Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ

Money Transfer Through Apps: ಆಪ್ ಗಳ ಮೂಲಕ ನೀವೂ ಕೂಡ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬ ಸದಸ್ಯರಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರೆ, ಈ ಆಪ್ ಗಳ ದೈನಂದಿನ ಮಿತಿಯ ಕುರಿತು ನೀವು ತಿಳಿದುಕೊಳ್ಳಲೇಬೇಕು. ಇಲ್ಲದಿದ್ದರೆ ನಿಮ್ಮ ಹಣ ಪಾವತಿ ಮಧ್ಯದಲ್ಲಿಯೇ ಸಿಲುಕಿಕೊಳ್ಳಬಹುದು.  

Written by - Nitin Tabib | Last Updated : Dec 26, 2022, 09:54 PM IST
  • ಹಣ ವರ್ಗಾವಣೆ ಅಪ್ಲಿಕೇಶನ್‌ಗಳಲ್ಲಿ ದೈನಂದಿನ
  • ಮಿತಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ.
  • ಇದರಿಂದ ಹೆಚ್ಚಿನ ವಹಿವಾಟುಗಳನ್ನು ಆಪ್ ಗಳು ನಿಲ್ಲಿಸಬಹುದು.
Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ title=
Online Money Transaction

Online Transaction: ನೀವು ಪ್ರತಿದಿನ ಹಣ ವರ್ಗಾವಣೆಗಾಗಿ ಪೇಮೆಂಟ್ ಆಪ್ ಗಳನ್ನು ಬಳಸುತ್ತಿದ್ದರೆ ಮತ್ತು ಟೀ ಕೊಳ್ಳುವುದರಿಂದ ಹಿಡಿದು ದಿನಸಿ ಖರೀದಿಸಲು ಹಣವನ್ನು ಪಾವತಿ ಮಾಡುವಾಗ, ವಹಿವಾಟು ಮಧ್ಯದಲ್ಲಿ ಸಿಲುಕಿಕೊಂಡು, ನಿಮ್ಮ ದೈನಂದಿನ ಮಿತಿಯನ್ನು ಅದು ಉಲ್ಲಂಘಿಸಿದೆ ಎಂಬ ಸಂದೇಶ ಕಾಣಿಸಿಕೊಂಡಿರುವ ಘಟನೆ ಹಲವು ಬಾರಿ ಸಂಭವಿಸಿರಬಹುದು. ಇದರರ್ಥ ನೀವು ಅಗತ್ಯಕ್ಕಿಂತ ಹೆಚ್ಚು ವಹಿವಾಟುಗಳನ್ನು ನಡೆಸಿರುವಿರಿ ಮತ್ತು ಈಗ ನೀವು ವಹಿವಾಟುಗಳನ್ನು ಮಾಡಲು ಸಾಧ್ಯವಿಲ್ಲ ಎಂದರ್ಥ. ಮರುದಿನ ನೀವು ಮತ್ತೆ ವಹಿವಾಟು ಆರಂಭಿಸಬಹುದು.  ಹಣ ವರ್ಗಾವಣೆ ಅಪ್ಲಿಕೇಶನ್‌ಗಳಲ್ಲಿ ದೈನಂದಿನ ಮಿತಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಇದರಿಂದ ಹೆಚ್ಚಿನ ವಹಿವಾಟುಗಳನ್ನು ಆಪ್ ಗಳು ನಿಲ್ಲಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಭಾರೀ ವಹಿವಾಟುಗಳನ್ನು ನಡೆಸುತ್ತಿದ್ದರೆ, ಇಂದು ನಾವು ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ಹಣ ವರ್ಗಾವಣೆ ಅಪ್ಲಿಕೇಶನ್‌ಗಳ ದೈನಂದಿನ ಮಿತಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಿಂದ ನಿಮ್ಮ ಹಣ ಪಾವತಿ ಮಧ್ಯದಲ್ಲಿ ಸಿಲುಕಿಕೊಳ್ಳುವುದಿಲ್ಲ.

