Twitter ಜೊತೆಗಿನ ಡೀಲ್ ಕ್ಯಾನ್ಸಲ್ ಎಂದ ಎಲಾನ್ ಮಸ್ಕ್, ಇಲ್ಲಿದೆ ಹೊಸ ಅಪ್ಡೇಟ್

Elon Musk Twitter Deal: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್  ಮತ್ತು ಅತ್ಯಂತ ಪ್ರಭಾವಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾದ ಟ್ವಿಟರ್ ನಡುವಿನ ನಾಟಕೀಯ ಒಪ್ಪಂದ ಇದೀಗ ಹೊಸ ತಿರುವು ಪಡೆದುಕೊಂಡಿದೆ.  

Written by - Nitin Tabib | Last Updated : Jul 9, 2022, 11:37 AM IST
  • ಟ್ವಿಟ್ಟರ್ ಜೊತೆಗಿನ ಡೀಲ್ ಕ್ಯಾನ್ಸಲ್ ಎಂದು ಹೇಳಿದ ಎಲಾನ್ ಮಸ್ಕ್
  • ನಕಲಿ ಖಾತೆಗಳ ಕುರಿತು ಟ್ವಿಟ್ಟರ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ
  • ಡೀಲ್ ಕಂಪ್ಲೀಟ್ ಮಾಡಿಸಿಯೇ ತೀರುತ್ತೇವೆ ಎಂದ ಟ್ವಿಟ್ಟರ್ ಆಡಳಿತ ಮಂಡಳಿ
Twitter ಜೊತೆಗಿನ ಡೀಲ್ ಕ್ಯಾನ್ಸಲ್ ಎಂದ ಎಲಾನ್ ಮಸ್ಕ್, ಇಲ್ಲಿದೆ ಹೊಸ ಅಪ್ಡೇಟ್ title=
Twitter Deal Cancel

Elon Musk Twitter Deal: ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್  ಟ್ವಿಟ್ಟರ್ ಖರೀದಿ ಒಪ್ಪಂದವನ್ನು ರದ್ದುಗೊಳಿಸುತ್ತಿರುವುದಾಗಿ ಟ್ವಿಟರ್ ಮಂಡಳಿಗೆ ತಿಳಿಸಿದ್ದಾರೆ. ಈ ಬೆಳೆವಣಿಗೆಯ ಬಳಿಕ ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು $ 44 ಶತಕೋಟಿಗೆ ಖರೀದಿಸುವ ಅವರ ಒಪ್ಪಂದವು ಅಪಾಯದಲ್ಲಿದೆ ಎಂಬಂತೆ ತೋರುತ್ತದೆ. ಆದರೆ, ಎಲೋನ್ ಮಸ್ಕ್ ಅವರಿಂದ ಪ್ರತಿ ಷೇರಿಗೆ $ 54.20 ಪಡೆದುಕೊಳ್ಳುವ ಸಂಪೂರ್ಣ ಭರವಸೆ ತಮಗಿದೆ ಎಂದು ಟ್ವಿಟರ್ ಮಂಡಳಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿ ಕಾನೂನು ಕ್ರಮ ಕೈಗೊಂಡು ಒಪ್ಪಂದವನ್ನು ಜಾರಿಗೆ ತರುವುದಾಗಿ ಟ್ವಿಟರ್ ಹೇಳಿದೆ.

