Anant Ambani Net Worth : ಅನಂತ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಪುತ್ರ. ಸದ್ಯಕ್ಕೆ ಅನಂತ್ ಅಂಬಾನಿ ವಿವಾಹ ವಿಚಾರ ಭಾರೀ ಸುದ್ದಿಯಲ್ಲಿದೆ. ಮುಖೇಶ್ ಅಂಬಾನಿ ರಿಲಯನ್ಸ್ ಗ್ರೂಪ್ ಮೂಲಕ 500 ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುತ್ತಿದ್ದಾರೆ.  US ಡಾಲರ್ ಲೆಕ್ಕದಲ್ಲಿ ಮುಖೇಶ್ ಅಂಬಾನಿ ಆಸ್ತಿಯನ್ನು ಲೆಕ್ಕ ಹಾಕುವುದಾದರೆ ಅದು ಸುಮಾರು 111 ಬಿಲಿಯನ್ ಮೀರಿದೆ ಎಂದು  ಹೇಳಲಾಗುತ್ತದೆ.ಅಂದರೆ ಭಾರತೀಯ ಲೆಕ್ಕದಲ್ಲಿ 91 ಸಾವಿರ ಕೋಟಿಗೂ ಹೆಚ್ಚು. ಇದೀಗ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತನ್ನ ದೀರ್ಘಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅನ್ನು ಮದುವೆಯಾಗಲು ಸಿದ್ದತೆ ನಡೆಸಿದ್ದಾರೆ (Ananth Ambani Wedding). ವಿವಾಹ ಪೂರ್ವ ಸಮಾರಂಭಗಳು ಕೂಡಾ ಈಗಾಗಲೇ ಆರಂಭವಾಗಿವೆ. ಅನಂತ್ ಅಂಬಾನಿ ಮದುವೆ ಸದ್ಯಕ್ಕೆ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗುತ್ತಿರುವ ವಿಷಯವಾಗಿದೆ. ಹಾಗಿದ್ದರೆ ಅನಂತ್ ಅಂಬಾನಿ ಎಷ್ಟು ಕೋಟಿಯ ಒಡೆಯ. ಅವರ ಒಟ್ಟು ಆಸ್ತಿಯೆಷ್ಟು ಎನ್ನುವ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಅನಂತ್ ಅಂಬಾನಿ : 
ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ. ಇವರ ಜನನ ಏಪ್ರಿಲ್ 10,  1995 ರಂದು ಮುಂಬೈನಲ್ಲಿ ಆಯಿತು. ಅಮೆರಿಕಾದ ಬ್ರೌನ್ ಯೂನಿವರ್ಸಿಟಿಯಲ್ಲಿ ಅನಂತ್ ತಮ್ಮ  ವ್ಯಾಸಾಂಗ ಪೂರೈಸಿದ್ದಾರೆ. ಫಿಟ್‌ನೆಸ್ ಬಗ್ಗೆಯೂ ಕಾಳಜಿ ಹೊಂದಿದ್ದ ಅನಂತ್ 18 ತಿಂಗಳಲ್ಲಿ 108 ಕೆಜಿಯಿದ್ದ ದೇಹ ತೂಕವನ್ನು ಇಳಿಸಿಕೊಂಡು ಫುಲ್ ಫಿಟ್ ಆಗಿದ್ದರು. ಆದರೆ, ಅವರಿಗೆ ಅಸ್ತಮಾ ಸಮಸ್ಯೆ ಇದ್ದು, ಔಷಧ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರ ದೇಹದ ತೂಕ ಮತ್ತೆ ಹೆಚ್ಚಾಯಿತು ಎಂದು ಹೇಳಲಾಗುತ್ತಿದೆ (Ananth Ambani Weight).  