Paytm: ಮೊದಲನೆಯದಾಗಿ, Paytm ಕುರಿತು ಹೇಳುವುದಾದರೆ, ಇದು ಭಾರತದಲ್ಲಿ ಡಿಮಾನಿಟೈಸೇಶನ್ ನಡೆದಾಗಿನಿಂದ ತುಂಬಾ ಖ್ಯಾತಿಯನ್ನು ಪಡೆದುಕೊಂಡಿತು ಮತ್ತು ಅಂದಿನಿಂದ ಕೋಟ್ಯಾಂತರ ಬಳಕೆದಾರರಿಂದ ಬಳಸಲ್ಪಡುತ್ತದೆ. ಈ ಆ್ಯಪ್ ಮೂಲಕ ನೀವು ಒಂದು ದಿನದಲ್ಲಿ ₹ 100000 ವರ್ಗಾಯಿಸಬಹುದು. ಅಷ್ಟೇ ಅಲ್ಲ, ನೀವು ಪ್ರತಿ 1 ಗಂಟೆಗೆ ₹ 20000 ಕಳುಹಿಸಬಹುದು. ಈ ಅಪ್ಲಿಕೇಶನ್‌ನಿಂದಾಗಿ, ನೀವು ಒಂದು ದಿನದಲ್ಲಿ 20 ವಹಿವಾಟುಗಳನ್ನು ಅಥವಾ 1 ಗಂಟೆಯಲ್ಲಿ 5 ವಹಿವಾಟುಗಳನ್ನು ಮಾತ್ರ ನಡೆಸಬಹುದು.

Google Pay: Google Pay ಸಹ ಒಂದು ಹಳೆಯ ಹಣ ವರ್ಗಾವಣೆ ಅಪ್ಲಿಕೇಶನ್ ಆಗಿದ್ದು, ಇದನ್ನು ಅನೇಕ ಬಳಕೆದಾರರು ನಿಯಮಿತವಾಗಿ ಬಳಸುತ್ತಾರೆ. ಇದೂ ಕೂಡ ಪಾವತಿಯಲ್ಲಿ ಬಳಕೆದಾರರ ಸ್ನೇಹಿಯಾಗಿದೆ. ಒಂದು ದಿನದಲ್ಲಿ ಈ ಅಪ್ಲಿಕೇಶನ್ ಮೂಲಕ ನೀವು ಕೇವಲ 10 ವಹಿವಾಟುಗಳನ್ನು ಮಾಡಬಹುದು ಎಂದು ನಾವು ನಿಮಗೆ ಹೇಳೋಣ. ಈ ಅಪ್ಲಿಕೇಶನ್ ಸಹಾಯದಿಂದ, ನೀವು ಗರಿಷ್ಠ ₹ 100000 ಕಳುಹಿಸಬಹುದು.

ಇದನ್ನೂ ಓದಿ-RBI ನಿಂದ ಮಹತ್ವದ ಘೋಷಣೆ, ಇಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಬಡ್ಡಿ ಸಿಗುತ್ತದೆ

PhonePay: ಫೋನ್ ಪೇ ಕೂಡ ಭಾರತದಲ್ಲಿನ ಮತ್ತೊಂದು ಜನಪ್ರಿಯವಾದ ಅಪ್ಲಿಕೇಶನ್ ಆಗಿದೆ, ಈ ಆಪ್ ಬಳಸಿ ನೀವು ದಿನವಿಡೀ ಯಾರಿಗಾದರೂ ₹ 100000 ಕಳುಹಿಸಬಹುದು ಅಥವಾ ನೀವು 1 ಗಂಟೆಯಲ್ಲಿ ₹ 20000 ರೂ.ಗಳವರೆಗೆ ವಹಿವಾಟು ನಡೆಸಬಹುದು. ಈ ಅಪ್ಲಿಕೇಶನ್‌ನಲ್ಲಿ ನೀವು ಒಂದು ದಿನದಲ್ಲಿ 20 ವಹಿವಾಟುಗಳನ್ನು ಮಾಡಬಹುದು ಮತ್ತು 1 ಗಂಟೆಯಲ್ಲಿ ಕೇವಲ 5 ವಹಿವಾಟುಗಳನ್ನು ಮಾಡಲು ನಿಮಗೆ ಅನುಮತಿಸಲಾಗಿದೆ.

ಇದನ್ನೂ ಓದಿ-Good News: ರೈತರಿಗೊಂದು ಗುಡ್ ನ್ಯೂಸ್, ಈ ನಂಬರ್ ಗೆ ಮಿಸ್ ಕಾಲ್ ಕೊಡಿ, ಖಾತೆಗೆ ಹಣ ಬರುತ್ತೆ!

Amazon Pay: Amazon Pay ಕುರಿತು ಹೇಳುವುದಾದರೆ, ಬಳಕೆದಾರರು ಈ ಅಪ್ಲಿಕೇಶನ್‌ನ ಸಹಾಯದಿಂದ ₹ 100000 ಕ್ಕಿಂತ ಹೆಚ್ಚು ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News