AC-ಕೂಲರ್ & ಫ್ರಿಡ್ಜ್ ಬಳಸಿದ್ರೂ ಬರಲ್ಲ ವಿದ್ಯುತ್ ಬಿಲ್! ಸರ್ಕಾರದ ಈ ಯೋಜನೆಯಿಂದ ದೊಡ್ಡ ಲಾಭ

ಮೇಲ್ಛಾವಣಿ ಸೌರ ಯೋಜನೆ: ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್‌ನ ಟೆನ್ಷನ್ ಕೊನೆಗೊಳ್ಳುತ್ತದೆ. ಏಕೆಂದರೆ ಸಾಮಾನ್ಯ ಮನೆಗಳಲ್ಲಿ ಬಳಸುವ ವಿದ್ಯುತ್ ಬಳಕೆಗೆ ಸಾಕಷ್ಟು ಶಕ್ತಿಯನ್ನು ಇಲ್ಲಿಂದ ಪಡೆಯಬಹುದು. ಸೌರ ಫಲಕಗಳನ್ನು ಅಳವಡಿಸುವವರಿಗೆ ಕೇಂದ್ರ ಸರ್ಕಾರವು ಶೇ.30ರಷ್ಟು ಸಹಾಯಧನವನ್ನು ನೀಡುತ್ತಿದೆ.

Written by - Puttaraj K Alur | Last Updated : Jul 9, 2022, 11:53 AM IST
  • ಸೌರಶಕ್ತಿಯ ಸದುಪಯೋಗಕ್ಕೆ ಸರ್ಕಾರ ಒತ್ತು ನೀಡುತ್ತಿದ್ದು, ಇದಕ್ಕಾಗಿ ಸಹಾಯಧನ ನೀಡಲಾಗುತ್ತಿದೆ
  • ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿದರೆ ನಿಮಗೆ ಶೇ.30ರಷ್ಟು ಸಬ್ಸಿಡಿ ನೀಡಲಾಗುತ್ತದೆ
  • ಪರಿಸರ ಸಂರಕ್ಷಣೆ & ಹಸಿರು ಇಂಧನ ಕೇಂದ್ರೀಕರಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಪ್ರಾರಂಭಿಸಿದೆ
AC-ಕೂಲರ್ & ಫ್ರಿಡ್ಜ್ ಬಳಸಿದ್ರೂ ಬರಲ್ಲ ವಿದ್ಯುತ್ ಬಿಲ್! ಸರ್ಕಾರದ ಈ ಯೋಜನೆಯಿಂದ ದೊಡ್ಡ ಲಾಭ title=
ಮೇಲ್ಛಾವಣಿ ಸೌರ ಯೋಜನೆ

ನವದೆಹಲಿ: ಸಾಂಪ್ರದಾಯಿಕ ಇಂಧನ ಮೂಲಗಳ ಬದಲಿಗೆ ಪರ್ಯಾಯ ಮೂಲಗಳ ಮೇಲಿನ ಅವಲಂಬನೆ ಹೆಚ್ಚಿಸಲು ಕೇಂದ್ರ ಸರ್ಕಾರವು ನಿರಂತರ ಒತ್ತು ನೀಡುತ್ತಿದೆ. ಈ ಅನುಕ್ರಮದಲ್ಲಿ ತೈಲ ಆಮದು ಮಾಡಿಕೊಳ್ಳಲು ವಿದೇಶಗಳ ಮೇಲೆ ಅವಲಂಬಿತವಾಗದಂತೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಸೌರಶಕ್ತಿಯ ಸದುಪಯೋಗಕ್ಕೆ ಸರ್ಕಾರ ಒತ್ತು ನೀಡುತ್ತಿದ್ದು, ಇದಕ್ಕಾಗಿ ಕೇಂದ್ರದಿಂದಲೂ ಸಹಾಯಧನ ನೀಡಲಾಗುತ್ತಿದೆ. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿದರೆ, ನಿಮಗೆ ಶೇ.30ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ ಮನೆಯಲ್ಲಿ ಬಳಸುವ ವಿದ್ಯುತ್‍ಗೆ ನೀವು ಯಾವುದೇ ರೀತಿಯ ಬಿಲ್ ಸಹ ಕಟ್ಟಬೇಕಾಗಿಲ್ಲ.

