Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ
Cheapest MPV: ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನೀವು ಕೂಡ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಹೊಂದಿರುವ 7 ಆಸನಗಳ ಕಾರು (Cheapest Seven Seater Car) ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ.
Cheapest MPV: ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನೀವು ಕೂಡ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಹೊಂದಿರುವ 7 ಆಸನಗಳ ಕಾರು (Cheapest Seven Seater Car) ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ. ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ (Maruti Suzuki) ಈ ಅಕ್ಟೋಬರ್‌ನಲ್ಲಿ ತನ್ನ ಕೈಗೆಟುಕುವ ಎಂಪಿವಿ (Multi Purpose Vehicle) Maruti Eeco ಖರೀದಿಗೆ ಬಂಪರ್ ರಿಯಾಯಿತಿ ನೀಡುತ್ತಿದೆ.
ಈ ವಾಹನವನ್ನು ವಾಣಿಜ್ಯ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕಾರು ಎರಡು ವಿಭಿನ್ನ ವಿನ್ಯಾಸಗಳು ಅನರೆ 5 ಆಸನಗಳು ಮತ್ತು 7 ಆಸನಗಳಲ್ಲಿ ಬರುತ್ತದೆ. ಈ ಕಾರಿನ ಖರೀದಿಗೆ ರೂ. 5,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 2,500 ಇದೆ. ಈ ರಿಯಾಯಿತಿಯನ್ನು ಪೆಟ್ರೋಲ್ ರೂಪಾಂತರಗಳ ಮೇಲೆ ಮಾತ್ರ ನೀಡಲಾಗುತ್ತಿದೆ, CNG ರೂಪಾಂತರಗಳ ಮೇಲೆ ಯಾವುದೇ ರಿಯಾಯಿತಿ ಇಲ್ಲ.
ಹೇಗಿದೆ ಈ MPV?
Maruti Eeco ಕಾರಿನಲ್ಲಿ ಕಂಪನಿಯು 1.2-ಲೀಟರ್ ನ್ಯಾಚುರಲ್ ಅಸ್ಪಾಯರ್ಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಿದ್ದು , ಅದು 73 ಪಿಎಸ್ ಪವರ್ ಮತ್ತು 98 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಕಾರು CNG ರೂಪಾಂತರದಲ್ಲೂ ಲಭ್ಯವಿದೆ, ಇದರ ಎಂಜಿನ್ 63PS ಪವರ್ ಮತ್ತು 85Nm ಟಾರ್ಕ್ ಉತ್ಪಾದಿಸುತ್ತದೆ.
ಇದನ್ನೂ ಓದಿ-Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !
ಇದರ ಪೆಟ್ರೋಲ್ ರೂಪಾಂತರವು 16.11 kmpl ಮತ್ತು CNG ರೂಪಾಂತರವು 20.88 kmpl ವರೆಗೆ ಮೈಲೇಜ್ ನೀಡುತ್ತದೆ. ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ಡ್ರೈವರ್ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು ಮ್ಯಾನುಯಲ್ ಏರ್ ಕಂಡೀಷನಿಂಗ್‌ನೊಂದಿಗೆ ಸೀಟ್ ಬೆಲ್ಟ್ ರಿಮೈಂಡರ್ ಗಳಂತಹ ವೈಶಿಷ್ಟ್ಯಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