ಗ್ರಾಹಕರನ್ನು ನಿರಾಸೆಗೆ ದೂಡಿದ ಈ ಎಲೆಕ್ಟ್ರಿಕ್ ಕಾರು ! ಈ 10 ಅಂಶಗಳೇ ಕಾರಣ

MG Comet EV 10 Cons: ನೀವು MG Comet EV ಕಾರನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಈ ಕಾರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಈ 10 ಅಂಶಗಳು ಕಾರು ಖರೀದಿಸಬೇಕೆಂದಿರುವ ನಿಮ್ಮನ್ನು ನಿರಾಶೆಗೊಳಿಸಬಹುದು.    

Written by - Ranjitha R K | Last Updated : May 2, 2023, 12:25 PM IST
  • MG ಇತ್ತೀಚೆಗೆ ತನ್ನ ಕಾಮೆಟ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಿದೆ.
  • ಇದರ ಬೆಲೆ 7.98 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.
  • ಕಂಪನಿಯು ಇದನ್ನು ಸಿಟಿ ಕಾರ್ ಎಂದು ಮಾರುಕಟ್ಟೆಗೆ ಪರಿಚಯಿಸಿದೆ.
ಗ್ರಾಹಕರನ್ನು ನಿರಾಸೆಗೆ ದೂಡಿದ ಈ ಎಲೆಕ್ಟ್ರಿಕ್ ಕಾರು !  ಈ 10 ಅಂಶಗಳೇ ಕಾರಣ   title=

MG Comet EV 10 Cons: MG ಇತ್ತೀಚೆಗೆ ತನ್ನ ಕಾಮೆಟ್ ಎಲೆಕ್ಟ್ರಿಕ್ ಕಾರ್ (MG ಕಾಮೆಟ್ EV) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 7.98 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇದನ್ನು ಸಿಟಿ ಕಾರ್ ಎಂದು ಮಾರುಕಟ್ಟೆಗೆ ಪರಿಚಯಿಸಿದೆ. ಅಂದರೆ, ನಗರದಲ್ಲಿ ನೆಲೆಸಿರುವ ಗ್ರಾಹರನ್ನು ಗಮನದಲ್ಲಿರಿಸಿಕೊಂಡು ಈ ಕಾರನ್ನು ತಯಾರಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ. ಹೊಸ MG ಕಾಮೆಟ್ EV ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿದೆ. ಇನ್ನೂ ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಟಾಟಾ ನ್ಯಾನೋ ಕಾರಿಗಿಂತಲೂ ಇದರ ಗಾತ್ರ ಚಿಕ್ಕದು. MG Comet EV ಗಾತ್ರದಲ್ಲಿ ಇಷ್ಟೊಂದು ಚಿಕ್ಕದಾಗಿರುವುದರಿಂದ, ಆನ್-ರೋಡ್ ಡ್ರೈವಿಂಗ್ ಅಥವಾ ಪಾರ್ಕಿಂಗ್ ಇತ್ಯಾದಿಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವುದಿಲ್ಲ. ಹಾಗಾಗಿ ಇದು ನಗರದಲ್ಲಿ ಬಳಸಲು ಸುಲಭವಾಗುತ್ತದೆ. ಈ ಕಾರಣಕ್ಕಾಗಿ ನೀವು ಈ ಕಾರನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಈ ಕಾರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಈ 10 ಅಂಶಗಳು ಕಾರು ಖರೀದಿಸಬೇಕೆಂದಿರುವ ನಿಮ್ಮನ್ನು ನಿರಾಶೆಗೊಳಿಸಬಹುದು. 