ಸರ್ಕಾರವೇ ಸಹಾಯಧನ ನೀಡುತ್ತದೆ

ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿದರೆ ನೀವು ವಿದ್ಯುತ್ ಬಿಲ್‌ ಕಟ್ಟುವ ಪ್ರಮೇಯವೇ ಇರುವುದಿಲ್ಲ. ಏಕೆಂದರೆ ಸಾಮಾನ್ಯ ಮನೆಗಳಲ್ಲಿ ಬಳಸಲಾಗುವ ವಿದ್ಯುತ್ ಬಳಕೆಗೆ ಸಾಕಷ್ಟು ಶಕ್ತಿಯನ್ನು ಇಲ್ಲಿಂದ ಪಡೆಯಬಹುದು. ಸೌರ ಫಲಕಗಳನ್ನು ಅಳವಡಿಸುವವರಿಗೆ ಕೇಂದ್ರ ಸರ್ಕಾರವು ರೂಫ್‌ಟಾಪ್ ಸೋಲಾರ್ ಪ್ಲಾಂಟ್‌ಗಳ ಮೇಲೆ ಶೇ.30ರಷ್ಟು ಸಬ್ಸಿಡಿಯನ್ನು ನೀಡುತ್ತಿದೆ. ಇದರಿಂದಾಗಿ ನಿಮ್ಮ 1 ಲಕ್ಷದ ವೆಚ್ಚವು ಸುಮಾರು 70 ಸಾವಿರ ರೂ.ಗಳಿಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Fuel Consumption Standards: ವಾಹನಗಳಿಗೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ತರಲು ಸರ್ಕಾರದ ಚಿಂತನೆ, ಜನರ ಜೇಬಿನ ಮೇಲೆ ನೇರ ಪ್ರಭಾವ

ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲು ಸುಮಾರು 1 ಲಕ್ಷ ರೂ. ವೆಚ್ಚ ಬರುತ್ತದೆ. ಆದರೆ ಸಬ್ಸಿಡಿ ನಂತರ ಕೇವಲ 70 ಸಾವಿರ ರೂ.ಗೆ ಒಂದು ಕಿಲೋ ವ್ಯಾಟ್ ಸೋಲಾರ್ ಪ್ಲಾಂಟ್ ಅಳವಡಿಸಬಹುದು. ಕೇಂದ್ರ ಸರ್ಕಾರದ ಸಹಾಯಧನದ ಹೊರತಾಗಿ ಕೆಲವು ರಾಜ್ಯಗಳು ಇದಕ್ಕೆ ಪ್ರತ್ಯೇಕ ಅನುದಾನವನ್ನು ಸಹ ನೀಡುತ್ತವೆ. ಹೀಗಾಗಿ ಈ 70 ಸಾವಿರ ವೆಚ್ಚವು ಇನ್ನಷ್ಟು ಕಡಿಮೆಯಾಗುತ್ತದೆ.

25 ವರ್ಷ ಟೆನ್ಷನ್ ಮುಕ್ತವಾಗಿರಿ!

ಈ ಯೋಜನೆಯ ಲಾಭ ಪಡೆಯಲು ಮೊದಲು ನೀವು ಸೌರ ಫಲಕಗಳನ್ನು ನೀಡುವ ರಾಜ್ಯ ಸರ್ಕಾರದ ನವೀಕರಿಸಬಹುದಾದ ಇಂಧನ ಪ್ರಾಧಿಕಾರಕ್ಕೆ ಹೋಗಬೇಕು. ದೇಶದ ಪ್ರಮುಖ ನಗರಗಳಲ್ಲಿ ಈ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗಿ ವಿತರಕರ ಮೂಲಕ ಸೌರ ಫಲಕಗಳನ್ನು ಒದಗಿಸಲಾಗುತ್ತದೆ. ಪ್ಯಾನೆಲ್ ಅನ್ನು ಸ್ಥಾಪಿಸಲು ನೀವು ಸಬ್ಸಿಡಿ ಬಯಸಿದರೆ ಅದರ ಫಾರ್ಮ್ ಈ ಕಚೇರಿಗಳಿಂದ ಲಭ್ಯವಿರುತ್ತದೆ. ಒಮ್ಮೆ ಈ ಸೋಲಾರ್ ಪ್ಯಾನೆಲ್‌ಗಳನ್ನು ಮನೆಯಲ್ಲಿ ಅಳವಡಿಸಿಕೊಂಡರೆ ಮುಂದಿನ 25 ವರ್ಷಗಳವರೆಗೆ ನಿಮಗೆ ವಿದ್ಯುತ್‍ನ ಟೆನ್ಷನ್ ಇರುವುದಿಲ್ಲ. ಈ ಅವಧಿಯಲ್ಲಿ ನೀವು ಲಕ್ಷಾಂತರ ರೂ. ವಿದ್ಯುತ್ ಬಿಲ್ ಸಹ ಉಳಿಸಬಹುದು.

