Changes From 1 January 2023 : ಹೊಸ ವರ್ಷವು ಅನೇಕ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಬ್ಯಾಂಕ್ ಲಾಕರ್, ಕ್ರೆಡಿಟ್ ಕಾರ್ಡ್ ಮತ್ತು ಮೊಬೈಲ್ ಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ವಾಹನಗಳ ಬೆಲೆಯೂ ಹೆಚ್ಚಾಗಬಹುದು. ಈ ಎಲ್ಲಾ ಬದಲಾವಣೆಗಳು ನಿಮ್ಮ  ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಜನವರಿ 1, 2023 ರಿಂದ ಯಾವೆಲ್ಲಾ ಬದಲಾವಣೆಗಳಾಗಲಿವೆ ನೋಡೋಣ. 


COMMERCIAL BREAK
SCROLL TO CONTINUE READING

ದುಬಾರಿಯಾಗಲಿವೆ ವಾಹನಗಳು  : 
ಹೊಸ ವರ್ಷದಿಂದ ವಾಹನಗಳ ದರ ಹೆಚ್ಚಾಗಲಿದೆ. ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್, ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಆಡಿ, ರೆನಾಲ್ಟ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟಾರ್ ಜನವರಿ 1, 2023 ರಿಂದ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. 


ಇದನ್ನೂ ಓದಿ : 1800 ರೂಪಾಯಿ ಅಗ್ಗದ ಬೆಲೆಗೆ ಸಿಗುತ್ತಿದೆ ಚಿನ್ನ. ! ಖರೀದಿಗೆ ಇದುವೇ ಸೂಕ್ತ ಸಮಯ. !


ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಬದಲಾವಣೆ : 
ಇದಲ್ಲದೇ ಜನವರಿ 1ರಿಂದ ಎಲ್ಲಾ ಲಾಕರ್ ಹೊಂದಿರುವವರಿಗೆ ರಿಸರ್ವ್ ಬ್ಯಾಂಕ್ ಅಗ್ರಿಮೆಂಟ್ ನೀಡಲಿದೆ.  ಆ ಅಗ್ರಿಮೆಂಟ್ ಮೇಲೆ ಗ್ರಾಹಕರು ಸಹಿ ಹಾಕಬೇಕಾಗುತ್ತದೆ. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ತಮ್ಮ ಲಾಕರ್ ಒಪ್ಪಂದದಲ್ಲಿ ಯಾವ ಷರತ್ತುಗಳು ಇರಬೇಕು ಎನ್ನುವುದನ್ನು  ಬ್ಯಾಂಕ್‌ಗಳು ನಿರ್ಧರಿಸುತ್ತವೆ. 


ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ :
ಇದಲ್ಲದೇ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. HDFC ಬ್ಯಾಂಕ್ ಕೂಡ  ರಿವರ್ಸ್ ಪಾಯಿಂಟ್ ಮತ್ತು ಶುಲ್ಕವನ್ನು ಬದಲಾಯಿಸಲಿದೆ. ಇದಲ್ಲದೇ ಕೆಲವು ಕಾರ್ಡ್‌ಗಳ ನಿಯಮಗಳನ್ನು ಬದಲಾಯಿಸಲು ಎಸ್‌ಬಿಐ ನಿರ್ಧರಿಸಿದೆ.


ಇದನ್ನೂ ಓದಿ : ಈ ಮೂರು ಕೆಲಸ ಮಾಡದೇ ಹೋಗಿದ್ದಲ್ಲಿ ರೈತರ ಖಾತೆ ಸೇರುವುದಿಲ್ಲ 13ನೇ ಕಂತಿನ ಹಣ


ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ : 
ಪ್ರತಿ ತಿಂಗಳ ಮೊದಲನೇ ತಾರೀಕಿನಂದು  ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲಾಗುತ್ತದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಒಂದಾ ಕಡಿತಗೊಳಿಸಲಾಗುತ್ತದೆ ಅಥವಾ ಹೆಚ್ಚಿಸಲಾಗುತ್ತದೆ. 


ಜನವರಿ 1 ರಿಂದ ಜಿಎಸ್‌ಟಿ ನಿಯಮಗಳಲ್ಲಿ ಬದಲಾವಣೆ : 
ಜನವರಿ 1 ರಿಂದ ಜ ಜಿಎಸ್‌ಟಿ ನಿಯಮಗಳಲ್ಲೂ ಬದಲಾವಣೆಯಾಗಲಿದೆ. ವಾರ್ಷಿಕ 5 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಇ-ಇನ್‌ವಾಯ್ಸ್‌ಗಳನ್ನು ಜನರೆಟ್  ಮಾಡುವುದು ಈಗ ಅಗತ್ಯವಾಗಿದೆ.

 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.