Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !

Best Selling Maruti Car - ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ. ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ (Maruti Suzuki) ದೇಸೀಯ ಮಾರುಕಟ್ಟೆಯಲ್ಲಿ ತನ್ನ ಕೈಗೆಟಕುವ ಹಾಗೂ ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಪಡೆದುಕೊಂಡಿದೆ.

Written by - Nitin Tabib | Last Updated : Jul 26, 2021, 05:59 PM IST
  • ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ.
  • ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ ದೇಸೀಯ ಮಾರುಕಟ್ಟೆಯಲ್ಲಿ ಅಗ್ಗದ-ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಹೊಂದಿದೆ.
  • ದೀರ್ಘ ಕಾಲದವರೆಗೆ Maruti Alto ಬೆಸ್ಟ್ ಸೇಲ್ಲಿಂಗ್ ಕಾರ್ ಆಗಿ ಮುಂದುವರೆಯುತ್ತಿದೆ.
Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ ! title=
Best Selling Maruti Car (File Photo)

Best Selling Maruti Car - ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ. ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ (Maruti Suzuki) ದೇಸೀಯ ಮಾರುಕಟ್ಟೆಯಲ್ಲಿ ತನ್ನ ಕೈಗೆಟಕುವ ಹಾಗೂ ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಪಡೆದುಕೊಂಡಿದೆ. ದೀರ್ಘ ಕಾಲದವರೆಗೆ Maruti Alto ಬೆಸ್ಟ್ ಸೇಲ್ಲಿಂಗ್ ಕಾರ್ ಆಗಿ ಮುಂದುವರೆಯುತ್ತಿದೆ. ಆದ್ರೆ, ಕಳೆದ ಜೂನ್ ತಿಂಗಳಿನಿಂದ ಕಂಪನಿಯ 'ಟಾಲ್ ಬಾಯ್' ಎಂದೇ ಖ್ಯಾತ Wagon R ಕಾರು ಬೆಸ್ಟ್ ಸೇಲ್ಲಿಂಗ್ ಕಾರ್ ಆಗಿ ಹೊರಹೊಮ್ಮಿದೆ.

ಕಾರು ಮಾರಾಟದ ಅಂಕಿಅಂಶಗಳನ್ನು ಗಮನಿಸಿದರೆ, ಕಳೆದ ಜೂನ್ ತಿಂಗಳಲ್ಲಿ ಕಂಪನಿಯು 19,447 ಯುನಿಟ್ ವ್ಯಾಗನ್ಆರ್ ಅನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷದ ಜೂನ್ ತಿಂಗಳಲ್ಲಿ 6,972 ಯುನಿಟ್ಗಳಿಗಿಂತ ಶೇ.179 ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಮಾರುತಿ ಆಲ್ಟೊ ಬಗ್ಗೆ ಹೇಳುವುದಾದರೆ ಜೂನ್ ತಿಂಗಳಿನಲ್ಲಿ 12,513 ಯುನಿಟ್ ಮಾರಾಟವಾಗಿದೆ, ಜೂನ್ ಇದು  2020 ರಲ್ಲಿ ಕೇವಲ 7,298 ಯುನಿಟ್ ಆಗಿತ್ತು. ಜೂನ್ ತಿಂಗಳಲ್ಲಿ, ಈ ಎರಡು ಕಾರುಗಳ ಮಾರಾಟದಲ್ಲಿ ಸುಮಾರು 6,934 ಯುನಿಟ್‌ಗಳ ವ್ಯತ್ಯಾಸ ಕಂಡುಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ Maruti WagonR ಕಾರು (Car) ಪೆಟ್ರೋಲ್ ಹಾಗೂ CNG ಎಂಬ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ. 'ಟಾಲ್ ಬಾಯ್' ಬಾಕ್ಸಿ ವಿನ್ಯಾಸದ ಹಿನ್ನೆಲೆ ಈ ಕಾರಿನ ಕ್ಯಾಬಿನ್ ನಲ್ಲಿ ಉತ್ತಮ ಸ್ಪೇಸ್ ಹಾಗೂ ಲೆಗ್ ರೂಮ್ ನೀಡಲಾಗಿದೆ. ಈ ಕಾರಿನ ಇಂಜಿನ್ ಕುರಿತು ಹೇಳುವುದಾದರೆ, ಈ ಕಾರು ಎರಡು ವಿಭಿನ್ನ ಇಂಜಿನ್ ಗಳೊಂದಿಗೆ ಬರುತ್ತದೆ. ಇದರ ಮೊದಲ ವೇರಿಯಂಟ್ ನಲ್ಲಿ 1.0 ಲೀತೆರ್ ಪೆಟ್ರೋಲ್ ಇಂಜಿನ್ (68PS/90Nm) ನೀಡಲಾಗಿದೆ . ಎರಡನೇ ವೇರಿಯಂಟ್ ನಲ್ಲಿ 1.2 ಲೀಟರ್ ಪೆಟ್ರೋಲ್ ಇಂಜಿನ್ (83PS/113Nm) ನೀಡಲಾಗಿದೆ. ಈ ಕಾರಿನ CNG ಆವೃತ್ತಿಯಲ್ಲಿ1.0 ಲೀಟರ್ ಇಂಜಿನ್ ನೀಡಲಾಗಿದೆ ಇದು 60PS ಪವರ್ ಹಾಗೂ 78Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 5 ಸ್ಪೀಡ್ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಒಳಗೊಂಡಿದೆ.

