ನವದೆಹಲಿ : ಈಗಾಗಲೇ ವಿವಾದಕ್ಕೆ ತುತ್ತಾಗಿರುವ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ದ ಮತ್ತೊಂದು ದೂರು ಕೇಳಿ ಬಂದಿದೆ.ಈ ಬಾರಿ ಸೆಬಿ ಅಧಿಕಾರಿಗಳೇ ಇವರ ವಿರುದ್ದ ಹಣಕಾಸು ಸಚಿವಾಲಯಕ್ಕೆ ದೂರು ನೀಡಿದ್ದಾರೆ.ಹಣಕಾಸು ಸಚಿವಾಲಯಕ್ಕೆ ಬರೆದಿರುವ ಪತ್ರದ ಪ್ರಕಾರ, ಸೆಬಿ ಅಧ್ಯಕ್ಷೆ ಅಧಿಕಾರಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.ಸಭೆಯಲ್ಲಿ ಕೂಗಾಟ, ಚೀರಾಟ, ಅವಮಾನ ಸಾಮಾನ್ಯವಾಗಿತ್ತು ಎಂದು ಅಧಿಕಾರಿಗಳು ದೂರಿದ್ದಾರೆ. ಮಧು ಬಾಯಿ ಪುರಿ ಅಧಿಕಾರಿಗಳ ವಿರುದ್ದ ಕಠೋರ ಮತ್ತು ವೃತ್ತಿಪರವಲ್ಲದ ಭಾಷೆಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. 


COMMERCIAL BREAK
SCROLL TO CONTINUE READING

ಸೆಬಿಯಲ್ಲಿನ ಸರಿಸುಮಾರು 1,000 ಹಿರಿಯ ಅಧಿಕಾರಿಗಳ ಪೈಕಿ ಅರ್ಧದಷ್ಟು ಮಂದಿ ಈ ದೂರು ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಕೆಲವು ದಿನಗಳ ಮೊದಲೇ  ಅಧಿಕಾರಿಗಳು ಸಹಿ ಹಾಕಿರುವ ಈ ದೂರನ್ನು ಸಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೆ ಈ ಆರೋಪಗಳನ್ನು ದಂಪತಿ  ಸ್ಪಷ್ಟವಾಗಿ ನಿರಾಕರಿಸಿದೆ. 


ಇದನ್ನೂ ಓದಿ :  ಕೊನೆಗೂ ಈಡೇರಿತು ಬಹು ದಿನದ ಕನಸು!ಸರ್ಕಾರಿ ನೌಕರರ ಮೂಲ ವೇತನದಲ್ಲಿ 44 % ಹೆಚ್ಚಳ !ಈ ದಿನ ಸರ್ಕಾರ ಹೊರಡಿಸುವುದು ಅಧಿಸೂಚನೆ


ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿಯಲ್ಲಿ ಅವರ ನಡವಳಿಕೆ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿರುವ ನಡುವೆಯೇ,ಇದೀಗ ಈ ಬೆಳವಣಿಗೆ ಬೆಳಕಿಗೆ ಬಂದಿದೆ.  


ಹಿಂಡೆನ್‌ಬರ್ಗ್ ರಿಸರ್ಚ್, ಈ ಹಿಂದೆ ಅಂದರೆ ಆಗಸ್ಟ್ 10 ರಂದು, ಗಂಭೀರ ಆರೋಪಗಳ ಹೊರತಾಗಿಯೂ ಬುಚ್ ಮತ್ತು ಅವರ ಪತಿ ಅದಾನಿ ಗ್ರೂಪ್ ಬಳಸಿದ ಆಫ್‌ಶೋರ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿತ್ತು. ಆದರೆ  ಬುಚ್ ದಂಪತಿ ಈ ಆರೋಪಗಳನ್ನು ತಳ್ಳಿ ಹಾಕಿದ್ದರು.ಇನ್ನು ಅನೇಕ ಹಣಕಾಸು ತಜ್ಞರು ಆಕೆಯ ನಾಯಕತ್ವದಲ್ಲಿ ಸೆಬಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.


ಕಳೆದ ತಿಂಗಳು ಝೀ ಬಿಸಿನೆಸ್‌ನೊಂದಿಗೆ ಮಾತನಾಡಿದ ಮಾಜಿ ಹಣಕಾಸು ಕಾರ್ಯದರ್ಶಿ ಎಸ್‌ಸಿ ಗರ್ಗ್, ಮಾಧಬಿ ಪುರಿ ಬುಚ್  ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇತ್ತೀಚಿನ ಬೆಳವಣಿಗೆಗಳು ಒಪ್ಪುವಂತದ್ದಲ್ಲ, ಈ ಬಗ್ಗೆ  ಸರ್ಕಾರ ಸೂಕ್ಷ್ಮವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. 


ಇದನ್ನೂ ಓದಿ :  ದಕ್ಷಿಣ ಭಾರತಕ್ಕೆ‌ ಬಂದ ಜರ್ಮನಿಯ 'ಫ್ಲಿಕ್ಸ್‌ಬಸ್': ಸಚಿವ ಎಂಬಿ ಪಾಟೀಲ ಹಸಿರು ನಿಶಾನೆ


ಹಲವಾರು ವಿದೇಶಿ ಹೂಡಿಕೆದಾರರು ಕೂಡಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  ಪ್ರಖ್ಯಾತ ವ್ಯಾಪಾರ ಮತ್ತು ಟೆಕ್ ವಿಶ್ಲೇಷಕ ಮತ್ತು ಅರ್ಥಶಾಸ್ತ್ರಜ್ಞ ಡೇನಿಯಲ್ ಗೆಲ್ಟ್ರೂಡ್  ಕೂಡಾ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೇಳಿ ಬಂದಿರುವ ಆರೋಪಗಳು "ಹೂಡಿಕೆದಾರರ ವಿಶ್ವಾಸಕ್ಕೆ ಪೆಟ್ಟು ನೀಡಬಹುದು ಎಂದು ಹೇಳಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.