MG ಕಾಮೆಟ್ ನ ಈ 10 ಅಂಶಗಳು ನಿಮ್ಮನ್ನು ನಿರಾಶೆಗೊಳಿಸಬಹುದು :
1.ಈ ಕಾರಿನ ವಿನ್ಯಾಸವೇ ಹೇಳಿಕೊಳ್ಳುವಂತಿಲ್ಲ. ಪ್ರತಿಯೊಬ್ಬರೂ ಇಷ್ಟಪಡುವ ಶೈಲಿಯಲ್ಲಿ ಈ ಕಾರನ್ನು ವಿನ್ಯಾಸಗೊಳಿಸಲಾಗಿಲ್ಲ.  
2. ಹೆದ್ದಾರಿಯಲ್ಲಿ ಕಾರು ಓಡಿಸಬೇಕು ಎನ್ನುವವರಿಗೆ ಈ ಕಾರು ಸೂಕ್ತವಲ್ಲ. ಈ ಕಾರು ನಗರಗಳಿಗೆ ಮಾತ್ರ.
3. ಇದು 2- ಡೋರ್ ಕಾರು. ಅಂದರೆ, ಹಿಂದಿನ ಸೀಟನ್ನು ಪ್ರವೇಶಿಸುವುದು ಕಷ್ಟ. ಇದು 5-ಸೀಟರ್ ಅಲ್ಲ 4-ಸೀಟರ್.
4. ಮೋಟಾರ್ 41 BHP ಜನರೇಟ್ ಮಾಡುತ್ತದೆ. ಅಂದರೆ,  ಪವರ್ ವಿಚಾರ ಗಮನಿಸಿದರೆ ಡ್ರೈವಿಂಗ್ ಕೂಡಾ ಮಜಾ ನೀಡುವುದಿಲ್ಲ. 

ಇದನ್ನೂ ಓದಿ : AI ನಿಂದ ಕೋಟ್ಯಂತರ ಉದ್ಯೋಗಿಗಳ ನೌಕರಿಗೆ ಬರಲಿದೆ ಕುತ್ತು! ಸಂಚಲನ ಮೂಡಿಸಿದೆ ಇತ್ತೀಚಿನ ವರದಿ

5. ಇದನ್ನು ಮನೆಯಲ್ಲಿ ಎರಡನೇ ಅಥವಾ ಮೂರನೇ ಕಾರಿನಂತೆ ಮಾತ್ರ ಬಳಸಬಹುದು. ಪ್ರೈಮರಿ ಕಾರ್ ಆಗಿ ಇದನ್ನೂ ಬಳಸುವುದು ಸಾಧ್ಯವೇ ಇಲ್ಲ. 
6. ಬೂಟ್ ಸ್ಪೇಸ್ ಇಲ್ಲ ಎಂದರೂ ತಪ್ಪಲ್ಲ. ಲಗೇಜ್ ಇಡ ಬೇಕಾದರೆ  ಹಿಂದಿನ ಸೀಟುಗಳನ್ನು ಮಡಚಬೇಕು.
7. ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಇಲ್ಲ ಅಥವಾ ಎಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯೂ ಇಲ್ಲ. ಹೋಮ್ ಚಾರ್ಜಿಂಗ್ ಮಾತ್ರ ಈ ಕಾರಿನಲ್ಲಿ ನೀಡಲಾಗಿದೆ. ಇದು ಪೂರ್ಣ ಚಾರ್ಜ್ ಆಗಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು 5 ಗಂಟೆಗಳಲ್ಲಿ 10 ರಿಂದ 80% ಮಾತ್ರ ಚಾರ್ಜ್ ಆಗುತ್ತದೆ.
8. ಚಾರ್ಜಿಂಗ್ ಮೂಲಸೌಕರ್ಯ,  ರೇಂಜ್ ಆಂಗ್ಸೈಟಿ 
ಇತ್ಯಾದಿಗಳಂತಹ ಸಾಮಾನ್ಯ ಸವಾಲುಗಳನ್ನು ಎದುರಿಸುತ್ತದೆ.  

ಇದನ್ನೂ ಓದಿ : Twitter Update: ನ್ಯೂಸ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಖಾತೆಯಿಂದ ಹಣ ಕಡಿತ, ಬಳಕೆದಾರರಿಗೆ ಮತ್ತೊಂದು ಶಾಕ್ ನೀಡಿದ ಎಲಾನ್ ಮಸ್ಕ್!

9. ಸೀಟ್ ಎತ್ತರ ಹೊಂದಾಣಿಕೆ ಸಾಧ್ಯವಿಲ್ಲ. ಚಾಲಕ ಎತ್ತರವಿದ್ದರೆ ಸೀಟನ್ನು ಕೆಳಗೆ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಿಯರ್ ವಾಷರ್ ಮತ್ತು ವೈಪರ್, ಸ್ಪೇರ್ ವೀಲ್ ಮುಂತಾದ ವೈಶಿಷ್ಟ್ಯಗಳು ಲಭ್ಯವಿಲ್ಲ.
2-ಸ್ಪೀಕರ್ ಸೌಂಡ್ ಸಿಸ್ಟಮ್ ಲಭ್ಯವಿದೆ, ಇದು ನಿಮ್ಮನ್ನು ನಿರಾಶೆಗೊಳಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News