Hyundai Casper: ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಅತ್ಯಂತ ಅಗ್ಗದ ಬೆಲೆಯ ಮೈಕ್ರೋ SUV, ಬೆಲೆ ಎಷ್ಟಿರಲಿದೆ ಗೊತ್ತಾ?

Hyundai Casper - ದಕ್ಷಿಣ ಕೊರಿಯಾದ ಪ್ರಮುಖ ವಾಹನ ಉತ್ಮಾದಕ ಕಂಪನಿ ಹ್ಯುಂಡೈ ಅಂತಿಮವಾಗಿ ತನ್ನ ಚಿಕ್ಕ ಮತ್ತು ಅತ್ಯಂತ ಅಗ್ಗದ ಮೈಕ್ರೊ ಎಸ್‌ಯುವಿ ಹೆಸರನ್ನುಬಹಿರಂಗಗೊಳಿಸಿದೆ. 

Written by - Nitin Tabib | Last Updated : Jul 18, 2021, 05:29 PM IST
  • ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಅತ್ಯಂತ ಅಗ್ಗದ ಬೆಲೆಯ ಮೈಕ್ರೋ SUV.
  • ಹುಂಡೈ ಕಂಪನಿಯ ಈ ಕಾರು ಮೊದಲು ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಕಾಲಿಡಲಿದೆ.
  • ದ. ಕೊರಿಯಾ ಬಳಿಕ ಸೆಪ್ಟೆಂಬರ್ ವೇಳೆಗೆ ಇದು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
Hyundai Casper: ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಅತ್ಯಂತ ಅಗ್ಗದ ಬೆಲೆಯ ಮೈಕ್ರೋ SUV, ಬೆಲೆ ಎಷ್ಟಿರಲಿದೆ ಗೊತ್ತಾ? title=
Hyundai Casper Micro SUV (File Photo)

Hyundai Casper - ದಕ್ಷಿಣ ಕೊರಿಯಾದ ಪ್ರಮುಖ ವಾಹನ ಉತ್ಮಾದಕ ಕಂಪನಿ ಹ್ಯುಂಡೈ ಅಂತಿಮವಾಗಿ ತನ್ನ ಚಿಕ್ಕ ಮತ್ತು ಅತ್ಯಂತ ಅಗ್ಗದ ಮೈಕ್ರೊ ಎಸ್‌ಯುವಿ ಹೆಸರನ್ನುಬಹಿರಂಗಗೊಳಿಸಿದೆ. ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಕಂಪನಿಯು  ತನ್ನ ನೂತನ ಮೈಕ್ರೊ ಎಸ್‌ಯುವಿಗೆ (Cheapest Micro SUV) ಹ್ಯುಂಡೈ ಕ್ಯಾಸ್ಪರ್ ಎಂದು ಹೆಸರಿಸಿದೆ ಎನ್ನಲಾಗಿದೆ.  ಇಲ್ಲಿಯವರೆಗೆ ಈ ಕಾರನ್ನು ಅದರ ಸಂಕೇತನಾಮ (AX1) ದಿಂದ ಮಾತ್ರ ಗುರುತಿಸಲಾಗುತ್ತಿತ್ತು.

ಮಾಧ್ಯಮಗಳ ಮಾಹಿತಿ ಪ್ರಕಾರ, ಕಂಪನಿ ಈ ಮೈಕ್ರೋ SUVಯನ್ನು ದಕ್ಷಿಣ ಕೊರಿಯಾದ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ. ನಂತರ ಅದನ್ನು ಭಾರತದಂತಹ ದೇಶಗಳಿಗೆ ಪರಿಚಯಿಸಲಿದೆ ಎನ್ನಲಾಗಿದೆ . ಆದರೆ, ಹುಂಡೈ ಕೇವಲ ಕೊರೋಯಾ ಮಾರುಕಟ್ಟೆಗಾಗಿ ಮಾತ್ರ ಈ ಹೆಸರನ್ನು ನೊಂದಾಯಿಸಿದೆ ಎನ್ನಲಾಗಿದೆ. ಇತರ ಮಾರುಕಟ್ಟೆಗಳಿಗೂ ಕೂಡ ಇದನ್ನು Casper ಹೆಸರಿನಿಂದಲೇ ಬಿಡುಗಡೆಗೊಳಿಸಲಿದೇಯೋ ಅಥವಾ ಬೇರೆ ಹೆಸರಿನಿಂದ ಬಿಡುಗಡೆ ಮಾಡಲಾಗಿದೆ ಎಂಬುದು ಇದುವರೆಗೆ ದೃಢಪಟ್ಟಿಲ್ಲ. 

