ಸೂಪರ್ ಬೈಕ್ ಲಾಂಚ್ ಮಾಡಿದ Ducati India! ಎಂಜಿನ್, ಬೆಲೆ, ವೈಶಿಷ್ಟ್ಯ ಎಲ್ಲವೂ ಅದ್ಭುತ !

Ducati Monster SP Price : ಡುಕಾಟಿ ಮಾನ್‌ಸ್ಟರ್ ಎಸ್‌ಪಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.   ಈ ಬೈಕ್ ನ ಬುಕ್ಕಿಂಗ್ ಕೂಡಾ ಆರಂಭವಾಗಿದೆ.

Written by - Ranjitha R K | Last Updated : May 3, 2023, 10:16 AM IST
  • Ducati Monster SP ಮಾರುಕಟ್ಟೆಗೆ
  • ಈ ಬೈಕ್ ನ ಬುಕ್ಕಿಂಗ್ ಕೂಡಾ ಆರಂಭ
  • ಬುಕ್ಕಿಂಗ್ ಮಾಡಿ ಗ್ರಾಹಕರು ಬಹಳ ದಿನಗಳವರೆಗೆ ಕಾಯುವ ಅಗತ್ಯವಿಲ್ಲ
ಸೂಪರ್ ಬೈಕ್ ಲಾಂಚ್ ಮಾಡಿದ Ducati India! ಎಂಜಿನ್, ಬೆಲೆ, ವೈಶಿಷ್ಟ್ಯ ಎಲ್ಲವೂ ಅದ್ಭುತ !  title=

Ducati Monster SP Price : ಡುಕಾಟಿ ಇಂಡಿಯಾ ಹೊಸ ಸೂಪರ್‌ಬೈಕ್ ಮಾನ್‌ಸ್ಟರ್ ಎಸ್‌ಪಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಡುಕಾಟಿ ಮಾನ್‌ಸ್ಟರ್ ಸರಣಿಯ ಅತ್ಯಂತ ಪ್ರೀಮಿಯಂ ಮಾದರಿಯಾಗಿದೆ.  ಈ ಬೈಕ್ ನ ಬುಕ್ಕಿಂಗ್ ಕೂಡಾ ಆರಂಭವಾಗಿದೆ. ಅಲ್ಲದೆ ಬುಕ್ಕಿಂಗ್ ಮಾಡಿ ಗ್ರಾಹಕರು ಬಹಳ ದಿನಗಳವರೆಗೆ ಕಾಯುವ ಅಗತ್ಯವಿಲ್ಲ. ಕಂಪನಿಯು ತಕ್ಷಣವೇ ವಿತರಣೆ ಆರಂಭಿಸುತ್ತದೆ. ಡುಕಾಟಿ ಮಾನ್‌ಸ್ಟರ್ SP ಕವಾಸಕಿ Z900, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ R ಮತ್ತು BMW F900Rಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.  

ಈ ಬೈಕ್‌ನಲ್ಲಿ 937 ಸಿಸಿ ಎಂಜಿನ್ ನೀಡಲಾಗಿದೆ. ಇದು 9,250 rpm ನಲ್ಲಿ 111 hp ಮತ್ತು 6,500 rpmನಲ್ಲಿ 93 Nm ನ ಗರಿಷ್ಠ ಟಾರ್ಕ್ ಜನರೇಟ್ ಮಾಡುತ್ತದೆ. ಇದನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ಸ್ಲಿಪ್ಪರ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಅನ್ನು ಸಹ  ಸಪೋರ್ಟ್ ಮಾಡುತ್ತದೆ. ಡುಕಾಟಿಯು ಮಾನ್‌ಸ್ಟರ್ ಎಸ್‌ಪಿಗೆ ಫುಲ್ಲಿ ಅಡ್ಜಸ್ಟೇಬಲ್ 43 ಎಂಎಂ ಓಹ್ಲಿನ್‌ಗಳು ಅಪ್ ಸೈಡ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಓಹ್ಲಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. 

