Service Charge Ban: ಕೆಲವು ದಿನಗಳ ಹಿಂದೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿತ್ತು. ಅದರ ಪ್ರಕಾರ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಆಹಾರ ಬಿಲ್‌ನಲ್ಲಿ ಪ್ರತ್ಯೇಕ ಸೇವಾ ಶುಲ್ಕವನ್ನು ವಿಧಿಸುವುದನ್ನು ನಿಷೇಧಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ ಇಷ್ಟೆಲ್ಲಾ ಆದರೂ ಕೆಲವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬಂತೆ ತೋರುತ್ತಿದೆ.


COMMERCIAL BREAK
SCROLL TO CONTINUE READING

ಗ್ರಾಹಕರಿಂದ ನಿರಂತರ ದೂರುಗಳು ಕೇಳಿಬರುತ್ತಿವೆ
ಕಳೆದ ನಾಲ್ಕು ದಿನಗಳಲ್ಲಿ, ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದೂರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ದೆಹಲಿಯಿಂದ ಗರಿಷ್ಠ ಸಂಖ್ಯೆಯ ದೂರುಗಳು ಬಂದಿವೆ, ಜುಲೈ 4 ರಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ನಂತರ, ಇದುವರೆಗೆ ಒಟ್ಟು 85 ದೂರುಗಳನ್ನು ಸ್ವೀಕರಿಸಲಾಗಿದೆ. ದೆಹಲಿ (18) ನಂತರ ಬೆಂಗಳೂರು (15), ಮುಂಬೈ (11), ಪುಣೆ (4) ಮತ್ತು ಗಾಜಿಯಾಬಾದ್ (3) ಸೇವಾ ಶುಲ್ಕಕ್ಕೆ ಸಂಬಂಧಿಸಿದ ದೂರಿಗಳಿವೆ..


CCPA ಜುಲೈ 4 ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರದ ಬಿಲ್‌ಗಳಿಗೆ ಸೇವಾ ಶುಲ್ಕವನ್ನು ವಿಧಿಸುವುದನ್ನು ನಿಷೇಧಿಸಿತ್ತು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರದ ಬಿಲ್‌ಗೆ ಸೇವಾ ಶುಲ್ಕವನ್ನು ಸೇರಿಸಲು ಸಾಧ್ಯವಿಲ್ಲ ಎಂದು CCPA ಹೇಳಿತ್ತು. ಸೇವಾ ಶುಲ್ಕಗಳ ಪಾವತಿಯು ಗ್ರಾಹಕರಿಂದ ಸ್ವಯಂಪ್ರೇರಿತವಾಗಿರಬೇಕು ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿರಬೇಕು. ಇದಲ್ಲದೆ, ಗ್ರಾಹಕರು ಅಂತಹ ಯಾವುದೇ ಉಲ್ಲಂಘನೆಯ ಬಗ್ಗೆ ದೂರು ಸಲ್ಲಿಸಬಹುದು ಎಂದು ಸಿಪಿಪಿಎ ಹೇಳಿತ್ತು.


ಇದನ್ನೂ ಓದಿ-AC-ಕೂಲರ್ & ಫ್ರಿಡ್ಜ್ ಬಳಸಿದ್ರೂ ಬರಲ್ಲ ವಿದ್ಯುತ್ ಬಿಲ್! ಸರ್ಕಾರದ ಈ ಯೋಜನೆಯಿಂದ ದೊಡ್ಡ ಲಾಭ


ಸೇವಾ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಸರ್ಕಾರ ಗಂಭೀರವಾಗಿದೆ
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಇದನ್ನು ಕೇವಲ ಸಲಹೆ ಎಂದು ಪರಿಗಣಿಸಬಾರದು ಎಂದು ಸರ್ಕಾರ ಕಟುವಾಗಿ ಹೇಳಿದೆ. ಇದನ್ನು ಕಡ್ಡಾಯವಾಗಿ ಎಲ್ಲರೂ ಅನುಸರಿಸಬೇಕು. CCPA ಹೊರಡಿಸಿದ ಹೊಸ ಮಾರ್ಗಸೂಚಿಗಳು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿಂದಿನ ಮಾರ್ಗಸೂಚಿಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. CCPA ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 18(2)(l) ಅಡಿಯಲ್ಲಿ ಮಾರ್ಗಸೂಚಿಗಳನ್ನು ನೀಡಿದೆ. ಈ ವಿಷಯದ ಬಗ್ಗೆ, ಸಿಸಿಪಿಎ ಮಾರ್ಗಸೂಚಿಗಳ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.


ಇದನ್ನೂ ಓದಿ-Twitter ಜೊತೆಗಿನ ಡೀಲ್ ಕ್ಯಾನ್ಸಲ್ ಎಂದ ಎಲಾನ್ ಮಸ್ಕ್, ಇಲ್ಲಿದೆ ಹೊಸ ಅಪ್ಡೇಟ್


ಸಿಸಿಪಿಎಯ ಈ ಆದೇಶದ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI) ಮತ್ತು ರೆಸ್ಟೋರೆಂಟ್ ಉದ್ಯಮಿಗಳ ರಾಷ್ಟ್ರೀಯ ಸಂಸ್ಥೆಯಾದ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI) ನ ಉನ್ನತ ಅಧಿಕಾರಿಗಳು CCPA ಯ ಈ ನಿರ್ಧಾರಕ್ಕೆ ತನ್ನ ಅಸಮಾಧಾನ ಹೊರಹಾಕಿದ್ದು, ನಿರಂತರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