ಹಾಗೆ ನೋಡುವುದಾದರೆ, ಹುಂಡೈ ತನ್ನ ಒಂದೇ ಮಾಡೆಲ್ ಕಾರನ್ನು ಬೇರೆ ಬೇರೆ ಮಾರುಕಟ್ಟೆಗಳಿಗೆ ಬೇರೆ ಬೇರೆ ಹೆಸರಿನಿಂದ ಪರಿಚಯಿಸುತ್ತದೆ.  ಉದಾಹರಣೆಗೆ ಕ್ರೆಟಾ ಕಾರನ್ನು ಹುಂಡೈ ಬೇರೆ ಮಾರುಕಟ್ಟೆಗಳಲ್ಲಿ ix25 ಹೆಸರಿನಿಂದ ಮಾರಾಟ ಮಾಡುತ್ತದೆ. ಹೀಗಾಗಿ ಈ ಮೈಕ್ರೋ SUV ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಕಂಪನಿ ಈ ಕಾರಿನ ಹೆಸರನ್ನು ಕೂಡ ಬದಲಾಯಿಸುವ ಸಾಧ್ಯತೆ ಇದೆ. ಅದೇನೇ ಇದ್ದರೂ ಕೂಡ ಪ್ರಸ್ತುತ ಈ ಚಿಕ್ಕ SUV ಕೆಲ ಮಾಹಿತಿಗಳು ಬಹಿರಂಗಗೊಂಡಿರುವುದಂತೂ ನಿಜ.

ಅತಿ ಶೀಘ್ರದಲ್ಲಿಯೇ ಕಂಪನಿ ತನ್ನ ಈ ಚಿಕ್ಕ SUV ಕಾರಿನ ಉತ್ಪಾದನೆಯನ್ನು ಕೊರಿಯಾದಲ್ಲಿ ಆರಂಭಿಸಲಿದೆ ಹಾಗೂ ಕೊರಿಯಾ ಮಾರುಕಟ್ಟೆಯಲ್ಲಿಯೇ ಈ ಕಾರಿನ ಮಾರಾಟ ಆರಂಭಿಸಲಿದೆ. ಬರುವ ಸೆಪ್ಟೆಂಬರ್ ನಲ್ಲಿ ಜಾಗತಿಕ ಮಾರುಕಟ್ಟೆಗೆ ಈ ಕಾರು (Micro SUV Car) ಬಿಡುಗಡೆಯಾಗುವ ನಿರೀಕ್ಷೆ ಇದೆ. ಹುಂಡೈ ಪಾಲಿಗೆ ಭಾರತೀಯ ಮಾರುಕಟ್ಟೆ ತುಂಬಾ ಮಹತ್ವದ ಮಾರುಕಟ್ಟೆಯಾಗಿದೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯ ಬಳಿಕ ಕಂಪನಿ ಭಾರತೀಯ ಮಾರುಕಟ್ಟೆಯನ್ನೇ ಗುರಿಯಾಗಿಸಲಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ-ಸುಜುಕಿ ಕಂಪನಿಗೆ ಈ ಕಂಪನಿ ತೀರಾ ಹತ್ತಿರದ ಪೈಪೋಟಿ ನೀಡುತ್ತದೆ.

Hyundai Casper Micro SUV ಹೇಗಿರಲಿದೆ?
ಈ ಮೊದಲೇ ನಾವು ಹೇಳಿರುವ ಹಾಗೆ ಇದು ಹ್ಯುಂಡೈನ ಚಿಕ್ಕ ಎಸ್‌ಯುವಿ ಆಗಿರುತ್ತದೆ, ಇದರಿಂದ ಇದರ ಗಾತ್ರವು 4 ಮೀಟರ್‌ಗಿಂತ ಕಡಿಮೆಯಿರುತ್ತದೆ ಮತ್ತು ಇದು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂಗಿಂದ ಸ್ವಲ್ಪ ಚಿಕ್ಕದಾಗಿರಬಹುದು. ಈ ಎಸ್‌ಯುವಿ,  ಹ್ಯುಂಡೈ ಕೆ 1 ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಈ ಪ್ಲಾಟ್ ಫಾರ್ಮ್ ಮೇಲೆ ಈಗಾಗಲೇ ಗ್ರ್ಯಾಂಡ್ ಐ 19 ನಿಯೋಸ್ ಮತ್ತು ಸ್ಯಾಂಟ್ರೊ ನಿರ್ಮಾಣಗೊಂಡಿವೆ.

ಮಾಧ್ಯಮ ವರದಿಗಳ ಪ್ರಕಾರ, ಈ ಎಸ್ಯುವಿಯ ಉದ್ದ 3,595 ಮಿಮೀ, ಅಗಲ 1,595 ಮಿಮೀ ಮತ್ತು ಎತ್ತರ 1,575 ಮಿಮೀಇರುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ನಾವು ಈ ಗಾತ್ರವನ್ನು ನೋಡಿದರೆ, ಇದು 3,610 ಮಿಮೀ ಉದ್ದವನ್ನು ಹೊಂದಿರುವ ಸ್ಯಾಂಟ್ರೊ (Hundai Santro) ಹ್ಯಾಚ್‌ಬ್ಯಾಕ್‌ಗಿಂತ ಸ್ವಲ್ಪ ಕಡಿಮೆ ಇರಲಿದೆ. ಆದರೆ ಈ ಎಸ್ಯುವಿಯ ಎತ್ತರವು ಸ್ಯಾಂಟ್ರೊಗಿಂತ ಸ್ವಲ್ಪ ಹೆಚ್ಚಾಗಿರಲಿದೆ. ಸ್ಯಾಂಟ್ರೊ ಕೇವಲ 1,560 ಮಿಮೀ ಎತ್ತರವಿದೆ.