ಇದನ್ನೂ ಓದಿ : ನಿಮ್ಮ ಮೊಬೈಲ್ ಕಳೆದು ಹೋದ್ರೆ ಹೆದರಬೇಡಿ, ಜಸ್ಟ್ ಈ ಕೆಲಸ ಮಾಡಿದ್ರೆ ಅಷ್ಟೇ ಸಾಕು!

ಇನ್ನು ಈ ಬೈಕ್ ನ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು 4.3-ಇಂಚಿನ ಬಣ್ಣದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೊಂದಿಗೆ ಬರುತ್ತದೆ. 3 ಲೆವೆಲ್ ಜೊತೆಗೆ ಕಾರ್ನರಿಂಗ್ ABS, ಮೂರು ರೈಡಿಂಗ್ ಮೋಡ್‌ಗಳು, 8 ಲೆವೆಲ್  DTC, 4ಲೆವೆಲ್ DWC ಮತ್ತು 3  ಲೆವೆಲ್  ಅಡ್ಜಸ್ಟೇಬಲ್ ನೊಂದಿಗೆ ಲಾಂಚ್ ಕಂಟ್ರೋಲ್ ನೀಡಲಾಗಿದೆ. ಡುಕಾಟಿ ಮಾನ್‌ಸ್ಟರ್ ಎಸ್‌ಪಿಯ ತೂಕ  186 ಕೆ.ಜಿ.  ಸ್ಟ್ಯಾಂಡರ್ಡ್ ಆವೃತಿಯೊಂದಿಗೆ ಹೋಲಿಸಿದರೆ 2 ಕೆಜಿ ಹಗುರವಾಗಿದೆ. ತೂಕವನ್ನು ಕಡಿಮೆ ಮಾಸುವ ಸಲುವಾಗಿ ಡುಕಾಟಿಯು ಹಗುರವಾದ ಫ್ರಂಟ್ ಬ್ರೇಕ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿದೆ. ಇದರ ಹೊರತಾಗಿ, ಓಹ್ಲಿನ್ ಸಸ್ಪೆನ್ಷನ್ ಸೆಟಪ್ ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡಿದೆ.

ಎಸ್‌ಪಿ ಆವೃತ್ತಿಯು ಸ್ಟ್ಯಾಂಡರ್ಡ್ ಮಾನ್‌ಸ್ಟರ್‌ಗಿಂತ 3 ಲಕ್ಷ ರೂ. ಯಷ್ಟು ದುಬಾರಿಯಾಗಿದೆ. ಅಂದರೆ, ಭಾರತದಲ್ಲಿ Ducati Monster SP ಬೆಲೆ 15.95 ಲಕ್ಷ ರೂಪಾಯಿ. ಸಸ್ಪೆನ್ಷನ್ ಘಟಕದಲ್ಲಿನ ಬದಲಾವಣೆಯ ಕಾರಣದಿಂದಾಗಿ ಬೈಕ್ ಉದ್ದ ಜಾಸ್ತಿಯಾಗಿದೆ. ಮತ್ತು ಸೀಟ್ ಎತ್ತರವು 840 ಎಂಎಂ ಆಗಿದೆ. ಹೊಸ ಸ್ಟೀರಿಂಗ್ ಡ್ಯಾಂಪರ್ ಹೆಚ್ಚಿನ ವೇಗ ಮತ್ತು ಕಾರ್ನರಿಂಗ್ ಸಮಯದಲ್ಲಿ ಸ್ಥಿರತೆಯನ್ನು ಸುಧಾರಿಸುತ್ತದೆ ಎಂದು ಕಂಪನಿಯು ಹೇಳುತ್ತದೆ. ಡುಕಾಟಿಯು ಹೊಸ 'ವೆಟ್' ಮೋಡ್‌ನೊಂದಿಗೆ ರೈಡಿಂಗ್ ಮೋಡ್‌ಗಳನ್ನು ಮರುಮಾಪನ ಮಾಡಿದೆ.

ಇದನ್ನೂ ಓದಿ : Dog Sleep Pattern: ನಾಯಿಗಳಿಗೆ ರಾತ್ರಿ ಏಕೆ ನಿದ್ದೆ ಬರುವುದಿಲ್ಲ? ಕಾರಣ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News