ಇದನ್ನೂ ಓದಿ : Stock Market Updates: ಹೂಡಿಕೆದಾರರಿಗೆ ಜಾಕ್‌ಪಾಟ್; 6 ಗಂಟೆಗಳಲ್ಲಿ ₹ 4.16 ಲಕ್ಷ ಕೋಟಿ ಗಳಿಕೆ!


ರಾಧಿಕಾ ಮರ್ಚಂಡ್ ಕೈ ಹಿಡಿಯಲಿರುವ ಅನಂತ್ :
ಮುಕೇಶ್ ಅಂಬಾನಿಯಂತೆ , ವೀರೇನ್ ಮರ್ಚೆಂಟ್ ಕೂಡಾ ದೊಡ್ಡ ಉದ್ಯಮಿ. ಅವರು ಎನ್ಕೋರ್ ಹೆಲ್ತ್‌ಕೇರ್‌ನ ಒಡೆಯ. ಅಷ್ಟೇ ಅಲ್ಲ, ಸ್ಟೀಲ್ ಕಂಪನಿಯನ್ನೂ ನಡೆಸುತ್ತಿದ್ದಾರೆ. ಅನಂತ್ ಅಂಬಾನಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant) ಅವರನ್ನು ಜುಲೈ 12 ರಂದು ವರಿಸಲಿದ್ದಾರೆ. ಅನಂತ್ ಮತ್ತು ರಾಧಿಕಾ ಇಬ್ಬರೂ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರು. ಈಗಾಗಲೇ ಇವರಿಬ್ಬರ ಮದುವೆಯ ಪೂರ್ವ ಸಂಭ್ರಮ ಶುರುವಾಗಿದೆ. 


ಅನಂತ್ ಅಂಬಾನಿ ನಿವ್ವಳ ಮೌಲ್ಯ:
ಅನಂತ್ ಅಂಬಾನಿ ಜಿಯೋ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಅವರು ಮೇ 2022 ರಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಗ್ರೂಪ್‌ನ ಸದಸ್ಯರಾದರು. ಸ್ವಂತವಾಗಿ ನಡೆಸುತ್ತಿರುವ ಕಂಪನಿಗಳ ಹೊರತಾಗಿ, ಅನಂತ್ ಅವರ ಕುಟುಂಬದ ವ್ಯವಹಾರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.ಅಂಕಿ ಅಂಶಗಳ ಪ್ರಕಾರ ಅನಂತ್ ಅಂಬಾನಿ ಆಸ್ತಿ ಮೌಲ್ಯ ಬರೋಬ್ಬರಿ 33 ಸಾವಿರ ಕೋಟಿಗೂ ಹೆಚ್ಚು ಎನ್ನಲಾಗುತ್ತಿದೆ (Ananth Ambani Net worth).


ಇದನ್ನೂ ಓದಿ : Aadhaar History: ಪ್ರತಿಯೊಬ್ಬರೂ ಆಧಾರ್ ಇತಿಹಾಸವನ್ನು ನೋಡಿ ತಿಳಿಯಲೇಬೇಕು..! ಏಕೆಂದರೆ 


ಮದುವೆಯ ಬಜೆಟ್ ಎಷ್ಟು ? :
ರಾಧಿಕಾ ಮರ್ಚೆಂಟ್-ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಜಾಮ್‌ನಗರದ ಜಗವತ್‌ನಲ್ಲಿ ನಡೆಯುತ್ತವೆ (Ananth Ambani pre wedding events). ಹಾಲಿವುಡ್‌ನಿಂದ ಬಾಲಿವುಡ್‌ನ ಅನೇಕ ಸ್ಕ್ರೀನ್ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಗಳಿಗಾಗಿ ಅಂಬಾನಿ ಕುಟುಂಬ ಹಣದ ಹೊಳೆಯನ್ನೇ ಹರಿಸುತ್ತಿದೆ. ಸುಮಾರು 1000 ಕೋಟಿ ವೆಚ್ಚದಲ್ಲಿ ಈ ಮದುವೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