ಇದನ್ನೂ ಓದಿ-Bank Holidays in August 2021: ಮುಂದಿನ ತಿಂಗಳು 15 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ

ಈ ವಿಶೇಷ ವೈಶಿಷ್ಟ್ಯ ಸಿಗುತ್ತದೆ (Maruti WagonR Features)
ಈ ಕಾರಿನಲ್ಲಿ ಅಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ಪ್ಲೇ ಜೊತೆಗೆ 7 ಇಂಜಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ AC, ಪವರ್ ವಿಂಡೋ, ಕೀಲೆಸ್ ಎಂಟ್ರಿ ಹಾಗೂ ಸ್ಟೀಯರಿಂಗ್ ಮೌಂಟೆಡ್ ಆಡಿಯೋ ಹಾಗೂ ಕಾಲಿಂಗ್ ಕಂಟ್ರೋಲ್ ಕೂಡ ನೀಡಲಾಗಿದೆ. ಇದರಲ್ಲಿ ಯಾತ್ರಿಗಳ ಸುರಕ್ಷತೆಗೂ ಕೂಡ ಹೆಚ್ಚಿನ ಗಮನ ಹರಿಸಲಾಗಿದೆ. ಈ ಸ್ಟ್ಯಾಂಡರ್ಡ್ ಸೇಫ್ಟಿ ವೈಶಿಷ್ಟ್ಯಗಳಲ್ಲಿ ಡ್ರೈವರ್ ಏರ್ ಬ್ಯಾಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್ ಹಾಗೂ ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು ಶಾಮೀಲಾಗಿವೆ.

ಇದನ್ನೂ ಓದಿ- UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?

ಬೆಲೆ ಹಾಗೂ ಮೈಲೇಜ್
ಈ ಕಾರಿನ 1.0 ಲೀಟರ್ ವೇರಿಯಂಟ್ 21.79 ಕಿ.ಮೀ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ. 1.2 ಲೀಟರ್ ವೇರಿಯಂಟ್ 20.52 ಕಿ.ಮೀ  ಹಾಗೂ CNG ವೇರಿಯಂಟ್ ಪ್ರತಿ ಕೆ.ಜಿಗೆ 32 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರಿನ ಬೆಲೆ 4.80 ಲಕ್ಷ ರೂ.ಗಳಿಂದ 6.33 ಲಕ್ಷ ರೂ.ಗಳಾಗಿದೆ.

ಇದನ್ನೂ ಓದಿ-UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News