ಇದನ್ನೂ ಓದಿ: Petrol Price Update: ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಶೀಘ್ರದಲ್ಲಿಯೇ ಭಾರಿ ಇಳಿಕೆ! ಘೋಷಣೆ ಯಾವಾಗ?

ಈ ಸೌರ ಫಲಕದ ಜೀವಿತಾವಧಿ ಸುಮಾರು 25 ವರ್ಷಗಳು. ಅಂದರೆ ಇವು ದೀರ್ಘಕಾಲದವರೆಗೆ ಬಳಕೆಗೆ ಲಭ್ಯವಿರಲಿದ್ದು, ಕೆಡುವ ಸಾಧ್ಯತೆ ಅತ್ಯಲ್ಪವಾಗಿರುತ್ತದೆ. ಫಲಕಗಳನ್ನು ಸ್ಥಾಪಿಸಿದ ನಂತರ ನೀವು ಸೌರ ಶಕ್ತಿಯ ಮೂಲಕ ವಿದ್ಯುತ್ ಪಡೆಯುತ್ತೀರಿ. ಈ ಸೌರ ಫಲಕವನ್ನು ನಿಮ್ಮ ಮೇಲ್ಚಾವಣಿಯ ಮೇಲೆ ಸ್ಥಾಪಿಸುವುದರಿಂದ ಅದರ ನಿರ್ವಹಣೆಯು ಸುಲಭವಾಗುತ್ತದೆ. ಈ ಫಲಕಗಳು 1 kW ನಿಂದ 5 kW ವರೆಗೆ ಸಾಮರ್ಥ್ಯ ಹೊಂದಿವೆ. ಇದನ್ನು ಸ್ಥಾಪಿಸಿದ ನಂತರ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಹಾಗೆಯೇ ನೀವು ಹಸಿರು ಶಕ್ತಿಯನ್ನು ಬಳಸಿಕೊಂಡು ಮಾಲಿನ್ಯ ಕಡಿಮೆ ಮಾಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬಹುದು.

ಕೂಲರ್-ಎಸಿ ಎಲ್ಲವೂ ಕೆಲಸ ಮಾಡುತ್ತವೆ

ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನವನ್ನು ಕೇಂದ್ರೀಕರಿಸುವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಸೌರ ಫಲಕಗಳಲ್ಲಿನ ನಿರ್ವಹಣಾ ವೆಚ್ಚವು ಅತ್ಯಲ್ಪವಾಗಿದೆ. ನೀವು ಪ್ರತಿ 10 ವರ್ಷಗಳಿಗೊಮ್ಮೆ ಬ್ಯಾಟರಿಯನ್ನು ಬದಲಾಯಿಸಬೇಕು. ಇದರ ಬ್ಯಾಟರಿ ಸುಮಾರು 20 ಸಾವಿರ ರೂ.ಗೆ ಸಿಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಈ ಸೌರ ಫಲಕವನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು.

ಸೋಲಾರ್ ಪ್ಯಾನೆಲ್‍ನ ವಿದ್ಯುತ್ತಿನಿಂದಲೇ ಮನೆಯಲ್ಲಿ ಟ್ಯೂಬ್‍ಲೈಟ್‍ನಿಂದ ಹಿಡಿದು ಫ್ಯಾನ್, ಫ್ರಿಡ್ಜ್‍ನಿಂದ ಹಿಡಿದು ಟಿವಿ ಎಲ್ಲವೂ ನಡೆಯುತ್ತವೆ. ಇದಕ್ಕಾಗಿ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಫಲಕ ಸಾಕು. ನೀವು ಮನೆಯಲ್ಲಿ ACಯನ್ನು ಚಲಾಯಿಸಲು ಬಯಸಿದರೆ, 2 kWನ ಪ್ಯಾನಲ್ ಅಗತ್ಯವಿರುತ್ತದೆ. ಈ ರೀತಿಯ ದೊಡ್ಡ ವಿದ್ಯುತ್ ಉಪಕರಣವನ್ನು ಚಲಾಯಿಸಲು ಸಾಮರ್ಥ್ಯಕ್ಕೆ ಅನುಗುಣವಾಗಿ ವಿಭಿನ್ನ ಫಲಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News