ಎಲೋನ್ ಮಸ್ಕ್ ವಿರುದ್ಧ ನ್ಯಾಯಾಲಯದ ಕದ ತಟ್ಟಲು ನಿರ್ಧರಿಸಿದ ಟ್ವಿಟ್ಟರ್
ಒಪ್ಪಂದದ ಸಮಯದಲ್ಲಿ ಟ್ವಿಟರ್ ಒಪ್ಪಂದದಲ್ಲಿ ತಪ್ಪಾದ ಮಾಹಿತಿಯನ್ನು ನೀಡಿದೆ ಎಂದು ಎಲೋನ್ ಮಸ್ಕ್ ಪರವಾಗಿ US ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ಗೆ ತಿಳಿಸಿದೆ, ಇದರಿಂದಾಗಿ $ 44 ಶತಕೋಟಿ ಟ್ವಿಟರ್ ಒಪ್ಪಂದವನ್ನು ಮುಕ್ತಾಯಗೊಳಿಸಲಾಗುತ್ತಿದೆ ಮತ್ತು ಎಲೋನ್ ಮಸ್ಕ್ ಈಗ Twitter. ಮಾಲೀಕರಾಗುವುದಿಲ್ಲ ಎಂದಿದೆ. ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು 44 ಶತಕೋಟಿ ಡಾಲರ್ ಅಥವಾ 3.5 ಲಕ್ಷ ಕೋಟಿಗೆ ಖರೀದಿಸುವ ಒಪ್ಪಂದವನ್ನು ಅಂತ್ಯಗೊಳಿಸಿದ್ದಕ್ಕಾಗಿ ಎಲೋನ್ ಮಸ್ಕ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಇದೀಗ ಟ್ವಿಟರ್ ನಿರ್ಧರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್ ಚೇರ್ಮನ್ ಬ್ರೆಟ್ ಟೇಲರ್, ಟ್ವಿಟ್ಟರ್ ಮಂಡಳಿಯು ಎಲೋನ್ ಮಸ್ಕ್ ಜೊತೆಗಿನ ಒಪ್ಪಂದ ಮತ್ತು ಷರತ್ತುಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಇದೀಗ ಟ್ವಿಟರ್, ಎಲೋನ್ ಮಸ್ಕ್ ಜೊತೆಗಿನ ಒಪ್ಪಂದವನ್ನು ಜಾರಿಗೆ ತರಲು ನ್ಯಾಯಾಲಯವನ್ನು ಸಂಪರ್ಕಿಸಲಿದೆ. ಅಂದರೆ 3.5 ಲಕ್ಷ ಕೋಟಿ ಮೌಲ್ಯಕ್ಕೆ ನಾವು ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್‌ಗೆ ಮಾರಾಟ ಮಾಡುತ್ತೇವೆ ಎಂದಿದ್ದಾರೆ. .

ಎಲೋನ್ ಮಸ್ಕ್  ವಾದವೇನು?
SEC ನಲ್ಲಿ, ಎಲೋನ್ ಮಸ್ಕ್ ಮತ್ತು ಅವರ ತಂಡವು ಕಳೆದ 2 ತಿಂಗಳುಗಳಿಂದ ಟ್ವಿಟರ್‌ನಲ್ಲಿರುವ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಸಂಖ್ಯೆ ಮತ್ತು ಆ ಖಾತೆಗಳನ್ನು ಹೇಗೆ ಪತ್ತೆಹಚ್ಚಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಟ್ವಿಟರ್ ಅನ್ನು ನಿರಂತರವಾಗಿ ಸಂಪರ್ಕಿಸುತ್ತಿದೆ ಎಂದು ಎಲೋನ್ ಮಸ್ಕ್‌ ತನ್ನ ವಾದ ಮಂಡಿಸಿದ್ದಾರೆ. ಆದರೆ, ಪ್ರತಿ ಬಾರಿ ಟ್ವಿಟರ್ ಮಾಹಿತಿ ನೀಡುವುದರಿಂದ ದೂರ ಸರಿಯುತ್ತಿದೆ ಮತ್ತು ಅರ್ಧ ಮಾಹಿತಿಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಮರ್ಥ್ಯಕ್ಕೆ ತಕ್ಕಂತೆ ಬದುಕಲು ವಿಫಲವಾಗಿದೆ ಎಂಬ ಆರೋಪಗಳು
ವರದಿಗಳ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾದ ಟ್ವಿಟರ್ ನಡುವಿನ ನಾಟಕೀಯ ಒಪ್ಪಂದದಲ್ಲಿ ಇದು ಹೊಸ ತಿರುವು ಎಂದೇ ಹೇಳಲಾಗುತ್ತಿದೆ. 95 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಸ್ಕ್, ಟ್ವಿಟ್ಟರ್‌ ಆಕ್ರೋಶ ಹೊರಹಾಕಿ, ಮುಕ್ತ ಅಭಿವ್ಯಕ್ತಿಗೆ ವೇದಿಕೆಯಾಗಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬದುಕಲು ಟ್ವಿಟ್ಟರ್ ವಿಫಲವಾಗಿದೆ ಎಂದು ಆರೋಪಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆ ಶುಕ್ರವಾರ, ಟ್ವಿಟರ್‌ನ ಷೇರುಗಳು ಶೇ.5ರಷ್ಟು ಕುಸಿತ ಕಂಡು $36.81 ತಲುಪಿದೆ. ಏತನ್ಮಧ್ಯೆ, ಟೆಸ್ಲಾ ಷೇರುಗಳು ಶೇ.2.5 ರಷ್ಟು ಏರಿಕೆಯಾಗಿ $752.29 ಕ್ಕೆ ತಲುಪಿವೆ.

