CNG Cars: 3 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ CNG ಕಾರುಗಳು!
ಅತ್ಯುತ್ತಮ CNG ಕಾರುಗಳು: CNG ಕಾರನ್ನು ಅಗ್ಗವಾಗಿ ಖರೀದಿಸಲು ಯೋಚಿಸುತ್ತಿರುವ ಜನರು ನಿರಾಶೆಗೊಳ್ಳುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ CNG ಕಾರುಗಳ ಹಲವು ಆಯ್ಕೆಗಳಿವೆ.
3 ಲಕ್ಷದೊಳಗಿನ CNG ಕಾರುಗಳು: ಭಾರತೀಯ ಮಾರುಕಟ್ಟೆಯಲ್ಲಿ CNG ಕಾರುಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಆದರೆ ಇತರ ಕಾರುಗಳಂತೆ ಇವುಗಳನ್ನು ಖರೀದಿಸಲು ಲಕ್ಷಗಟ್ಟಲೇ ಹಣ ತೆರಬೇಕಾಗುತ್ತದೆ. CNG ಆವೃತ್ತಿಯು ಪೆಟ್ರೋಲ್ ಮಾದರಿಗಿಂತ ಸುಮಾರು 1 ಲಕ್ಷ ರೂ. ಹೆಚ್ಚಿರುತ್ತದೆ. ಅಗ್ಗದ CNG ಕಾರು ಖರೀದಿಸುವ ಯೋಚನೆಯಲ್ಲಿರುವವರು ನಿರಾಶರಾಗಬೇಕಿಲ್ಲ. ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ CNG ಕಾರುಗಳ ಹಲವು ಆಯ್ಕೆಗಳಿವೆ. ಬಳಸಿದ CNG ಕಾರುಗಳಿಗೂ ಭಾರತೀಯ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ. 3 ಲಕ್ಷ ರೂ.ದೊಳಗಿರುವ CNG ಕಾರುಗಳ ಬಗ್ಗೆ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ನೀಡುತ್ತಿದ್ದೇವೆ. ಈ ಕಾರುಗಳನ್ನು ನೀವು ಕಾರ್ಸ್ 24ನಲ್ಲಿ ಖರೀದಿಸಬಹುದು.
1. ಹುಂಡೈ i10 ಸ್ಪೋರ್ಟ್ಜ್ 2011
ಈ CNG ಹ್ಯುಂಡೈ i10 ನ 2011 ಮಾಡೆಲ್‌ಗೆ ವೆಬ್‌ಸೈಟ್‌ನಲ್ಲಿ 2.4 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಈ ಕಾರು first owner ಆಗಿದ್ದು, ಬೂದು ಬಣ್ಣದ್ದಾಗಿದೆ. ಇದರ ನೋಂದಣಿ ಸಂಖ್ಯೆ ಯುಪಿ-32 ಆಗಿದೆ. ಇದು Manual Gearbox ಹೊಂದಿದ್ದು, ನವೆಂಬರ್ 2023ರವರೆಗೆ ವಿಮೆ ಹೊಂದಿದೆ.
ಇದನ್ನೂ ಓದಿ: ಈ ದಿನ ರೈತರ ಖಾತೆ ಸೇರಲಿದೆ ಪಿಎಂ ಕಿಸಾನ್ 14 ನೇ ಕಂತು ! ಸರ್ಕಾರದಿಂದ ಹೊರ ಬಿತ್ತು ಮಾಹಿತಿ
2. ಮಾರುತಿ ಸ್ವಿಫ್ಟ್ LXI 2011
ನೀವು ಮಾರುತಿ ಸುಜುಕಿ ಸ್ವಿಫ್ಟ್ ಅನ್ನು CNGಯಲ್ಲಿ ಖರೀದಿಸಬಹುದು . 2011ರ ಮಾಡೆಲ್‍ನ ಕಾರು ಇದಾಗಿದ್ದು, ಇದುವರೆಗೆ 80,296 ಕಿಮೀ ಚಲಿಸಿದೆ. ಇದಕ್ಕೆ 2.68 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಈ ಕಾರು ಬಿಳಿ ಬಣ್ಣದ್ದಾಗಿದ್ದು, Second Owner ಕಾರಾಗಿದೆ. ಇದರ ನೋಂದಣಿ ಸಂಖ್ಯೆ DL-5C ಆಗಿದೆ.
3. ಮಾರುತಿ ಆಲ್ಟೊ 800 LXI 2016
ಈ 2016ರ ಮಾಡೆಲ್ CNG ಮಾರುತಿ ಸುಜುಕಿ ಆಲ್ಟೊ 800ನ ಬೆಲೆ 2.91 ಲಕ್ಷ ರೂ. ಇದೆ. ಇದುವರೆಗೆ 98,080 ಕಿಮೀ ಓಡಿರುವ ಈ ಕಾರು ಕಪ್ಪು ಬಣ್ಣದ್ದಾಗಿದೆ. First Owner ಕಾರಾಗಿರುವ ಇದರ ನೋಂದಣಿ ಸಂಖ್ಯೆ ಯುಪಿ-32 ಆಗಿದೆ. ಇದು Manual Gearboxನಲ್ಲಿದ್ದು, ನವೆಂಬರ್ 2023ರವರೆಗೆ ವಿಮೆ ಹೊಂದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಮಾತ್ರವಲ್ಲ ಒಂದೇ ಬಾರಿ ಈ ಮೂರು ಭತ್ಯೆಗಳಲ್ಲಿ ಏರಿಕೆ
4. ಹ್ಯುಂಡೈ ಇಯಾನ್ ಮ್ಯಾಗ್ನಾ+ 2016
ನೀವು CNGಯಲ್ಲಿ ಹುಂಡೈ ಇಯಾನ್ ಸಹ ಖರೀದಿಸಬಹುದು. ಇದು 2016ರ ಮಾಡೆಲ್ ಕಾರು ಆಗಿದ್ದು, ಇದುವರೆಗೆ 78,758 ಕಿಮೀ ಕ್ರಮಿಸಿದೆ. ಇದಕ್ಕೆ 2.79 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಈ ಕಾರು ಬಿಳಿ ಬಣ್ಣದ್ದಾಗಿದೆ ಮತ್ತು 2ನೇ ಮಾಲೀಕರದ್ದಾಗಿದೆ. ಇದರ ನೋಂದಣಿ ಸಂಖ್ಯೆ ಯುಪಿ-14 ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.