ಇದನ್ನೂ ಓದಿ-ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!

ಈ SUVಯನ್ನು ಅತರ ಟೆಸ್ಟಿಂಗ್ ವೇಳೆ ಮೊದಲಬಾರಿಗೆ ಗುರುತಿಸಲಾಗಿದೆ. ಇದರ ಪ್ರಕಾರ ಕಾರ್ ಗೆ ಬಾಕ್ಸಿ ಡಿಸೈನ್ ನೀಡಲಾಗುವುದು ಎನ್ನಲಾಗುತ್ತಿದೆ. ಇದರಲ್ಲಿ ಡೇ ಟೈಮ್ ರನ್ನಿಂಗ್ ಲೈಟ್ ಗಳ ಜೊತೆಗೆ ಸರ್ಕ್ಯೂಲರ್ ಹೆಡ್ ಲ್ಯಾಂಪ್, ಹಿಂಭಾಗದಲ್ಲಿ ಆಕರ್ಷಕ ಟೆಲ್ ಲ್ಯಾಂಪ್ ಗಳ ಜೊತೆಗೆ ಕೆಲ ಸ್ಟೈಲಿಶ್ ಎಲಿಮೆಂಟ್ ಗಳನ್ನು ಕೂಡ ಶಾಮೀಲುಗೊಳಿಸಲಾಗಿದೆ. ಈ ಕಾರಿನ ಇಂಜಿನ್ ಕುರಿತು ಹೇಳುವುದಾದರೆ, ಇದರಲ್ಲಿ 1.2 ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಯುಕ್ತ ನೈಸರ್ಗಿಕ ಎಸ್ಪಾಯರ್ಡ್ ಇಂಜಿನ್ ನೀಡಲಾಗುವ ಸಾಧ್ಯತೆ ಇದ್ದು ಇದು 83HP ಪಾವರ್ ಹಾಗೂ 114NM ಟಾರ್ಕ್ ಉತ್ಪಾದಿಸುತ್ತದೆ. ಇದಲ್ಲದೆ, ಕಂಪನಿ ಇದರ ಲೋವರ್ ವೇರಿಯಂಟ್ ನಲ್ಲಿ 1.1 ಲೀಟರ್ ಪೆಟ್ರೋಲ್ ಇಂಜಿನ್ ಕೂಡ ನೀಡಬಹುದು. ಇದರಿಂದ ಕಾರಿನ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ-PM Kisan Tractor Scheme: ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಿದರೆ ಸಿಗಲಿದೆ 50 ಶೇ ಸಬ್ಸಿಡಿ

ಬೆಲೆ ಎಷ್ಟಾಗಿರಬಹುದು?
ಬಿಡುಗಡೆಗೂ ಮುನ್ನವೇ ಹೊಸ Hyundai Casper ಬೆಲೆಯ ಕುರಿತು ಏನನ್ನು ಹೇಳಲು ಸಾಧ್ಯವಿಲ್ಲ. ಆದರೆ, ತಜ್ಞರು ಹೇಳುವ ಪ್ರಕಾರ ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 4.5ಲಕ್ಷ ರೂ.ಗಳಿಂದ ಹಿಡಿದು 5 ಲಕ್ಷ ರೂ.ಗಳವರೆಗೆ ಇರುವ ಸಾಧ್ಯತೆ ಇದೆ ಎನ್ನುತ್ತಾರೆ. ಮಾರುಕಟ್ಟೆಯೇ ಬಿಡುಗಡೆಯಾದ ಬಳಿಕ ಈ ಮೈಕ್ರೋ SUV ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ-ಸುಜುಕಿ (Maruti Suzuki) ಎಸ್ಪ್ರೆಸ್ಸೋಗೆ ಭಾರಿ ಪೈಪೋಟಿ ನೀಡಬಹುದು. ಇದಲ್ಲದೆ ಇದೇ ಸೆಗ್ಮೆಂಟ್ ನಲ್ಲಿ ಟಾಟಾ ಕಂಪನಿಯೂ (Tata Motors) ಕೂಡ ತನ್ನ ಟಾಟಾ HBX ಬಿಡುಗಡೆಗೊಳಿಸುವ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ- ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಚಿಂತಿಸಬೇಕಿಲ್ಲ Maruti ಹೊರ ತರುತ್ತಿದೆ Dzire CNG Car

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News