ಇದನ್ನೂ ಓದಿ-Edible Oil Price Update: ಖಾದ್ಯ ತೈಲ ಬೆಲೆಯನ್ನು ತಕ್ಷಣ ಲೀಟರ್ ಗೆ 15 ರೂ.ಇಳಿಕೆ ಮಾಡಿ, ಮೋದಿ ಸರ್ಕಾರದ ಖಡಕ್ ಆದೇಶ

'ಟ್ವಿಟರ್ ತನ್ನ ಜವಾಬ್ದಾರಿಗಳನ್ನು ನಿಭಾಯಿಸಿಲ್ಲ'
ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಬರೆದ ಪತ್ರದಲ್ಲಿ, ಟ್ವಿಟರ್ ಈ ಒಪ್ಪಂದದ ಬಗ್ಗೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸಿಲ್ಲ ಮತ್ತು ನಕಲಿ ಅಥವಾ ಸ್ಪ್ಯಾಮ್ ಖಾತೆಗಳ ಸಂಖ್ಯೆಯನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂದು ಮಸ್ಕ್ ಹೇಳಿದ್ದಾರೆ.ಎಲೋನ್ ಮಸ್ಕ್ ಟ್ವಿಟರ್ ಒಪ್ಪಂದದ ನಡುವೆ, ಮೈಕ್ರೋ-ಬ್ಲಾಗಿಂಗ್ ಸೈಟ್ Twitter, ಪ್ರತಿದಿನ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕುತ್ತಿದೆ. ಟ್ವಿಟರ್ ಪ್ರತಿದಿನ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಪ್ಯಾಮ್ ಖಾತೆಗಳನ್ನು ಮುಚ್ಚಿಹಾಕಲಾಗುತ್ತಿದೆ. ಬಿಲಿಯನೇರ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರೊಂದಿಗಿನ ಒಪ್ಪಂದವನ್ನು ಮುಂದುವರಿಸುವುದು ಕಂಪನಿಯ ಇದರ ಹಿಂದಿನ ಉದ್ದೇಶವಾಗಿತ್ತು.

ಇದನ್ನೂ ಓದಿ-Nitin Gadkari on Petrol: 'ಮುಂದಿನ ಐದು ವರ್ಷಗಳಲ್ಲಿ ಖಾಲಿಯಾಗಲಿದೆ ಪೆಟ್ರೋಲ್' ಆಘಾತಕಾರಿ ಹೇಳಿಕೆ ನೀಡಿದ ನಿತೀನ್ ಗಡ್ಕರಿ

ಸ್ಪ್ಯಾಮ್ ಖಾತೆಯ ಬಗ್ಗೆ ಮಸ್ಕ್ ಹೇಳಿದ್ದೇನು?
ಟ್ವಿಟರ್ ಫೈಲಿಂಗ್‌ನಲ್ಲಿ ಬಹಿರಂಗಪಡಿಸಿದ ನಕಲಿ ಖಾತೆಗಳ ಸಂಖ್ಯೆಯ ಕನಿಷ್ಠ ನಾಲ್ಕು ಪಟ್ಟು ಹೆಚ್ಚು ಸ್ಪ್ಯಾಮ್ ಅಥವಾ ನಕಲಿ ಖಾತೆಗಳು ವೇದಿಕೆಯಲ್ಲಿ ಸಕ್ರಿಯವಾಗಿವೆ ಎಂದು ಮಸ್ಕ್ ಕಳೆದ ಮೇ ತಿಂಗಳಿನಲ್ಲಿ ಹೇಳಿದ್ದರು. ಅವರು ಹೇಳಿಕೊಂಡದ್ದಕ್ಕಿಂತ ಕೆಟ್ಟ ವೇದಿಕೆಗೆ ನೀವು ಅಷ್ಟೊಂದು ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಮಸ್ಕ್ ಹೇಳಿದ್ದರು. ಟ್ವಿಟರ್‌ನಲ್ಲಿನ ಬಾಟ್‌ಗಳ ಸಂಖ್ಯೆಯನ್ನು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲ ಎಂದು ನನಗೆ ಹೇಳಲಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News