಕೊನೆಯ ದಿನದ ಮುನ್ನ, ಗುಡ್ ಫ್ರೈಡೇ ಕಾರಣ ಆದಾಯ ತೆರಿಗೆ ಇಲಾಖೆ ಸುದೀರ್ಘ ರಜೆಯನ್ನು ರದ್ದುಗೊಳಿಸಿದೆ. ಮಾರ್ಚ್ 29, 30 ಮತ್ತು 31 ರಂದು ದೇಶಾದ್ಯಂತ ಐಟಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆರ್ಥಿಕ ವರ್ಷದ ಕೊನೆಯ ವಾರದಲ್ಲಿ ಕಾಮಗಾರಿ ಮೇಲೆ ಯಾವುದೇ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಗಳು ಬಂದ್ ಇರಲಿವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News