ಐಶಾರಾಮಿ 8 ಸೀಟರ್ ಕಾರು! ಆದರೂ ಬೆಲೆ ಮಾತ್ರ ತೀರಾ ಕಡಿಮೆ
Mahindra Marazzo:ಈ ಕಾರು M2, M4 Plus ಮತ್ತು M6 Plus ಎನ್ನುವ ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. 7 ಮತ್ತು 8 ಸೀಟ್ ಲೇಔಟ್ ಎಲ್ಲಾ ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿದೆ.
Mahindra Marazzo : ಭಾರತದ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಮಹೀಂದ್ರಾ ಅತಿ ಹೆಚ್ಚು ಸಂಖ್ಯೆಯ SUV ಕಾರುಗಳನ್ನು ಹೊರ ತಂದಿದೆ. ಕಂಪನಿಯು ಮಹೀಂದ್ರ XUV300, ಥಾರ್ ಮತ್ತು ಸ್ಕಾರ್ಪಿಯೊದಂತಹ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ದೇಶದಲ್ಲೇ ಅತ್ಯಂತ ಸುರಕ್ಷಿತ MPV ಕಾರನ್ನು ಸಹ ಹೊಂದಿದೆ. ಇದರ ವಿಶೇಷತೆ ಎಂದರೆ ಇದು 7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರಿನಲ್ಲಿ ಐಷಾರಾಮಿ ಕಾರುಗಳಂತೆ ಸ್ಥಳಾವಕಾಶ ಮತ್ತು ಸೌಕರ್ಯವನ್ನು ಪಡೆಯುತ್ತೀರಿ.
ನಾವಿಲ್ಲಿ ಮಹೀಂದ್ರ ಮರಾಜೋ ಕಾರಿನ ಬಗ್ಗೆ ಮಾತನಾಡುತ್ತಿದ್ದೇವೆ. ಇದು M2, M4 Plus ಮತ್ತು M6 Plus ಎನ್ನುವ ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. 7 ಮತ್ತು 8 ಸೀಟ್ ಲೇಔಟ್ ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿದೆ. ಇದಲ್ಲದೆ, ಇದು 5 ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ : ಸೂಪರ್ ಬೈಕ್ ಲಾಂಚ್ ಮಾಡಿದ Ducati India! ಎಂಜಿನ್, ಬೆಲೆ, ವೈಶಿಷ್ಟ್ಯ ಎಲ್ಲವೂ ಅದ್ಭುತ !
ಕಂಪನಿಯು ವಾಹನದ ಮೇಲೆ 3 ವರ್ಷಗ/ಳಿಗೆ 1 ಲಕ್ಷ ಕಿಲೋಮೀಟರ್‌ಗಳ ಪ್ರಮಾಣಿತ ವಾರಂಟಿಯನ್ನು ನೀಡುತ್ತಿದೆ ಮತ್ತು ಪ್ರತಿ ಕಿಲೋಮೀಟರ್‌ಗೆ ಸರ್ವಿಸಿಂಗ್ ಖರ್ಚು 58 ಪೈಸೆಗಿಂತ ಕಡಿಮೆಯಿರುತ್ತದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಸುರಕ್ಷತೆಗಾಗಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹಿಂಭಾಗದ ಬಾಗಿಲುಗಳಲ್ಲಿ ಮಕ್ಕಳ ಸುರಕ್ಷತೆ ಲಾಕ್‌ಗಳು, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಲಾಕ್‌ಗಳು ಮತ್ತು ಎಂಜಿನ್ ಇಮೊಬಿಲೈಸರ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
Marazzo MPV ಭಾರತದಲ್ಲಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ ಮತ್ತು ಕಂಪನಿಯು ಇದನ್ನು 4 ಸ್ಟಾರ್ ರೇಟಿಂಗ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರ ವಿನ್ಯಾಸವು ಶಾರ್ಕ್ ಮೀನಿನಿಂದ ಪ್ರೇರಿತವಾಗಿದೆ. ಇದರಲ್ಲಿ ಶಾರ್ಕ್ ಟೆಲ್ ನಂತೆ ಟೆಲ್ ಲ್ಯಾಂಪ್ ನೀಡಲಾಗಿದೆ. ಮಹೀಂದ್ರ ಮರಾಝೋ 4,585mm ಉದ್ದ, 1,866mm ಅಗಲ ಮತ್ತು 1,774mm ಎತ್ತರವನ್ನು ಹೊಂದಿದೆ. ಇದು 2,760mm ವ್ಹೀಲ್‌ಬೇಸ್ ಅನ್ನು ಹೊಂದಿದೆ ಮತ್ತು 5.25-ಮೀಟರ್ ಟರ್ನಿಂಗ್ ರೇಡಿಯಸ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ : Automatic Car ಖರೀದಿಸುವ ಮುನ್ನ ಅದರ ಅನುಕೂಲ, ಅನಾನುಕೂಲಗಳ ಬಗ್ಗೆ ತಪ್ಪದೇ ತಿಳಿಯಿರಿ
4 ಸ್ಟಾರ್ ರೇಟಿಂಗ್‌ನೊಂದಿಗೆ ಬರುವ ಮರಾಝೊ MPV ಭಾರತದಲ್ಲಿ ಅತ್ಯಂತ ಸುರಕ್ಷಿತ ಕಾರು ಎಂದು ಕಂಪನಿ ಹೇಳಿಕೊಂಡಿದೆ. ಮರಾಝೋ MPV ಬೆಲೆ 13.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಮಾಡೆಲ್ ಬೆಲೆ 16.02 ಲಕ್ಷ ರೂ. ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.